Solan, Himachal Pradesh: ಭಾರತದಲ್ಲಿ ನಿಗೂಢ ದೇವಾಲಯಗಳ ಕೊರತೆ ಇಲ್ಲ. ದೇಶದ ಮೂಲೆ ಮೂಲೆಯಲ್ಲಿ ಯಾವುದಾದರೊಂದು ದೇವರ ದೇವಸ್ಥಾನವನ್ನು ನೀವು ಕಾಣಬಹುದಾಗಿದೆ. ಈ ದೇವಾಲಯಗಳು ಹಲವು ಪವಾಡ ಹಾಗೂ ನಿಗೂಢ ಸಂಗತಿಗಳನ್ನು ಬಚ್ಚಿಟ್ಟುಕೊಂಡಿವೆ. ಅನೇಕ ದೇವಾಲಯಗಳ ಹಂದಿನ ರಹಸ್ಯ ಇಂದಿಗೂ ಕೂಡ ಯಕ್ಷಪ್ರಶ್ನೆಯಾಗಿವೆ . ಇಂತಹುದೇ ಒಂದು ದೇವಾಲಯದ ಬಗ್ಗೆ ಇಂದು ನಾವು ನಿಮಗೆ ಹೇಳಲು ಹೊರಟಿದ್ದು, ಅದೊಂದು ನಿಗೂಢ ದೇವಸ್ಥಾನವಾಗಿದೆ. ಈ ದೇವಸ್ಥಾನದ ಗೋಡೆಗಳಲ್ಲಿರುವ ಬಂಡೆಗಳನ್ನು ಕಲ್ಲುಗಳಿಂದ ತಟ್ಟಿದಾಗ ಅವುಗಳಿಂದ ದಮರುಗದ ನಾದ ಹೊರಹೊಮ್ಮುತ್ತದೆ ಎಂದು ನಂಬಲಾಗಿದೆ. ಇದು ಶಿವಾಲಯವಾಗಿದ್ದು, ಇದು ಏಷ್ಯಾದ ಅತಿ ಎತ್ತರದಲ್ಲಿರುವ ಶಿವಾಲಯ ಎಂಬುದು ಇಲ್ಲಿ ವಿಶೇಷ.
11 ಅಡಿ ಎತ್ತರದ ವಿಶಾಲ ಚಿನ್ನದ ಕಳಸ
ಈ ವಿಶಾಲಾಕೃತಿಯ ದೇವಸ್ಥಾನದ ನಾಲ್ಕು ಕಡೆಗಳಲ್ಲಿ ದೇವಿ-ದೇವರ ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಈ ದೇವಸ್ಥಾನದ ಒಳಗೆ ಸ್ಫಟಿಕ ಮಣಿ ಶಿವಲಿಂಗ ವಿರಾಜಮಾನವಾಗಿದೆ. ಇದಲ್ಲದೆ ಈ ದೇವಸ್ಥಾನದಲ್ಲಿ ಮಾತೆ ಪಾರ್ವತಿಯ ಮೂರ್ತಿಯನ್ನು ಕೂಡ ಪ್ರತಿಷ್ಠಾಪಿಸಲಾಗಿದೆ. ಈ ದೇವಸ್ಥಾನದ ವಿಶೇಷತೆ ಎಂದರೆ, ಈ ದೇವಸ್ಥಾನದ ಮೇಲ್ಭಾಗದಲ್ಲಿ 11 ಅಡಿ ಎತ್ತರದ ಒಂದು ವಿಶಾಲ ಭಿನ್ನದ ಕಳಸ ಸ್ಥಾಪಿಸಲಾಗಿದೆ.
ಇದನ್ನು ಓದಿ- ವಿಸ್ಮಯ ತಾಣ ಈ ಶಿವ ದೇಗುಲ, ನಿತ್ಯ 3 ಬಾರಿ ಬಣ್ಣ ಬದಲಾಯಿಸುತ್ತದೆ ಇಲ್ಲಿನ ಶಿವಲಿಂಗ
ಸ್ವಾಮಿ ಕೃಷ್ಣಾನಂದ ಪರಮಹಂಸರಿಂದ ಶಂಕುಸ್ಥಾಪನೆ
ಪೌರಾಣಿಕ ಕಾಲದಲ್ಲಿ ಶಿವ ಅಲ್ಲಿಗೆ ಭೇಟಿ ನೀಡಿದ ಎಂಬುದು ಇಲ್ಲಿನ ಐತಿಹ್ಯ ಹಾಗೂ ಅಲ್ಲಿಯೇ ಕೆಲ ಕಾಲ ವಾಸವಾಗಿದ್ದ. ಇದಾದ ಬಳಿಕ 1950 ದಶಕದಲ್ಲಿ ಸ್ವಾಮಿ ಕೃಷ್ಣಾನಂದ ಪರಮಹಂಸ ಹೆಸರಿನ ಸ್ವಾಮೀಜಿಯೊಬ್ಬರು ಅಲ್ಲಿಗೆ ಭೇಟಿ ನೀಡಿದ್ದರು ಎನ್ನಲಾಗಿದೆ. ಸ್ವಾಮೀಜಿ ಅವರು ತಮ್ಮ ಮಾರ್ಗದರ್ಶನದಲ್ಲಿ ಸ್ಪಟಿಕ ಸ್ವರೂಪಿ ಶಿವಲಿಂಗ ದೇವಸ್ಥಾನದ ನಿರ್ಮಾಣ ಕಾರ್ಯ ಆರಂಭಿಸಿದರು. 1974ರಲ್ಲಿ ಅವರು ಈ ದೇವಸ್ಥಾನದ ಶಂಕುಸ್ಥಾಪನೆ ನೆರವೇರಿಸಿದ್ದರು. ಬಳಿಕ 1983 ಸ್ವಾಮೀಜಿ ಅವರು ಸಮಾಧಿ ಸ್ವೀಕರಿಸಿದರು. ಆದರೆ, ಈ ದೇವಸ್ಥಾನದ ಕಾರ್ಯ ಪೂರ್ಣಗೊಂಡಿತು.
ಇದನ್ನು ಓದಿ- ಈ Templeನಲ್ಲಿ ರಾತ್ರಿ ತಂಗುವವರು ಕಲ್ಲಾಗುತ್ತಾರಂತೆ! ಇಲ್ಲಿದೆ ಭಯಾನಕ ರಹಸ್ಯ
ವಿದೇಶಗಳಿಂದ ಭಕ್ತರು ಕಾಣಿಕೆ ನೀಡುತ್ತಾರೆ
ಈ ವಿಶಾಲ ಸ್ಫಟಿಕ ಶಿವಲಿಂಗ ದೇವಸ್ಥಾನದ ಸಂಪೂರ್ಣ ಕಾರ್ಯ ಪೂರ್ಣಗೊಳ್ಳಲು 39 ವರ್ಷ ಕಾಲಾವಕಾಶ ತಗುಲಿದೆ. ಕೋಟ್ಯಾಂತರ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಈ ದೇವಸ್ಥಾನಕ್ಕೆ ದೇಶ-ವಿದೇಶಗಳಿಂದ ಭಕ್ತಾದಿಗಳು ಕಾಣಿಕೆ ನೀಡಿದ್ದಾರೆ. ಇದೆ ಕಾರಣದಿಂದ ಈ ದೇವಸ್ಥಾನ ನಿರ್ಮಾಣಕ್ಕೆ ಮೂರು ದಶಕಗಳ ಕಾಲಾವಕಾಶ ಬೇಕಾಯಿತು.
ಇದನ್ನು ಓದಿ- ಈ ಗುಹೆಯಲ್ಲಿ ಈಗಲೂ ಇದೆಯಂತೆ ಗಣೇಶನ ತಲೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.