Vastu Tips For Keeping Tulsi Plant: ತುಳಸಿ ಸಸ್ಯವನ್ನು ಹಿಂದೂ ಧರ್ಮದಲ್ಲಿ (Hindu Religion)ಅತ್ಯಂತ ಪವಿತ್ರ ಮತ್ತು ಪ್ರಮುಖವೆಂದು ಪರಿಗಣಿಸಲಾಗಿದೆ. ತುಳಸಿಯನ್ನು ದೇವಿ ಲಕ್ಷ್ಮಿಯ ರೂಪವಾಗಿದೆ ಮತ್ತು ತುಳಸಿ (Tulsi) ನೆಲೆಸಿರುವ ಜಾಗದಲ್ಲಿ ದೇವಿ ಲಕ್ಷ್ಮಿ (Goddess Lakshmi) ಕೂಡ ನೆಲೆಸುತ್ತಾಳೆ ಎನ್ನಲಾಗುತ್ತದೆ. ಇದಲ್ಲದೆ, ವೈಜ್ಞಾನಿಕ ದೃಷ್ಟಿಕೋನದಿಂದ, ತುಳಸಿ ಸಸ್ಯವು ಸುತ್ತಮುತ್ತಲಿನ ಗಾಳಿಯನ್ನು ಶುದ್ಧೀಕರಿಸುತ್ತದೆ, ಪರಿಸರದಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ. ವಾಸ್ತು ಶಾಸ್ತ್ರದಲ್ಲಿಯೂ (Vastu Shastra) ಸಹ, ತುಳಸಿ ಸಸ್ಯವು ಅನೇಕ ವಿಧದ ವಾಸ್ತು ದೋಷಗಳನ್ನು ತೆಗೆದುಹಾಕಲು ಅತ್ಯಂತ ಪರಿಣಾಮಕಾರಿ ಪರಿಹಾರವಾಗಿದೆ (Tulsi Plant Remedies) ಎಂದು ವಿವರಿಸಲಾಗಿದೆ.
ತುಳಸಿ ಗಿಡವನ್ನು ಸರಿಯಾದ ಜಾಗದಲ್ಲಿ ನೆಡಿ
ತುಳಸಿ ಗಿಡವನ್ನು ಸಾಮಾನ್ಯವಾಗಿ ಮನೆಯ ಮುಖ್ಯ ದ್ವಾರದಲ್ಲಿ ನೆಡಲಾಗುತ್ತದೆ. ಆದರೆ ಅದನ್ನು ಮನೆಯ ಕೆಲ ವಿಶೇಷ ಸ್ಥಳಗಳಲ್ಲಿಯೂ ಕೂಡ ನೀವು ಇರಿಸಬಹುದು. ವಾಸ್ತು ಶಾಸ್ತ್ರದಲ್ಲಿ, ಅಂತಹ ಕೆಲ ವಿಶೇಷ ಸ್ಥಳಗಳ ಕುರಿತು ಉಲ್ಲೇಖಿಸಲಾಗಿದೆ. ಅಲ್ಲಿ ತುಳಸಿ ಇಡುವುದರಿಂದ ಅನೇಕ ಸಮಸ್ಯೆಗಳನ್ನು ಪರಿಹಾರವಾಗುತ್ತವೆ ಎನ್ನಲಾಗಿದೆ.
ಮನೆಯಲ್ಲಿ ಜಗಳ ಕೊನೆಗಾಣಿಸಲು : ಮನೆಯಲ್ಲಿ ಅನಾವಶ್ಯಕ ಜಗಳವಾಗುತ್ತಿದ್ದರೆ ಅಡುಗೆ ಮನೆಯ ಬಳಿ ತುಳಸಿ ಗಿಡವನ್ನು ಇಡಿ. ಇದರಿಂದ ಮನೆಯಲ್ಲಿನ ಜಗಳಗಳು ಕೊನೆಗೊಳ್ಳುತ್ತವೆ.
ವಾಸ್ತು ದೋಷ ನಿವಾರಣೆಗೆ: ಮನೆಯಲ್ಲಿ ಹಲವು ರೀತಿಯ ವಾಸ್ತು ದೋಷಗಳಿದ್ದರೆ ತುಳಸಿ ಗಿಡವನ್ನು ಆಗ್ನೇಯದಿಂದ ವಾಯುವ್ಯದವರೆಗೆ ಎಲ್ಲಿ ಬೇಕಾದರೂ ಇಡಿ. ಇದು ವಾಸ್ತು ದೋಷಗಳ ಪ್ರಭಾವ ಕಡಿಮೆ ಮಾಡುತ್ತದೆ.
ಮಗುವಿನ ಮೊಂಡುತನ ಹೋಗಲಾಡಿಸಲು: ಮಕ್ಕಳು ಹೆಚ್ಚು ಮೊಂಡುತನ ಮಾಡುತ್ತಿದ್ದರೆ ಪೂರ್ವ ದಿಕ್ಕಿನ ಯಾವುದೇ ಕಿಟಕಿಯಲ್ಲಿ ತುಳಸಿ ಗಿಡವನ್ನು ಇರಿಸಿ.
ಮದುವೆಯಲ್ಲಾಗುತ್ತಿರುವ ವಿಳಂಬವನ್ನು ತಪ್ಪಿಸಲು: ಮದುವೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು, ತುಳಸಿಗೆ ಸಂಬಂಧಿಸಿದ ಅನೇಕ ಪರಿಹಾರಗಳನ್ನು ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಮನೆಯ ಮಗಳ ಮದುವೆಗೆ ವಿಳಂಬವಾಗುತ್ತಿದ್ದರೆ, ಆಗ್ನೇಯದಿಂದ ವಾಯುವ್ಯದವರೆಗೆ ತುಳಸಿ ಗಿಡವನ್ನು ಇಟ್ಟು ಮಗಳಿಗೆ ಅದಕ್ಕೆ ಪ್ರತಿದಿನ ನೀರು ಹಾಕಲು ಹೇಳಿ. ಶೀಘ್ರದಲ್ಲಿಯೇ ಕಂಕಣ ಭಾಗ್ಯ ಕೂಡಿ ಬರಲಿದೆ. ಭಾನುವಾರ ಮತ್ತು ಏಕಾದಶಿಯಂದು ತುಳಸಿಗೆ ನೀರನ್ನು ಅರ್ಪಿಸಬೇಡಿ ಎಂಬುದನ್ನು ನೆನಪಿನಲ್ಲಿಡಿ.
ಹಣದ (Money Tips)ಮುಗ್ಗಟ್ಟಿಗೆ ನಿವಾರಣೆ: ಹಣಕಾಸಿನ ಮುಗ್ಗಟ್ಟು ನಿವಾರಣೆಗಾಗಿ ತುಳಸಿ ಗಿಡವನ್ನು ಮನೆಯ ಈಶಾನ್ಯ ಮೂಲೆಯಲ್ಲಿ ಇಡಿ. ಅಲ್ಲದೆ, ಪ್ರತಿದಿನ ಸಂಜೆ ತುಳಸಿ ಗಿಡದ ಬುಡದಲ್ಲಿ ದೀಪ ಬೆಳಗಿ. ಕೆಲವೇ ದಿನಗಳಲ್ಲಿ ವ್ಯತ್ಯಾಸ ಕಂಡುಬರಲಿದೆ.
ಇದನ್ನೂ ಓದಿ-Guru Rashi Parivartan 2021: ಈ 4 ರಾಶಿಯವರು ಶೀಘ್ರವೇ ಶುಭ ಸುದ್ದಿ ಪಡೆಯುತ್ತಾರೆ, ಜೀವನವೇ ಬದಲಾಗಲಿದೆ
ಈ ದಿಕ್ಕಿನಲ್ಲಿ ತುಳಸಿಯನ್ನು ನೆಡಬೇಡಿ
ತುಳಸಿ ಗಿಡವನ್ನು ಮನೆಯಲ್ಲಿ ನೆಡುವುದು ತುಂಬಾ ಶುಭ. ತುಳಸಿ ಸಸಿಯನ್ನು ಮುಖ್ಯ ಬಾಗಿಲಿನ ಎದುರು ಇಡುವುದರಿಂದ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ. ಆದರೆ ತುಳಸಿ ಗಿಡವನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ ಇಡಬೇಡಿ.. ಹಾಗೆ ಮಾಡುವುದರಿಂದ ಅನೇಕ ಹಾನಿ ಉಂಟಾಗುತ್ತದೆ.
ಇದನ್ನೂ ಓದಿ-ಈ 5 ವಸ್ತುಗಳು ದೇಸಿ ತುಪ್ಪದ ಪ್ರಯೋಜನವನ್ನು ದ್ವಿಗುಣಗೊಳಿಸುತ್ತವೆ: ಸೇವಿಸುವ ಸರಿವಿಧಾನ ತಿಳಿಯಿರಿ
(Disclaimer: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಇದನ್ನೂ ಓದಿ-Partial Lunar Eclipse 2021: ನವೆಂಬರ್ 19ಕ್ಕೆ ವರ್ಷದ ಕೊನೆಯ ಚಂದ್ರಗ್ರಹಣ, 600 ವರ್ಷಗಳ ಬಳಿಕ ಈ ಯೋಗ ಸೃಷ್ಟಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.