20 ಸಾವಿರ ರೂ.ಗಿಂತಲೂ ಕಡಿಮೆ ಬೆಲೆಗೆ ಸಿಗುವ ಅತ್ಯುತ್ತಮ ಸ್ಮಾರ್ಟ್‌ಫೋನ್ ಖರೀದಿಸುವ ಅವಕಾಶ ಇಲ್ಲಿದೆ.
ನಿಮ್ಮ ಸ್ಮಾರ್ಟ್‌ಫೋನ್ ನಿಮಗೆ ಆಗಾಗ ತೊಂದರೆ ನೀಡುತ್ತಿದೆಯೇ? ಚಾರ್ಜ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆಯೇ?, ನಿಮ್ಮ ಮೊಬೈಲ್ ನಲ್ಲಿ ಸಾಕಷ್ಟು ಸ್ಟೋರೇಜ್ ಇಲ್ಲವೆ? ಅಥವಾ ಹಳೆಯ ಮೊಬೈಲ್‌ನಿಂದ ನಿಮಗೆ ಬೇಸರವಾಗಿದೆಯೇ? ಹೌದು ಎಂದಾದರೆ 20 ಸಾವಿರ ರೂ.ಗಿಂತಲೂ ಕಡಿಮೆ ಬೆಲೆಗೆ ಸಿಗುವ ಅತ್ಯುತ್ತಮ ಸ್ಮಾರ್ಟ್‌ಫೋನ್ ಖರೀದಿಸುವ ಅವಕಾಶ ಇಲ್ಲಿದೆ. 20 ಸಾವಿರ ರೂ. ಬೆಲೆಯೊಳಗೆ ನೀವು ಖರೀದಿಸಬಹುದಾದ ಟಾಪ್ 5 ಸ್ಮಾರ್ಟ್‌ಫೋನ್‌ಗಳ ಮಾಹಿತಿಯನ್ನು ನಾವು ನಿಮಗಾಗಿ ಇಲ್ಲಿ ನೀಡುತ್ತಿದ್ದೇವೆ.
ಈ ಸ್ಮಾರ್ಟ್‌ಫೋನ್ ಗಳು ದುಬಾರಿ ಬೆಲೆಯ ಫೋನ್ ಗಳಲ್ಲಿ ಸಿಗುವ ವೈಶಿಷ್ಟ್ಯಗಳನ್ನು ಹೊಂದಿವೆ. ಸ್ಮಾರ್ಟ್ ಕ್ಯಾಮರಾ, ಹೆಚ್ಚಿನ RAM ಮತ್ತು ROM, ದೊಡ್ಡ ಡಿಸ್‌ಪ್ಲೇ, ಉತ್ತಮ ಬ್ಯಾಟರಿ ಬ್ಯಾಕಪ್ ಮತ್ತು ಆಕರ್ಷಕ ನೋಟವನ್ನು ಈ ಸ್ಮಾರ್ಟ್‌ಫೋನ್ ಗಳಲ್ಲಿ ಕಾಣಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
20 ಸಾವಿರ ರೂ. ಬಜೆಟ್ ನಲ್ಲಿ Redmi Note 10 Pro Max ಖರೀದಿಸಲು ಅತ್ತ್ಯುತಮವಾದ ಸ್ಮಾರ್ಟ್‌ಫೋನ್ ಆಗಿದೆ. ಇದರ ವೈಶಿಷ್ಟ್ಯಗಳನ್ನು ನೋಡುವುದಾದರೆ 6.67-ಇಂಚಿನ FHD+ ಸೂಪರ್ AMOLED ಡಿಸ್‌ಪ್ಲೇ ಜೊತೆಗೆ HDR-10 ಬೆಂಬಲವಿದೆ. ಇದು 108MP ಕ್ವಾಡ್ ರೇರ್ ಕ್ಯಾಮೆರಾ ಸೆಟಪ್ ಮತ್ತು 5,020mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. 33W ವೇಗದ ಜಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16MP ಕ್ಯಾಮೆರಾ ಸೆನ್ಸಾರ್ ಇದೆ. ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್ ಆಂಡ್ರಾಯ್ಡ್ 11 OS ನೊಂದಿಗೆ MIUI 12 ಮೇಲೆ ಕಾರ್ಯನಿರ್ವಹಿಸುತ್ತದೆ.
Realme X7 ಇದೊಂದು 5G ಸ್ಮಾರ್ಟ್‌ಫೋನ್ ಆಗಿದ್ದು, ಟ್ರೆಂಡಿ ಫೀಚರ್ಸ್ ಮತ್ತು ಆಧುನಿಕ ವಿನ್ಯಾಸದೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ಇದು 6GB RAM ಹೊಂದಿದೆ. ಈ ಸ್ಮಾರ್ಟ್‌ಫೋನ್ 6.4-ಇಂಚಿನ HD+ AMOLED ಸ್ಕ್ರೀನ್ ಹೊಂದಿದೆ. ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು 4,310mAh ಬ್ಯಾಟರಿ ಸಾಮರ್ಥ್ಯವು ಇದೆ. 65W ವೇಗದ ಚಾರ್ಜರ್ ಅನ್ನು ಬೆಂಬಲಿಸುತ್ತದೆ. 64MP ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಮುಂಭಾಗದಲ್ಲಿ 16MP ಸೆಲ್ಫಿ ಕ್ಯಾಮೆರಾ ಇದೆ. ಈ ಫೋನ್ ಆಂಡ್ರಾಯ್ಡ್ 10 OS ನೊಂದಿಗೆ Realme UI ಮೇಲೆ ಕಾರ್ಯನಿರ್ವಹಿಸುತ್ತದೆ.
ನೀವು ಕಡಿಮೆ ಬಜೆಟ್‌ನಲ್ಲಿ ಉತ್ತಮ ಸ್ಮಾರ್ಟ್‌ಫೋನ್ ಹುಡುಕುತ್ತಿದ್ದರೆ Redmi Note 10S ಉತ್ತಮ ಆಯ್ಕೆಯಾಗಿದೆ. 1080 x 2400 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರುವ ಈ ಸ್ಮಾರ್ಟ್‌ಫೋನ್ 6.43 ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇ ಹೊಂದಿದೆ. 6GB RAM ಹೊಂದಿದ್ದು, 64GB ಅಂತರ್ನಿರ್ಮಿತ ಸ್ಟೋರೇಜ್ ಲಭ್ಯವಿದೆ. ಅಲ್ಲದೆ ಮೈಕ್ರೊ ಎಸ್ಡಿ ಕಾರ್ಡ್ ಮೂಲಕ ಒಟ್ಟು 512GB ವರೆಗೂ ವಿಸ್ತರಿಸಬಹುದು. ರೆಡ್ಮಿ ನೋಟ್ 10S ಆಂಡ್ರಾಯ್ಡ್ 11 OS ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ಕ್ವಾಡ್ ಕ್ಯಾಮೆರಾ ಸೆಟಪ್ ಹೊಂದಿದ್ದು, 64MP ಕ್ವಾಡ್ ಪ್ರೈಮರಿ ಕ್ಯಾಮೆರಾ ಇದೆ. ಸೆಲ್ಫಿಗಾಗಿ ಮುಂಭಾಗದಲ್ಲಿ 13MP ಕ್ಯಾಮೆರಾ ಇದೆ.
ನಿವು ಅತ್ತ್ಯುತ್ತಮ ಸ್ಮಾರ್ಟ್‌ಫೋನ್ ಹುಡುಕುತ್ತಿದ್ದರೆ Poco X3 Pro ಉತ್ತಮ ಆಯ್ಕೆಯಾಗಿದೆ. ಈ ಸ್ಮಾರ್ಟ್‌ಫೋನ್ 6.67 ಇಂಚಿನ ಪೂರ್ಣ HD+ LCD ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಇದು ಹಿಂಭಾಗದಲ್ಲಿ 4 ಕ್ಯಾಮೆರಾಗಳನ್ನು ಮತ್ತು 4 ರೇರ್ ಕ್ಯಾಮೆರಾಗಳನ್ನು ಹೊಂದಿದೆ. ಇದರಲ್ಲಿ 48MP ಪ್ರೈಮರಿ PDAF ಅಥವಾ ಆಟೋ ಫೋಕಸ್ ವೈಶಿಷ್ಟ್ಯವನ್ನು ಹೊಂದಿದೆ. ಇದು 8MP ಅಲ್ಟ್ರಾ-ವೈಡ್ ಕ್ಯಾಮೆರಾ, 2 ಎಂಪಿ ಮ್ಯಾಕ್ರೋ ಕ್ಯಾಮೆರಾ ಮತ್ತು 2MP ಕ್ಯಾಮೆರಾದೊಂದಿಗೆ ಬರುತ್ತದೆ. ಮುಂಭಾಗದಲ್ಲಿ 20MP ಸೆಲ್ಫಿ ಕ್ಯಾಮೆರಾ ಇದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 860 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ 5,160mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. 33W ವೇಗದ ಚಾರ್ಜರ್ ಅನ್ನು ಬೆಂಬಲಿಸುತ್ತದೆ.
ನೀವು ಸ್ಯಾಮ್‌ಸಂಗ್ ಫೋನ್ ಪ್ರಿಯರಾಗಿದ್ದರೆ 20 ಸಾವಿರ ರೂ.ಗಳಿಗಿಂತ ಕಡಿಮೆ ಹಣಕ್ಕೆ ಅತ್ತ್ಯುತ್ತಮ ಸ್ಮಾರ್ಟ್‌ಫೋನ್ ಖರೀದಿಸಬಹುದು. Samsung Galaxy M31s ಸ್ಮಾರ್ಟ್‌ಫೋನ್ ಈ ಶ್ರೇಣಿಯಲ್ಲಿ ಉತ್ತಮ ಆಯ್ಕೆಯಾಗಿದೆ. ಇದು ದೊಡ್ಡ 6.5 ಇಂಚಿನ ಇನ್ಫಿನಿಟಿ- O ಅಮೋಲೆಡ್ ಡಿಸ್‌ಪ್ಲೇ ಹಾಗೂ 6,000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇದು 25W ವೇಗದ ಚಾರ್ಜರ್ ಅನ್ನು ಬೆಂಬಲಿಸುತ್ತದೆ. Galaxy M31sನಲ್ಲಿ ಸೈಡ್ ಮೌಂಟೆಡ್ ಫಿಂಗರ್ಪ್ರಿಂಟ್ ಸ್ಕ್ಯಾನರ್ ಕೂಡ ಇದೆ. ಈ ಸಾಧನವು ಆಂಡ್ರಾಯ್ಡ್ 10 OS ನೊಂದಿಗೆ OneUI 2.1 ಮೇಲೆ ಕಾರ್ಯನಿರ್ವಹಿಸುತ್ತದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ M31 ಗಳು 64MP ಪ್ರಾಥಮಿಕ ಕ್ಯಾಮೆರಾವನ್ನು ಒಳಗೊಂಡಿರುವ ಕ್ವಾಡ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.