ಯುಕೆ ಹೊಸ ಪದವಿ ಯೋಜನೆಯಿಂದ ಭಾರತ ಹೊರಕ್ಕೆ! ಹಿನ್ನಡೆ ಬಗ್ಗೆ ತಜ್ಞರು ಹೇಳಿದ್ದೇನು?

ಹೈ ಪೊಟೆನ್ಶಿಯಲ್ ಇಂಡಿವಿಜುವಲ್ ವೀಸಾವು ಆರಂಭಿಕ ವೃತ್ತಿಜೀವನದ ಹಂತದ ಪದವೀಧರರಿಗೆ ಎರಡು ವರ್ಷಗಳ ಅವಧಿಗೆ ನೀಡುವ ಯುಕೆ ವರ್ಕಿಂಗ್‌ ವೀಸಾ (ಪಿಎಚ್‌ಡಿ ಹೊಂದಿರುವವರಿಗೆ ಮೂರು ವರ್ಷಗಳು) ಆಗಿದೆ. ಪದವೀಧರರು ತಮ್ಮ ಅರ್ಜಿಯ ಮೊದಲು ಐದು ವರ್ಷಗಳಲ್ಲಿ ಅರ್ಹ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.

Written by - Bhavishya Shetty | Last Updated : Jun 2, 2022, 06:20 PM IST
  • 50 ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯಗಳ ಪಟ್ಟಿ ಬಿಡುಗಡೆ
  • ಯುಕೆ ಹೊಸ ಪದವಿ ಯೋಜನೆಯಿಂದ ಭಾರತದ ಹೆಸರು ಇಲ್ಲ
  • ಈ ಬಗ್ಗೆ ತಜ್ಞರಿಂದ ಅಸಮಾಧಾನ ವ್ಯಕ್ತ
ಯುಕೆ ಹೊಸ ಪದವಿ ಯೋಜನೆಯಿಂದ ಭಾರತ ಹೊರಕ್ಕೆ! ಹಿನ್ನಡೆ ಬಗ್ಗೆ ತಜ್ಞರು ಹೇಳಿದ್ದೇನು? title=
new graduate scheme

ಅತ್ಯಂತ ಪ್ರತಿಷ್ಠಿತ ಸಾಗರೋತ್ತರ ವಿಶ್ವವಿದ್ಯಾನಿಲಯಗಳಿಂದ ಹೆಚ್ಚು ನುರಿತ ಪದವೀಧರರನ್ನು ಬ್ರಿಟನ್‌ನಲ್ಲಿ ಕೆಲಸ ಮಾಡಲು ಆಕರ್ಷಿಸಲು ಬ್ರೆಕ್ಸಿಟ್‌ ಯೋಜನೆಗಳನ್ನು ಜಾರಿಗೆ ತಂದಿತ್ತು. ಆದರೆ ಇದೀಗ ಈ ಯೋಜನೆಯಿಂದ ಭಾರತದ ಎಲ್ಲಾ ವಿಶ್ವವಿದ್ಯಾಲಯಗಳನ್ನು ಹೊರಗಿಟ್ಟಿದೆ. ಸೋಮವಾರ ಬ್ರಿಟನ್‌ನಲ್ಲಿ ಆರಂಭಿಸಲಾದ "ಹೈ ಪೊಟೆನ್ಶಿಯಲ್ ಇಂಡಿವಿಜುವಲ್ (HPI)" ವೀಸಾಕ್ಕೆ ಪದವೀಧರರು ಅರ್ಜಿ ಸಲ್ಲಿಸಬಹುದಾದ ಟಾಪ್ 50 ಅಂತರಾಷ್ಟ್ರೀಯ ವಿಶ್ವವಿದ್ಯಾನಿಲಯಗಳ ಪಟ್ಟಿಯನ್ನು ಬಿಡುಗಡೆಗೊಳಿಸಿತ್ತು. ಆದರೆ ಭಾರತದ ಯಾವುದೇ ವಿಶ್ವವಿದ್ಯಾನಿಲಯಗಳ ಹೆಸರನ್ನು ಉಲ್ಲೇಖಿಸಲಾಗಿಲ್ಲ. 

ಇದನ್ನು ಓದಿ: ʼಭಾರತೀಯ-ಅನಿವಾಸಿ ಭಾರತೀಯʼ: ಈ ಪೌರತ್ವಗಳ ವಿಭಿನ್ನತೆ ಏನು ಗೊತ್ತಾ?

ಹೈ ಪೊಟೆನ್ಶಿಯಲ್ ಇಂಡಿವಿಜುವಲ್ ವೀಸಾವು ಆರಂಭಿಕ ವೃತ್ತಿಜೀವನದ ಹಂತದ ಪದವೀಧರರಿಗೆ ಎರಡು ವರ್ಷಗಳ ಅವಧಿಗೆ ನೀಡುವ ಯುಕೆ ವರ್ಕಿಂಗ್‌ ವೀಸಾ (ಪಿಎಚ್‌ಡಿ ಹೊಂದಿರುವವರಿಗೆ ಮೂರು ವರ್ಷಗಳು) ಆಗಿದೆ. ಪದವೀಧರರು ತಮ್ಮ ಅರ್ಜಿಯ ಮೊದಲು ಐದು ವರ್ಷಗಳಲ್ಲಿ ಅರ್ಹ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.

ಅರ್ಹತೆ ಪಡೆಯಲು, ಕ್ಯೂಎಸ್‌ ಟೈಮ್ಸ್ ಹೈಯರ್ ಎಜುಕೇಶನ್ ಮತ್ತು ವಿಶ್ವ ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ಶ್ರೇಯಾಂಕದಿಂದ ವಾರ್ಷಿಕವಾಗಿ ನಿರ್ಮಿಸಲಾದ ಮೂರು ಶ್ರೇಯಾಂಕ ಪಟ್ಟಿಗಳಲ್ಲಿ ಒಂದು ಸಂಸ್ಥೆಯು ಅಗ್ರ 50 ರಲ್ಲಿ (ಕನಿಷ್ಠ ಎರಡರಲ್ಲಿ) ಕಾಣಿಸಿಕೊಂಡಿರಬೇಕು. ಈ ಯೋಜನೆಯು ರಾಷ್ಟ್ರೀಯತೆಯನ್ನು ಲೆಕ್ಕಿಸದೆ ಯಾರಿಗಾದರೂ ಮುಕ್ತವಾಗಿರುತ್ತದೆ. ಇದೀಗ ಅರ್ಹ ವಿಶ್ವವಿದ್ಯಾನಿಲಯಗಳ ಪಟ್ಟಿಗಳು ಆಫ್ರಿಕಾ, ಲ್ಯಾಟಿನ್ ಅಮೇರಿಕಾ ಮತ್ತು ದಕ್ಷಿಣ ಏಷ್ಯಾದ ಎಲ್ಲಾ ವಿಶ್ವವಿದ್ಯಾಲಯಗಳನ್ನು ಹೊರತುಪಡಿಸಿವೆ. ಇತ್ತೀಚಿನ ಪಟ್ಟಿಯು ಹಾರ್ವರ್ಡ್ ಮತ್ತು ಯೇಲ್ ಸೇರಿದಂತೆ ಯುಎಸ್‌ಎಯಲ್ಲಿ ಹೆಚ್ಚಾಗಿ ನೆಲೆಗೊಂಡಿರುವ ವಿಶ್ವವಿದ್ಯಾನಿಲಯಗಳಿಗೆ ಒತ್ತು ನೀಡಿವೆ. 

ಬೆಂಗಳೂರು ವಿಶ್ವವಿದ್ಯಾನಿಲಯದ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮ್ಯಾನುಫ್ಯಾಕ್ಚರಿಂಗ್ ಇಂಜಿನಿಯರಿಂಗ್ ಪದವಿ ಪಡೆದು ಲಂಡನ್‌ನಲ್ಲಿ ಎಂಟರ್‌ಪ್ರೈಸ್ ಡೇಟಾ ಆರ್ಕಿಟೆಕ್ಟ್ ಆಗಿ ಕೆಲಸ ಮಾಡುತ್ತಿರುವ ಗಣಪತಿ ಭಟ್ ಈ ಬಗ್ಗೆ ಮಾತನಾಡಿದ್ದಾರೆ: “ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವ ಒಂದೇ ಒಂದು ಭಾರತೀಯ ವಿಶ್ವವಿದ್ಯಾಲಯ ಅಥವಾ ಐಐಟಿ ಪಟ್ಟಿಯಲ್ಲಿ ಸ್ಥಾನ ಪಡೆಯದೇ ಇರುವುದು ಆಶ್ಚರ್ಯಕರವಾಗಿದೆ. ಐಐಟಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ಇದು ಉನ್ನತ ಶಿಕ್ಷಣವನ್ನು ಅಂತರರಾಷ್ಟ್ರೀಯಗೊಳಿಸುವ ಭಾರತದ ಯೋಜನೆಗಳಿಗೆ ಪ್ರಯೋಜನವಾಗುವುದಿಲ್ಲ" ಎಂದು ಹೇಳಿದ್ದಾರೆ. 

ಇದನ್ನು ಓದಿ: ಭಾರತ-ಸಿಂಗಾಪುರ ಮಧ್ಯೆ ಏರ್‌ಲೈನ್ಸ್‌ ಸಂಖ್ಯೆ ಹೆಚ್ಚಳಕ್ಕೆ ತೀರ್ಮಾನ

ಹೋಮ್ ಆಫೀಸ್ ವಕ್ತಾರ ಈ ಬಗ್ಗೆ ಮಾತನಾಡಿದ್ದು, “ಪ್ರಪಂಚದ ಮೂರು ಅತ್ಯಂತ ವಿಶ್ವಾಸಾರ್ಹ ವಿಶ್ವವಿದ್ಯಾನಿಲಯ ಶ್ರೇಯಾಂಕ ಪಟ್ಟಿಗಳಿಂದ ಅಗ್ರ 50 ಜಾಗತಿಕ ಸಂಸ್ಥೆಗಳ ಪಟ್ಟಿಯನ್ನು ಮಾಡಲಾಗಿದೆ. ಪಟ್ಟಿ ಮಾಡಲಾದ ವಿಶ್ವವಿದ್ಯಾನಿಲಯಗಳ ಪದವೀಧರರು ರಾಷ್ಟ್ರೀಯತೆಯನ್ನು ಲೆಕ್ಕಿಸದೆ ಹೆಚ್‌ಪಿಐ ಯೋಜನೆಗೆ ಅರ್ಹರಾಗಿರುತ್ತಾರೆ. ಪ್ರತಿಯೊಂದು ಅರ್ಹ ವಿಶ್ವವಿದ್ಯಾನಿಲಯಗಳು ಪ್ರಪಂಚದಾದ್ಯಂತದ ವಿದ್ಯಾರ್ಥಿಗಳನ್ನು ಅಧ್ಯಯನ ಮಾಡಲು ಆಕರ್ಷಿಸುತ್ತವೆ ಎಂದಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News