Dimple Prediction: ಹುಡುಗಿ ಅಥವಾ ಹುಡುಗನ ಮೈಬಣ್ಣ ಮುಖ್ಯವಲ್ಲ, ಅವರ ನಡವಳಿಕೆ ಚೆನ್ನಾಗಿರಬೇಕು ಎಂದು ಹಲವರು ಹೇಳುವುದನ್ನು ನೀವು ಕೇಳಿರಬಹುದು. ಮದುವೆಯ ಸಂದರ್ಭದಲ್ಲಿ ಈ ವಿಷಯ ವಿಶೇಷವಾಗಿ ಕೇಳಿಬರುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಹುಡುಗಿ ಅಥವಾ ಹುಡುಗನ ಮೈಬಣ್ಣ ಮುಖ್ಯವಲ್ಲ, ಅವರ ನಡವಳಿಕೆ ಚೆನ್ನಾಗಿರಬೇಕು ಎಂದು ಹಲವರು ಹೇಳುವುದನ್ನು ನೀವು ಕೇಳಿರಬಹುದು. ಮದುವೆಯ ಸಂದರ್ಭದಲ್ಲಿ ಈ ವಿಷಯ ವಿಶೇಷವಾಗಿ ಕೇಳಿಬರುತ್ತದೆ.
ಇನ್ನು ಈ ಸಂದರ್ಭದಲ್ಲಿ ವ್ಯಕ್ತಿಯ ಮುಖದಲ್ಲಿ ಮೂಡುವ ಒಂದು ವಿಷಯದ ಬಗ್ಗೆ ಹೆಚ್ಚು ಗಮನ ಹರಿಸಲಾಗುತ್ತದೆ. ಆ ವಿಷಯ ಸಾಮಾನ್ಯವಾಗಿ ಎಂಥವರನ್ನಾದರೂ ಆಕರ್ಷಕವಾಗಿ ಮಾಡುತ್ತದೆ. ಹೌದು, ನಾವು ಇಲ್ಲಿ ಡಿಂಪಲ್ಸ್ ಬಗ್ಗೆ ಮಾತನಾಡುತ್ತಿದ್ದೇವೆ.
ಕೆನ್ನೆಗಳಲ್ಲಿನ ಡಿಂಪಲ್’ಳು ಯಾವುದೇ ವ್ಯಕ್ತಿಗೆ ಅದ್ಭುತವಾದ ಸೌಂದರ್ಯವನ್ನು ನೀಡುತ್ತವೆ ಮತ್ತು ಜನರ ಗುಂಪಿನಲ್ಲಿ ಅವರನ್ನು ವಿಶೇಷವಾಗಿಸುತ್ತವೆ. ಬಾಲಿವುಡ್’ನಲ್ಲಿ ದೀಪಿಕಾ ಪಡುಕೋಣೆ, ಆಲಿಯಾ ಭಟ್, ಶಾರುಖ್ ಖಾನ್ ಮುಂತಾದ ನಟ-ನಟಿಯರ ಕೆನ್ನೆಗಳಲ್ಲಿ ಡಿಂಪಲ್ ಬೀಳುತ್ತವೆ. ಆದರೆ ಕೆನ್ನೆಗಳಲ್ಲಿನ ಈ ಡಿಂಪಲ್’ಗಳು ನಮ್ಮ ಜೀವನ ಮತ್ತು ಭವಿಷ್ಯದ ಬಗ್ಗೆ ಅನೇಕ ರಹಸ್ಯಗಳನ್ನು ಹೇಳುತ್ತವೆ.
ಸಾಮಾನ್ಯವಾಗಿ ನಾವು ನಗುವಾಗ ಕೆನ್ನೆಯಲ್ಲಿ ಡಿಂಪಲ್’ಗಳು ಕಾಣಿಸಿಕೊಳ್ಳುತ್ತವೆ. ಕೆನ್ನೆಗಳಲ್ಲಿನ ಡಿಂಪಲ್’ಗಳು ಸಹ ವ್ಯಕ್ತಿಗೆ ಬಹಳ ಅದೃಷ್ಟ. ಶಾಸ್ತ್ರಗಳ ಪ್ರಕಾರ, ಕೆನ್ನೆಯ ಮೇಲೆ ಡಿಂಪಲ್ ಇರುವವರು ಸ್ವಭಾವತಃ ಸೌಮ್ಯ ಮತ್ತು ಸೂಕ್ಷ್ಮ ಸ್ವಭಾವದವರು. ಈ ಜನರು ಕಲಾ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಾರೆ. ಅಷ್ಟೇ ಅಲ್ಲ, ಇಂಥವರು ಸಹಕಾರಿ ಎಂದು ಕೂಡ ಹೇಳಲಾಗುತ್ತದೆ.
ನಗುವಾಗ ಕೆನ್ನೆಯ ಮೇಲೆ ಡಿಂಪಲ್ ಇರುವವರು ಅತ್ಯಂತ ಸಂತೋಷದಾಯಕ ಮತ್ತು ಅದ್ಭುತವಾದ ದಾಂಪತ್ಯ ಜೀವನವನ್ನು ನಡೆಸುತ್ತಾರೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಕೆನ್ನೆಗಳಲ್ಲಿನ ಡಿಂಪಲ್ಗಳು ವಿಶೇಷವಾಗಿ ಹುಡುಗಿಯರಿಗೆ ತುಂಬಾ ಒಳ್ಳೆಯದು. ಡಿಂಪಲ್ ಇರುವ ಹುಡುಗಿಯರು ತಮ್ಮ ಗಂಡಂದಿರೊಂದಿಗೆ ತುಂಬಾ ಸಂತೋಷದ ಜೀವನವನ್ನು ನಡೆಸುತ್ತಾರೆ.
ಆದರೆ, ಡಿಂಪಲ್’ಗಳ ಸಮಸ್ಯೆಯೂ ಇದೆ. ಕೆನ್ನೆಯಲ್ಲಿ ಡಿಂಪಲ್ ಇರುವ ಹುಡುಗಿಯರಿಗೆ ಅತ್ತೆಯಿಂದ ಖುಷಿ ಸಿಗುವುದಿಲ್ಲ ಎನ್ನುತ್ತಾರೆ.
ಕೆಲವೇ ಜನರ ಕೆನ್ನೆಗಳಲ್ಲಿ ಡಿಂಪಲ್ ಕಾಣಿಸಿಕೊಳ್ಳುತ್ತದೆ. ಅಷ್ಟೇ ಅಲ್ಲದೆ, ಎರಡೂ ಕೆನ್ನೆಗಳಲ್ಲಿ ಡಿಂಪಲ್ ಇರುತ್ತದೆ. ಡಿಂಪಲ್’ಗಳನ್ನು ಸಾಮಾನ್ಯವಾಗಿ ಆನುವಂಶಿಕವೆಂದು ಪರಿಗಣಿಸಲಾಗುತ್ತದೆ. ಆದರೆ ಡಿಂಪಲ್ ಇರುವವರ ಮಕ್ಕಳಿಗೂ ಕೆನ್ನೆಯಲ್ಲಿ ಡಿಂಪಲ್ ಬರುತ್ತೆ ಅಂತಲ್ಲ. ನಮ್ಮ ಕೆನ್ನೆಯ ಸ್ನಾಯುಗಳಲ್ಲಿನ ಬದಲಾವಣೆಗಳಿಂದ ಡಿಂಪಲ್ಗಳು ಹುಟ್ಟುತ್ತವೆ. ಕೆನ್ನೆಯ ಸ್ನಾಯುಗಳು ಇತರರಿಗಿಂತ ಚಿಕ್ಕದಾಗಿರುವ ಜನರು ತಮ್ಮ ಕೆನ್ನೆಗಳಲ್ಲಿ ಡಿಂಪಲ್ಗಳನ್ನು ಹೊಂದಿರುತ್ತಾರೆ. ಡಿಂಪಲ್‌ಗಳಿಗೆ ಕಾರಣವಾದ ಕೆನ್ನೆಯ ಸ್ನಾಯುವನ್ನು ಜೈಗೋಮ್ಯಾಟಿಕಸ್ ಎಂದು ಕರೆಯಲಾಗುತ್ತದೆ.