Cheapest And Best Milage Bikes - ದೇಶದಲ್ಲಿ ಹೆಚ್ಚಾಗುತ್ತಿರುವ ಪೆಟ್ರೋಲ್-ಡಿಸೇಲ್ ಬೆಲೆ ಹಿನ್ನೆಲೆ ಎಲ್ಲರೂ ಕಂಗಾಲಾಗಿದ್ದಾರೆ. ಪೆಟ್ರೋಲ್ ಬೆಲೆಯಂತೂ ಹಲವು ನಗರಗಳಲ್ಲಿ ಶತಕ ಬಾರಿಸಿದೆ. ಪೆಟ್ರೋಲ್ ದರದಲ್ಲಿ ಆಗುತ್ತಿರುವ ಈ ಬೆಲೆ ಏರಿಕೆ ನಿಮ್ಮ ಜೇಬಿಗೆ ಭಾರಿ ಬೀಳುವ ಸಾಧ್ಯತೆ ಇದೆ,
Cheapest And Best Milage Bikes - ದೇಶದಲ್ಲಿ ಹೆಚ್ಚಾಗುತ್ತಿರುವ ಪೆಟ್ರೋಲ್-ಡಿಸೇಲ್ ಬೆಲೆ ಹಿನ್ನೆಲೆ ಎಲ್ಲರೂ ಕಂಗಾಲಾಗಿದ್ದಾರೆ. ಪೆಟ್ರೋಲ್ ಬೆಲೆಯಂತೂ ಹಲವು ನಗರಗಳಲ್ಲಿ ಶತಕ ಬಾರಿಸಿದೆ. ಪೆಟ್ರೋಲ್ ದರದಲ್ಲಿ ಆಗುತ್ತಿರುವ ಈ ಬೆಲೆ ಏರಿಕೆ ನಿಮ್ಮ ಜೇಬಿಗೆ ಭಾರಿ ಬೀಳುವ ಸಾಧ್ಯತೆ ಇದೆ ಆದರೆ, ಜೀವನದ ವೇಗ ಕಡಿಮೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಇಂದು ನಾವು ನಿಮಗೆ ಅಗ್ಗದ ದರದಲ್ಲಿ ಹೈ ಮೈಲೇಜ್ ನೀಡುವ ಬೈಕ್ (Bikes) ಗಳ ಕುರಿತು ಹೇಳಲಿದ್ದೇವೆ.
ಇದನ್ನೂ ಓದಿ- Upcoming Electric Scooters: ಗಗನಮುಖಿಯಾದ ಪೆಟ್ರೋಲ್ ದರ, ಚಿಂತೆ ಬಿಟ್ಟು ಈ ವರದಿ ಓದಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
Cheapest And Best Milage Bikes - Hero MotoCorps ನಿಂದ ಹಿಡಿದು Bajaj ಹಾಗೂ TVS Motorsನ ಈ ಅಗ್ಗದ ದರದ ಬೈಕ್ ಗಳು ನಿಮಗೆ ಉತ್ತಮ ಆಯ್ಕೆ ಸಾಬೀತಾಗಲಿವೆ. ಕಮ್ಯೂಟರ್ಸ್ ಸೆಗ್ಮೆಂಟ್ ನಲ್ಲಿ ಈ ಬೈಕ್ ಗಳು ಭಾರಿ ಖ್ಯಾತಿಯನ್ನು ಪಡೆದಿವೆ. ಅತ್ಯುತ್ತಮ ಪರ್ಫಾರ್ಮೆನ್ಸ್, ಕಡಿಮೆ ಬೆಲೆ ಹಾಗೂ ಲೋ ಮೆಂಟೆನೆನ್ಸ್ ಕಾರಣ ಈ ಬೈಕ್ ಗಳನ್ನು ಜನರು ಹೆಚ್ಚಾಗಿ ಮೆಚ್ಚುತ್ತಿದ್ದಾರೆ. ಹಾಗಾದರೆ ಬನ್ನಿ ದೇಶದಲ್ಲಿ ಅತ್ಯಂತ ಅಗ್ಗದ ಬೆಲೆಯಲ್ಲಿ ದೊರೆಯುವ ಹಾಗೂ ಉತ್ತಮ ಮೈಲೇಜ್ ನೀಡುವ ಬೈಕ್ ಗಳ ಕುರಿತು ತಿಳಿದುಕೊಳ್ಳೋಣ.
1. Bajaj CT 100 - ಬಜಾಜ್ ಆಟೋದ ಅಗ್ಗದ ಬೈಕು ಸಿಟಿ 100 ತನ್ನ ವಿಶೇಷ ಲಕ್ಷಣಗಳು ಮತ್ತು ಉತ್ತಮ ಮೈಲೇಜ್‌ಗಾಗಿ ಹೆಸರುವಾಸಿಯಾಗಿದೆ. ಇತ್ತೀಚೆಗೆ, ಕಂಪನಿಯು ತನ್ನ ಬೈಕುಗಳ ಬೆಲೆಯನ್ನು ಹೆಚ್ಚಿಸಿದೆ. ಈ ಬೈಕ್‌ನಲ್ಲಿ ಕಂಪನಿಯು 102 ಸಿಸಿ ಸಾಮರ್ಥ್ಯದ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಅನ್ನು ಬಳಸಿದ್ದು ಅದು 7.9 ಪಿಎಸ್ ಪವರ್ ಮತ್ತು 8.34 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸಸ್ಪೆನ್ಶನ್ ಮತ್ತು ಹಿಂಭಾಗದಲ್ಲಿ ಸ್ಪ್ರಿಂಗ್ ಸಸ್ಪೆನ್ಶನ್ ಹೊಂದಿದೆ. ಗ್ಲೋಸಿ ಎಬೊನಿ ಬ್ಲ್ಯಾಕ್, ಮ್ಯಾಟ್ ಆಲಿವ್ ಗ್ರೀನ್, ಗ್ಲೋಸ್ ಫೇಮ್ ರೆಡ್ ಸೇರಿದಂತೆ ಮೂರು ವಿಭಿನ್ನ ಪೇಂಟ್ ಸ್ಕೀಮ್‌ಗಳೊಂದಿಗೆ ಬೈಕು ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಬೈಕ್ ನ ಆರಂಭಿಕ ಬೆಲೆ: 47,654 ರೂ.(ದೆಹಲಿ ಎಕ್ಸ್ ಷೋ ರೂಮ್ ಬೆಲೆ) ಮೈಲೇಜ್ : 80 ಕಿಲೋಮೀಟರ್ / ಲೀಟರ್.
2.Hero HF Deluxe - ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಹೀರೋ ಮೊಟೊಕಾರ್ಪ್‌ನ ಅಗ್ಗದ ಬೈಕು ಎಚ್‌ಎಫ್ ಡಿಲಕ್ಸ್ ಒಟ್ಟು ಐದು ರೂಪಾಂತರಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಕಂಪನಿಯು ಈ ಬೈಕ್‌ನಲ್ಲಿ 97.2 ಸಿಸಿ ಸಾಮರ್ಥ್ಯದ ಎಂಜಿನ್ ಬಳಸಿದ್ದು, ಇದು 8 ಪಿಎಸ್ ಪವರ್ ಮತ್ತು 8.05 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರ ಬೇಸ್ ಕಿಕ್ ಸ್ಟಾರ್ಟ್ ಸ್ಪೋಕ್ ವೀಲ್ ರೂಪಾಂತರದ ಬೆಲೆ 50,200 ರೂ. ಗಳಷ್ಟಾಗಿದೆ. ಇದೇ ವೇಳೆ ಅಲಾಯ್ ವೀಲ್ ರೂಪಾಂತರದ ಬೆಲೆಯನ್ನು 51,200 ರೂ ನಿಗದಿಪಡಿಸಲಾಗಿದೆ. ಇದರ ಟಾಪ್ ವೆರಿಯಂಟ್ ಸೆಲ್ಫ್ ಸ್ಟಾರ್ಟ್ FI-i3s ರೂಪಾಂತರದ ಬೆಲೆ 61,225 ರೂ. ಆಗಿದೆ. ಬೈಕ್ ನ ಆರಂಭಿಕ ಬೆಲೆ: 50, 200 ರೂ.(ದೆಹಲಿ ಎಕ್ಸ್ ಷೋರೂಮ್ ಬೆಲೆ) ಮೈಲೇಜ್: 70 ಕಿ.ಮೀ/ಲೀಟರ್
3. TVS Sport - ಟಿವಿಎಸ್ ಮೋಟಾರ್ಸ್‌ನ ಅತ್ಯಂತ ಒಳ್ಳೆಯ ಬೈಕ್ ಆಗಿರುವ Sports ಬೆಲೆಯನ್ನೂ ಕೂಡ ಇತ್ತೀಚೆಗೆ ಹೆಚ್ಚಿಸಲಾಗಿದೆ. ಕಂಪನಿಯು ಈ ಬೈಕ್‌ನಲ್ಲಿ 109.7 ಸಿಸಿ ಸಾಮರ್ಥ್ಯದ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಬಳಸಿದೆ. ಇದು 8.29PS ಪಾವರ್ ಮತ್ತು 8.7Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅತ್ಯುತ್ತಮ ಮೈಲೇಜ್ಗಾಗಿ ಈ ಬೈಕ್‌ನ ಹೆಸರನ್ನು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಿಸಲಾಗಿದೆ. ಈ ಬೈಕು ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ 9.28 ಲೀಟರ್ ಇಂಧನದಲ್ಲಿ 1021.90 ಕಿ.ಮೀ ಪ್ರಯಾಣಿಸಿದ ಹಳೆಯ ದಾಖಲೆಯನ್ನು ಮುರಿದಿದೆ. ಈ ಬೈಕ್‌ನಲ್ಲಿ ಬಳಸುವ ಇಟಿಎಫ್‌ಐ ತಂತ್ರಜ್ಞಾನವು ತನ್ನ ಮೈಲೇಜ್ ಅನ್ನು ಶೇಕಡಾ 15 ರಷ್ಟು ಹೆಚ್ಚಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಆರಂಭಿಕ ಬೆಲೆ: 56,100 ರೂ.(ದೆಹಲಿ ಎಕ್ಸ್ ಷೋ ರೂಮ್ ಬೆಲೆ) ಮೈಲೇಜ್: 110 ಕಿ. ಮೀ (ಏಷ್ಯಾ ಬುಕ್ ಆಫ್ ರಿಕಾರ್ಡ್ಸ್) ಸೂಚನೆ - ಇಲ್ಲಿ ನೀಡಲಾಗಿರುವ ಬೈಕ್ ಬೆಲೆ ಹಾಗೂ ಮೈಲೇಜ್ ಕುರಿತಾದ ಮಾಹಿತಿ ಮಾಧ್ಯಮ ಮಾಹಿತಿಯನ್ನು ಆಧರಿಸಿದೆ. ಬೈಕ್ಸ್ ಗಳ ಮೈಲೇಜ್, ಡ್ರೈವಿಂಗ್ ಸ್ಟೈಲ್ ಹಾಗೂ ರಸ್ತೆಗಳ ಪರಿಸ್ಥಿತಿಯನ್ನು ಅವಲಂಭಿಸಿದೆ. ಆದರೆ, ಕಳೆದ ವರ್ಷ ಆಗಸ್ಟ್ 13 ರಂದು TVS ನಡೆಸಿದ ಒಂದು ಟೆಸ್ಟಿಂಗ್ ನಲ್ಲಿ ತಾನೇ ಸೃಷ್ಟಿಸಿದ 76.40 ಕಿ.ಮೀ ಪ್ರತಿ ಲೀಟರ್ ಮೈಲೇಜ್ ರಿಕಾರ್ಡ್ ದಾಖಲೆಯನ್ನು ಮುರಿದಿದೆ.