ಚಿತ್ರರಂಗಕ್ಕೆ ಆಘಾತ..!! ಬೈಕ್‌ನಲ್ಲಿ ಬಟ್ಟೆ ಸಿಕ್ಕಿಕೊಂಡು 23 ವರ್ಷದ ಖ್ಯಾತ ನಟಿ ತೊಡೆಗೆ ಗಂಭೀರ ಗಾಯ..

Roshni Walia injury : ಖ್ಯಾತ ಕಿರುತೆರೆ ನಟಿ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಬೈಕ್‌ನ ಚೈನ್‌ನಲ್ಲಿ ಬಟ್ಟೆ ಸಿಲುಕಿಕೊಂಡ ಪರಿಣಾಮ ತೊಡೆಗೆ ಗಂಭೀರವಾಗಿದೆ. ಇದರಿಂದ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಸಧ್ಯ ನಟಿಯ ಆರೋಗ್ಯ ಸ್ಥಿತಿ ಹೇಗಿದೆ.. ಬನ್ನಿ ನೋಡೋಣ..

1 /8

'ಭಾರತ್ ಕಾ ವೀರ್ ಪುತ್ರ-ಮಹಾರಾಣಾ ಪ್ರತಾಪ್' ಧಾರಾವಾಹಿ ಖ್ಯಾತಿಯ ನಟಿ ರೋಶಿನಿ ವಾಲಿಯಾ ಬಗ್ಗೆ ಆಘಾತಕಾರಿ ಸುದ್ದಿಯೊಂದು ಬೆಳಕಿಗೆ ಬಂದಿದೆ.   

2 /8

ನಟಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ಆಕೆಯ ಉಡುಪಿನ ಒಂದು ಭಾಗ ಬೈಕಿನ ಚೈನ್‌ಗೆ ಸಿಲುಕಿಕೊಂಡಿದ್ದರಿಂದ ಆಕೆಯ ತೊಡೆಗೆ ಗಂಭೀರ ಗಾಯವಾಗಿದೆ.. ಈ ಘಟನೆ ಕುರಿತು ರೋಶಿನಿ ಮಾಹಿತಿ ನೀಡಿದ್ದಾರೆ.   

3 /8

ಅಪಘಾತದ ಬಗ್ಗೆ ರೋಶಿನಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ.. "ನನ್ನ ಡ್ರೇಸ್‌ ಬೈಕ್ ಟೈರ್ ಮತ್ತು ಚೈನ್‌ಗೆ ಸಿಲುಕಿಕೊಂಡಿತು, ಇದರಿಂದಾಗಿ ನನ್ನ ತೊಡೆಗೆ ಗಂಭೀರ ಗಾಯವಾಯಿತು.   

4 /8

ಇದು ತುಂಬಾ ಭಯಾನಕ ಅನುಭವವಾಗಿತ್ತು... ಎಲ್ಲರೂ ಜಾಗರೂಕರಾಗಿರಿ, ವಿಶೇಷವಾಗಿ ಬೈಕ್‌ನಲ್ಲಿ ಪ್ರಯಾಣಿಸುವಾಗ ಸಡಿಲವಾದ ಬಟ್ಟೆಗಳನ್ನು ಧರಿಸಬೇಡಿ ಅಂತ ನಟಿ ಸಲಹೆ ನೀಡಿದರು.  

5 /8

ಈ ಘಟನೆಯ ನಂತರ, ರೋಶಿನಿ ಚಿಕಿತ್ಸೆಗೆ ಒಳಗಾಗಿದ್ದಾರೆ.. ಅಲ್ಲದೆ, ಅಭಿಮಾನಿಗಳ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಎಲ್ಲರೂ ಸುರಕ್ಷಿತವಾಗಿರುವಂತೆ ಮನವಿ ಮಾಡಿದ್ದಾರೆ.   

6 /8

ಅಲ್ಲದೆ, ವಿಡಿಯೋ ಸಹ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ನಟಿಯ ತೊಡೆಗೆ ತುಂಬಾ ಗಂಭೀರ ಗಾಯವಾಗಿರುವುದನ್ನು ಕಾಣಬಹುದು..   

7 /8

ರೋಶಿನಿ ವಾಲಿಯಾ ಜನಪ್ರಿಯ ಕಾರ್ಯಕ್ರಮ 'ಭಾರತ್ ಕಾ ವೀರ್ ಪುತ್ರ: ಮಹಾರಾಣಾ ಪ್ರತಾಪ್' ನಲ್ಲಿನ ಪಾತ್ರಕ್ಕೆ ಹೆಸರುವಾಸಿಯಾಗಿದ್ದಾರೆ.   

8 /8

'ಮೇ ಲಕ್ಷ್ಮಿ ತೇರೆ ಅಂಗನ್ ಕಿ', 'ದೇವೋನ್ ಕೆ ದೇವ್ ಮಹಾದೇವ್...', 'ಭಾರತ್ ಕಾ ವೀರ್ ಪುತ್ರ - ಮಹಾರಾಣಾ ಪ್ರತಾಪ್', 'ಯೇ ವದಾ ರಹಾ' ಸೇರಿದಂತೆ ಮುಂತಾದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.