ಇದುವರೆಗೆ ಶೇ.500ರಷ್ಟು ಬಂಪರ್ ರಿಟರ್ನ್ಸ್ ನೀಡಿರುವ 5 ಮಲ್ಟಿಬ್ಯಾಗರ್ ಸ್ಟಾಕ್‌ಗಳ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
ನವದೆಹಲಿ: 2022ರ ಆರಂಭದಿಂದ ಸೆನ್ಸೆಕ್ಸ್ (BSE ಸೆನ್ಸೆಕ್ಸ್) ಮತ್ತು ನಿಫ್ಟಿ (NSE ನಿಫ್ಟಿ)ಸೂಚ್ಯಂಕಗಳು ಸುಮಾರು ಶೇ.6ರಷ್ಟು ನಷ್ಟದಲ್ಲಿವೆ. ಕಳೆದ ಕೆಲವು ವಾರ ಬಿಟ್ಟರೆ ಈ ವರ್ಷ ಬಹುತೇಕ ಹೂಡಿಕೆದಾರರು ನಷ್ಟ ಅನುಭವಿಸಿದ್ದಾರೆ. ಆದರೆ, ಕಳೆದ ವರ್ಷದಂತೆ ಈ ವರ್ಷವೂ ಹಲವು ಮಲ್ಟಿಬ್ಯಾಗರ್ ಸ್ಟಾಕ್‌ಗಳು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿವೆ. ಈ ವರ್ಷ ಷೇರು ಮಾರುಕಟ್ಟೆ ಬಿದ್ದರೂ ಈ ಸ್ಟಾಕ್‍ಗಳು ಹೂಡಿಕೆದಾರರಿಗೆ ಬಂಪರ್ ಆದಾಯ ನೀಡಿವೆ. ಇದುವರೆಗೆ ಶೇ.500ರಷ್ಟು ಬಂಪರ್ ರಿಟರ್ನ್ಸ್ ನೀಡಿರುವ 5 ಮಲ್ಟಿಬ್ಯಾಗರ್ ಸ್ಟಾಕ್‌ಗಳ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನೀವು ಪೆನ್ನಿ ಸ್ಟಾಕ್‌ಗಳ ಅದ್ಭುತ ನೋಡಲು ಬಯಸಿದರೆ ಈ ಸಣ್ಣ ಐಟಿ ಕಂಪನಿಯ ಮೇಲೆ ಕಣ್ಣಿಡಿ. ಈ ಸ್ಟಾಕ್ ವರ್ಷದ ಆರಂಭದಲ್ಲಿ 12.96 ರೂ. ಇತ್ತು, ಆದರೆ ಪ್ರಸ್ತುತ 39.90 ರೂ.ನಂತೆ ವಹಿವಾಟು ನಡೆಸುತ್ತಿದೆ. ಇಲ್ಲಿಯವರೆಗೆ ಇದು ತನ್ನ ಹೂಡಿಕೆದಾರರಿಗೆ ಶೇ.215ರಷ್ಟು ಉತ್ತಮ ಆದಾಯ ನೀಡಿದೆ. ಇದರ ಮಾರುಕಟ್ಟೆ ಕ್ಯಾಪ್ ಸುಮಾರು 35 ಕೋಟಿ ರೂ.ಗಳಷ್ಟಿದೆ. ಈ ಸ್ಟಾಕ್‌ನ 52 ವಾರಗಳ ಗರಿಷ್ಠ ಮಟ್ಟವು 58.70 ರೂ. ಆಗಿದ್ದರೆ, 52 ವಾರಗಳ ಕನಿಷ್ಠ ಮಟ್ಟವು 8.39 ರೂ. ಆಗಿದೆ.
ಪೆನ್ನಿ ಸ್ಟಾಕ್‌ಗಳ ವಿಷಯದಲ್ಲಿ ಈ ಸ್ಟಾಕ್ ಸಹ ಪ್ರಚಂಡ ಆದಾಯ ನೀಡಿದೆ. 2022ರಲ್ಲಿ ಕೇವಲ 10.46 ರೂ. ಇದ್ದ ಈ ಸ್ಟಾಕ್ ಇದೀಗ 61.90 ರೂ.ಗೆ ತಲುಪಿದೆ. VCU ಡೇಟಾ ನಿರ್ವಹಣೆಯ ಸ್ಟಾಕ್ ಅನ್ನು 2022ರ ಮಲ್ಟಿಬ್ಯಾಗರ್ ರಿಟರ್ನ್‌ಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದರ ಮಾರುಕಟ್ಟೆ ಮೌಲ್ಯ 95 ಕೋಟಿ ರೂ.ನಷ್ಟಿದೆ. ಇದರ 52 ವಾರಗಳ ಗರಿಷ್ಠ ಮಟ್ಟ 65.20 ರೂ. ಇದ್ದರೆ, 52 ವಾರಗಳ ಕನಿಷ್ಠ ಮಟ್ಟವು 5.47 ರೂ. ಆಗಿದೆ.
2022ರ ಆರಂಭದಲ್ಲಿ 12.43 ರೂ.ನಂತೆ ವಹಿವಾಟು ನಡೆಸುತ್ತಿದ್ದ ಎಬಿಸಿ ಗ್ಯಾಸ್ ಸ್ಟಾಕ್ ಭರ್ಜರಿ ಬೆಳವಣಿಗೆ ಕಂಡು 30.40 ರೂ.ಗೆ ತಲುಪಿದೆ. ಎಬಿಸಿ ಗ್ಯಾಸ್ ಸ್ಟಾಕ್ ಈ ವರ್ಷ ತನ್ನ ಹೂಡಿಕೆದಾರರಿಗೆ ಸುಮಾರು ಶೇ.400ರಷ್ಟು ಬಂಪರ್ ಲಾಭ ನೀಡಿದೆ. ಈ ಷೇರಿನ ಮಾರುಕಟ್ಟೆ ಮೌಲ್ಯ ಕೇವಲ 7 ಕೋಟಿ ರೂ. ಇದೆ. ಇದರ 52 ವಾರಗಳ ಗರಿಷ್ಟ 78.15 ಆದರೆ, 52 ವಾರಗಳ ಕನಿಷ್ಠ ಮಟ್ಟವು 10.66 ರೂ. ಆಗಿದೆ.
ಈ ವರ್ಷ ಷೇರುಮಾರುಕಟ್ಟೆಯಲ್ಲಿ ಮಾರಾಟದ ಭರಾಟೆ ಜೋರಾಗಿತ್ತು. ಆದರೂ ಸಹ ತಮ್ಮ ಹೂಡಿಕೆದಾರರಿಗೆ ಉತ್ತಮ ಆದಾಯ ನೀಡುವ ಮೂಲಕ ಈ ಕಂಪನಿ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ಗಳ ಪಟ್ಟಿ ಸೇರಿದೆ. ಹೌದು, ಧ್ರುವ ಕ್ಯಾಪಿಟಲ್ ಕೇವಲ 4.54 ರೂ.ಗಳಿಂದ ಪ್ರಾರಂಭವಾದ ಈ ಸ್ಟಾಕ್‍ನ ಜರ್ನಿ ಇಂದು ಅನೇಕ ಹೂಡಿಕೆದಾರರನ್ನು ಶ್ರೀಮಂತರನ್ನಾಗಿಸಿದೆ. ಪ್ರಸ್ತುತ ಈ ಸ್ಟಾಕ್ 21.60 ರೂ.ನಂತೆ ವಹಿವಾಟು ನಡೆಸುತ್ತಿದೆ. 2022ರ ವರ್ಷದಲ್ಲಿ ಈ ಪೆನ್ನಿ ಸ್ಟಾಕ್ ಹೂಡಿಕೆದಾರರಿಗೆ ಶೇ.380ರಷ್ಟು ಪ್ರಚಂಡ ಆದಾಯ ನೀಡಿದೆ. ಇದರ 52 ವಾರಗಳ ಗರಿಷ್ಟ 30.70 ಆದರೆ, 52 ವಾರಗಳ ಕನಿಷ್ಠ ಮಟ್ಟವು 3.50 ರೂ. ಆಗಿದೆ.
ಈ ಸ್ಟಾಕ್ ಸಹ 2022ರಲ್ಲಿ ಹೂಡಿಕೆದಾರರಿಗೆ ಬಂಪರ್ ಆದಾಯ ನೀಡುವ ಮೂಲಕ ಮಲ್ಟಿಬ್ಯಾಗರ್ ಎನಿಸಿಕೊಂಡಿದೆ. ಅತ್ಯುತ್ತಮ ಆದಾಯದ ಆಧಾರದ ಮೇಲೆ ಈ ವರ್ಷ ಅನೇಕ ಹೂಡಿಕೆದಾರರನ್ನು ಶ್ರೀಮಂತರನ್ನಾಗಿಸಿದೆ. ಕೇವಲ 9.80 ರೂ.ಗಳಿಂದ ಪ್ರಾರಂಭವಾಗಿ ಇದೀಗ 52.15 ರೂ.ಗೆ ತಲುಪಿದೆ. ಪ್ರಸ್ತುತ ಈ ಕಂಪನಿಯ ಮಾರುಕಟ್ಟೆ ಮೌಲ್ಯ 34 ಕೋಟಿ ರೂ. ಇದೆ. ಇದರ 52 ವಾರಗಳ ಗರಿಷ್ಠ ಮಟ್ಟವು 67.75 ರೂ .ಆಗಿದ್ದರೆ, 52 ವಾರಗಳ ಕನಿಷ್ಠ ಮಟ್ಟವು 5.73 ರೂ. ಆಗಿದೆ.