ಏಷ್ಯಾಕಪ್ 2022ರಲ್ಲಿ 5 ಆಟಗಾರರ ಪ್ರದರ್ಶನ ಅತ್ಯುತ್ತಮವಾಗಿತ್ತು. ಟೂರ್ನಿಯುದ್ದಕ್ಕೂ ಈ ಆಟಗಾರರು ತಮ್ಮ ಪ್ರಾಬಲ್ಯ ಮೆರೆದರು.
ನವದೆಹಲಿ: ಬಲಿಷ್ಠ ಪಾಕಿಸ್ತಾನವನ್ನು ಮಣಿಸುವ ಮೂಲಕ ಶ್ರೀಲಂಕಾ 6ನೇ ಬಾರಿ ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸತತ 5 ಪಂದ್ಯಗಳನ್ನು ಗೆಲ್ಲುವ ಮೂಲಕ ಲಂಕಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಮುಂಬರುವ T20 ವಿಶ್ವಕಪ್ 2022ರ ದೃಷ್ಟಿಯಿಂದ ಈ ಪಂದ್ಯಾವಳಿ ಎಲ್ಲಾ ತಂಡಗಳಿಗೆ ಬಹಳ ಮುಖ್ಯವಾಗಿತ್ತು. ಏಷ್ಯಾಕಪ್ 2022ರಲ್ಲಿ 5 ಆಟಗಾರರ ಪ್ರದರ್ಶನ ಅತ್ಯುತ್ತಮವಾಗಿತ್ತು. ಟೂರ್ನಿಯುದ್ದಕ್ಕೂ ಈ ಆಟಗಾರರು ತಮ್ಮ ಪ್ರಾಬಲ್ಯ ಮೆರೆದರು. ಇದೇ ಆಟಗಾರರು T20 ವಿಶ್ವಕಪ್ನಲ್ಲಿ ತಮ್ಮ ತಂಡಗಳಿಗೆ ಗೆಲುವು ತಂದುಕೊಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಯಾರು ಈ ಐವರು ಆಟಗಾರರು ಗೊತ್ತಾ..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಟೀಂ ಇಂಡಿಯಾದ ಬಲಿಷ್ಠ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿಗೆ ಏಷ್ಯಾ ಕಪ್ 2022 ಅತ್ಯಂತ ವಿಶೇಷವಾಗಿತ್ತು. ವಿರಾಟ್ ಕೊಹ್ಲಿ ಫಾರ್ಮ್ಗೆ ಮರಳಿದ್ದಾರೆ. ಇದೀಗ ಅವರು ಟಿ-20 ವಿಶ್ವಕಪ್ನಲ್ಲಿ ಎಲ್ಲಾ ತಂಡಗಳಿಗೆ ದೊಡ್ಡ ಭಯ ಹುಟ್ಟಿಸಿದ್ದಾರೆ. ಏಷ್ಯಾಕಪ್ನಲ್ಲಿ ಕೊಹ್ಲಿ 5 ಇನ್ನಿಂಗ್ಸ್ಗಳಲ್ಲಿ 92.00 ಸರಾಸರಿಯಲ್ಲಿ 276 ರನ್ ಗಳಿಸಿದರು.
ಪಾಕಿಸ್ತಾನದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ಈ ಟೂರ್ನಿಯ ಅತ್ಯಂತ ಯಶಸ್ವಿ ಬ್ಯಾಟ್ಸ್ಮನ್ ಆಗಿದ್ದರು. ಮೊಹಮ್ಮದ್ ರಿಜ್ವಾನ್ 6 ಇನ್ನಿಂಗ್ಸ್ಗಳಲ್ಲಿ 56.20 ಸರಾಸರಿಯಲ್ಲಿ 281 ರನ್ ಗಳಿಸಿದರು. ಅವರು T20 ವಿಶ್ವಕಪ್ನಲ್ಲಿ ಪಾಕಿಸ್ತಾನದ ಅತಿದೊಡ್ಡ ಮ್ಯಾಚ್ ವಿನ್ನರ್ ಆಗಬಹುದು.
ಟೀಂ ಇಂಡಿಯಾದ ಮಾರಕ ಬೌಲರ್ ಭುವನೇಶ್ವರ್ ಕುಮಾರ್ ಅವರಿಗೂ ಈ ಟೂರ್ನಿ ಅದ್ಭುತವಾಗಿತ್ತು. ಏಷ್ಯಾಕಪ್ 2022ರಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಅವರು 5 ಪಂದ್ಯಗಳಲ್ಲಿ 6.05ರ ಎಕಾನಮಿಯಲ್ಲಿ 11 ವಿಕೆಟ್ಗಳನ್ನು ಪಡೆದರು.
ಶ್ರೀಲಂಕಾದ ವನಿಂದು ಹಸರಂಗ ಏಷ್ಯಾಕಪ್ 2022ರ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಅಬ್ಬರಿಸಿರುವ ವನಿಂದು ಹಸರಂಗ ಟಿ-20 ವಿಶ್ವಕಪ್ನಲ್ಲಿ ಎಲ್ಲಾ ತಂಡಗಳಿಗೆ ಹೆದರಿಕೆ ಹುಟ್ಟಿಸಿದ್ದಾರೆ. ಹಸರಂಗ 6 ಪಂದ್ಯಗಳಲ್ಲಿ 9 ವಿಕೆಟ್ ಪಡೆದು ಮಿಂಚಿದ್ದಾರೆ.
ಪಾಕಿಸ್ತಾನದ ಮೊಹಮ್ಮದ್ ನವಾಜ್ ಏಷ್ಯಾಕಪ್ನಲ್ಲಿ ತಮ್ಮ ಅದ್ಭುತ ಬೌಲಿಂಗ್ನಿಂದ ಅದ್ಭುತ ಪ್ರದರ್ಶನ ನೀಡಿದರು. 6 ಪಂದ್ಯಗಳಲ್ಲಿ ಈ ಪಾಕ್ ಬೌಲರ್ 8 ವಿಕೆಟ್ ಪಡೆದಿದ್ದಾರೆ. ಅದೇ ರೀತಿ ಭಾರತ ವಿರುದ್ಧ 42 ರನ್ಗಳ ಇನ್ನಿಂಗ್ಸ್ ಆಡುವ ಮೂಲಕ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.