Chhattisgarh Assembly Election Result 2023: ಐಎಎಸ್ ಹುದ್ದೆ ತೊರೆದು ರಾಜಕೀಯಕ್ಕೆ ಕಾಲಿಟ್ಟಿರುವ ಒಪಿ ಚೌಧರಿ ಅವರು ರಾಯಗಢ ಕ್ಷೇತ್ರದಿಂದ ಬಿಜೆಪಿ ಟಿಕೆಟ್ನಲ್ಲಿ ಸ್ಪರ್ಧಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಚುನಾವಣಾ ಪ್ರಚಾರಕ್ಕಾಗಿ ರಾಯಗಢಕ್ಕೆ ಆಗಮಿಸಿದ್ದರು. ಆಗ ‘ಒಪಿ ಚೌಧರಿ ಅವರಿಗೆ ಮತ ನೀಡಿ ಅವರನ್ನು ಆಶೀರ್ವದಿಸಿ, ನಾವು ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುತ್ತೇವೆ’ ಎಂದು ಜನರಲ್ಲಿ ಮನವಿ ಮಾಡಿದ್ದರು.
ಛತ್ತೀಸ್ಗಢ ವಿಧಾನಸಭೆ ಚುನಾವಣೆ ಫಲಿತಾಂಶ 2023: ದೇಶದ ಇತರ 4 ರಾಜ್ಯಗಳ ಜೊತೆಗೆ ಛತ್ತೀಸ್ಗಢ ವಿಧಾನಸಭೆಯ ಚುನಾವಣಾ ಫಲಿತಾಂಶಗಳು ನಾಳೆ ಅಂದರೆ ಡಿಸೆಂಬರ್ 3ರಂದು ಬರಲಿವೆ. ಈ ಬಾರಿಯ ಛತ್ತೀಸ್ಗಢ ಚುನಾವಣೆಯಲ್ಲಿ 10 ಪ್ರಮುಖರು ಚುನಾವಣೆಗೆ ಸ್ಪರ್ಧಿಸಿದ್ದು, ಇವರ ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ರಾಜ್ಯದ ಹಾಲಿ ಸಿಎಂ ಭೂಪೇಶ್ ಬಘೇಲ್ ಪಟಾನ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಭೂಪೇಶ್ ಬಾಘೇಲ್ ಮತ್ತೊಮ್ಮೆ ರಾಜ್ಯದ ಸಿಎಂ ಆಗುತ್ತಾರೆ ಎಂದು ನಂಬಲಾಗಿದೆ. ಆದರೆ ಬಿಜೆಪಿ ಸಂಸದ ವಿಜಯ್ ಬಾಘೇಲ್ ಅವರನ್ನು ಈ ಕ್ಷೇತ್ರದಲ್ಲಿ ಕಣಕ್ಕಿಳಿಸಿದೆ. ವಿಜಯ್ ಬಾಘೇಲ್ ಅವರು ಭೂಪೇಶ್ ಬಾಘೇಲ್ ಅವರ ಸೋದರಳಿಯ. 2008ರ ವಿಧಾನಸಭಾ ಚುನಾವಣೆಯಲ್ಲಿ ಭೂಪೇಶ್ ಬಾಘೇಲ್ ಅವರು ಭರ್ಜರಿ ಗೆಲುವು ಸಾಧಿಸಿದ್ದರು.
ಛತ್ತೀಸ್ಗಢದ ಉಪ ಮುಖ್ಯಮಂತ್ರಿ ಟಿ.ಎಸ್.ಸಿಂಗ್ದೇವ್ ಅವರು ಅಂಬಿಕಾಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಅವರು 2008ರಿಂದ ಈ ಕ್ಷೇತ್ರದಿಂದ ಅಜೇಯರಾಗಿ ಉಳಿದಿದ್ದಾರೆ. ಅವರನ್ನು ಎದುರಿಸಲು ಬಿಜೆಪಿಯು ಲಖನ್ಪುರ ನಗರ ಪಂಚಾಯತ್ ಅಧ್ಯಕ್ಷರಾಗಿದ್ದ ಉದ್ಯಮಿ ರಾಜೇಶ್ ಅಗರ್ವಾಲ್ ಅವರನ್ನು ಕಣಕ್ಕಿಳಿಸಿದೆ. ಈ ಬಾರಿ ಟಿ.ಎಸ್.ಸಿಂಗ್ದೇವ್ ಅವರು ತಮ್ಮ ಕೋಟೆಯನ್ನು ಉಳಿಸಿಕೊಳ್ಳುತ್ತಾರೋ ಇಲ್ಲವೋ ಎಂಬುದನ್ನು ಕಾದುನೋಡಬೇಕಿದೆ.
ಬಿಜೆಪಿ ನಾಯಕ ಮತ್ತು ಛತ್ತೀಸ್ಗಢದ ಸುದೀರ್ಘ ಅವಧಿಯ ಸಿಎಂ ರಮಣ್ ಸಿಂಗ್ ರಾಜನಂದಗಾಂವ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. 2003ರಿಂದ 2018ರವರೆಗೆ ಸತತ 15 ವರ್ಷಗಳ ಕಾಲ ರಾಜ್ಯದ ಸಿಎಂ ಆಗಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್ನಿಂದ ಗಿರೀಶ್ ದೇವಾಂಗನ್ ಸ್ಪರ್ಧಿಸಿದ್ದಾರೆ. ಬಿಜೆಪಿ ಗೆದ್ದರೆ ರಮಣ್ ಸಿಂಗ್ ಅದೃಷ್ಟ ಮತ್ತೊಮ್ಮೆ ಬದಲಾಗಬಹುದು ಎನ್ನಲಾಗುತ್ತಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಅರುಣ್ ಸಾವೋ ಪ್ರಸ್ತುತ ಬಿಲಾಸ್ಪುರ ಸಂಸದರಾಗಿದ್ದಾರೆ. ಈ ಬಾರಿ ಪಕ್ಷ ಅವರನ್ನು ಲೋರ್ಮಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಅವರು ಒಬಿಸಿ ವರ್ಗದಿಂದ ಬಂದವರು. ಬಿಜೆಪಿ ಗೆದ್ದರೆ ಸಿಎಂ ಆಗಬಹುದು ಎಂಬ ನಂಬಿಕೆ ಇದೆ. ಅವರ ವಿರುದ್ಧ ಕಾಂಗ್ರೆಸ್ನ ಥಾನೇಶ್ವರ್ ಸಾಹು ಕಣದಲ್ಲಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಮತ್ತು ವಿಧಾನಸಭಾ ಸ್ಪೀಕರ್ ಚರಣದಾಸ್ ಮಹಂತ್ ಅವರು ಶಕ್ತಿ ವಿಧಾನಸಭಾ ಕ್ಷೇತ್ರದಿಂದ ಕಳೆದ 3 ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಾರೆ. ಅವರು ಈ ಕ್ಷೇತ್ರದಿಂದ ಪಕ್ಷದಿಂದ 3 ಬಾರಿ ಸಂಸದರಾಗಿದ್ದಾರೆ. ಈ ಬಾರಿಯೂ ಕಾಂಗ್ರೆಸ್ ಅವರನ್ನು ಲೋರ್ಮಿ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಅವರ ವಿರುದ್ಧ ಬಿಜೆಪಿ ಖಿಲ್ವಾನ್ ಸಾಹು ಅವರಿಗೆ ಟಿಕೆಟ್ ನೀಡಿದೆ.
ಮಾಜಿ ಸಿಎಂ ಅಜಿತ್ ಜೋಗಿ ಅವರ ಪತ್ನಿ ರೇಣು ಜೋಗಿ ಅವರು ಕೋಟಾದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಈ ಸ್ಥಾನವು ಬಿಲಾಸ್ಪುರ್ ಜಿಲ್ಲೆಯಡಿ ಬರುತ್ತದೆ. ಅವರು ತಮ್ಮ ಕುಟುಂಬ ಪಕ್ಷದ ಜೆಸಿಸಿಜೆ ಅಭ್ಯರ್ಥಿ. ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಪ್ರಬಲ್ ಪ್ರತಾಪ್ ಸಿಂಗ್ ಸ್ಪರ್ಧಿಸಿದ್ದಾರೆ. ಇವರು ಮಾಜಿ ನಾಯಕ ದಿಲೀಪ್ ಸಿಂಗ್ ಜುದೇವ್ ಅವರ ಮಗ. ಕಾಂಗ್ರೆಸ್ ಈ ಕ್ಷೇತ್ರದಿಂದ ಅಟಲ್ ಶ್ರೀವಾಸ್ತವ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೊಹಮ್ಮದ್ ಅಕ್ಬರ್ ಕವರ್ಧಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. 2018ರಲ್ಲಿ ಈ ಕ್ಷೇತ್ರದಲ್ಲಿ 59 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ನಂತರ ಹಲವು ಇಲಾಖೆಗಳ ಸಚಿವರೂ ಆದರು. ಅವರಿಗೆ ಬಿಜೆಪಿಯಿಂದ ವಿಜಯ್ ಶರ್ಮಾ ಪೈಪೋಟಿ ನೀಡುತ್ತಿದ್ದಾರೆ. ಹೀಗಿರುವಾಗ ಅಕ್ಬರ್ ಈ ಬಾರಿಯೂ ಹಳೆಯ ದಾಖಲೆ ಪುನರಾವರ್ತಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಅಮಿತ್ ಜೋಗಿ ರಾಜ್ಯದ ಮಾಜಿ ಸಿಎಂ ಅಜಿತ್ ಜೋಗಿ ಅವರ ಪುತ್ರ. ಈ ಹಿಂದೆ ಶಾಸಕರಾಗಿದ್ದ ಅವರು ಈ ಬಾರಿಯೂ ತಮ್ಮ ಕುಟುಂಬ ಪಕ್ಷವಾದ ಜೆಸಿಸಿಜೆ ಟಿಕೆಟ್ನಲ್ಲಿ ಪಟಾನ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಅವರು ಸತ್ನಾಮಿ ಸಮುದಾಯದ ಉತ್ತಮ ಸಂಖ್ಯೆಯ ಮತಗಳನ್ನು ಹೊಂದಿದ್ದಾರೆ, ಹೀಗಾಗಿ ಅವರು ಲಾಭ ಪಡೆಯಬಹುದು. ಅವರಿಗೆ ಸಿಎಂ ಭೂಪೇಶ್ ಬಾಘೇಲ್ ಮತ್ತು ಸಂಸದ ವಿಜಯ್ ಬಾಘೇಲ್ ಪ್ರಮುಖ ಸ್ಪರ್ಧಿಗಳಾಗಿದ್ದಾರೆ.
ಛತ್ತೀಸ್ಗಢದಲ್ಲಿ ವಿಜಯ ಪತಾಕೆ ಹಾರಿಸಲು ಬಿಜೆಪಿ ಕೇಂದ್ರ ಸಚಿವೆ ಹಾಗೂ ಸಂಸದೆ ರೇಣುಕಾ ಸಿಂಗ್ ಅವರನ್ನು ಭರತ್ಪುರ ಸೋಹಾಂತ್ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಕಾಂಗ್ರೆಸ್ನ ಹಾಲಿ ಶಾಸಕ ಗುಲಾಬ್ ಸಿಂಗ್ ಕಮ್ರೋ ವಿರುದ್ಧ ಅವರು ಸ್ಪರ್ಧಿಸುತ್ತಿದ್ದಾರೆ. ಗುಲಾಬ್ ಸಿಂಗ್ ಈ ಪ್ರದೇಶದಲ್ಲಿ ಉತ್ತಮ ಹಿಡಿತವನ್ನು ಹೊಂದಿದ್ದಾರೆ. ಆದ್ದರಿಂದ ರೇಣುಕಾ ಸಿಂಗ್ ಈ ಕ್ಷೇತ್ರವನ್ನು ಗೆಲ್ಲಲು ಶ್ರಮಿಸಬೇಕಾಗಬಹುದು.
ಐಎಎಸ್ ಹುದ್ದೆ ತೊರೆದು ರಾಜಕೀಯಕ್ಕೆ ಕಾಲಿಟ್ಟಿರುವ ಒಪಿ ಚೌಧರಿ ಅವರು ರಾಯಗಢ ಕ್ಷೇತ್ರದಿಂದ ಬಿಜೆಪಿ ಟಿಕೆಟ್ನಲ್ಲಿ ಸ್ಪರ್ಧಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಚುನಾವಣಾ ಪ್ರಚಾರಕ್ಕಾಗಿ ರಾಯಗಢಕ್ಕೆ ಆಗಮಿಸಿದ್ದರು. ಆಗ ‘ಒಪಿ ಚೌಧರಿ ಅವರಿಗೆ ಮತ ನೀಡಿ ಅವರನ್ನು ಆಶೀರ್ವದಿಸಿ, ನಾವು ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುತ್ತೇವೆ’ ಎಂದು ಜನರಲ್ಲಿ ಮನವಿ ಮಾಡಿದ್ದರು. ಹೀಗಿರುವಾಗ ಎಲ್ಲರ ದೃಷ್ಟಿ ಅವರ ಚುನಾವಣಾ ಫಲಿತಾಂಶದತ್ತ ನೆಟ್ಟಿದೆ.