Mercedes-Benz ಭಾರತದಲ್ಲಿ ಮೊದಲ ಬಾರಿಗೆ AMG GT ಬ್ಲಾಕ್ ಸಿರೀಸ್ ಕಾರನ್ನು ವಿತರಿಸಿದೆ. ಈ ಕಾರಿನ ಬೆಲೆ 5.5 ಕೋಟಿ ರೂ. ಇದೆ. (ದೆಹಲಿ ಎಕ್ಸ್ ಶೋ ರೂಂ ಬೆಲೆ).
ನವದೆಹಲಿ: 6 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಭಾರತದ ಮೊದಲ Mercedes AMG GT ಬ್ಲಾಕ್ ಸಿರೀಸ್ ಕಾರನ್ನು ಬೆಂಗಳೂರಿನ ಉದ್ಯಮಿ ಭೂಪೇಶ್ ರೆಡ್ಡಿ ಖರೀದಿಸಿದ್ದಾರೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
Mercedes-Benz ಭಾರತದಲ್ಲಿ ಮೊದಲ ಬಾರಿಗೆ AMG GT ಬ್ಲಾಕ್ ಸಿರೀಸ್ ಕಾರನ್ನು ವಿತರಿಸಿದೆ. ಈ ಕಾರಿನ ಬೆಲೆ 5.5 ಕೋಟಿ ರೂ. (ದೆಹಲಿಯ ಎಕ್ಸ್ ಶೋ ರೂಂ ದರ). ಸಂರಚನೆಗಳನ್ನು ಅವಲಂಬಿಸಿ ಬೆಲೆ ಮತ್ತಷ್ಟು ಹೆಚ್ಚಾಗಬಹುದು. ಬೆಂಗಳೂರಿನ ಉದ್ಯಮಿ ಭೂಪೇಶ್ ರೆಡ್ಡಿ ಈ ಕಾರಿನ ಹೆಮ್ಮೆಯ ಮಾಲೀಕರಾಗಿದ್ದಾರೆ.
Mercedes AMG GT ಬ್ಲ್ಯಾಕ್ ಸರಣಿಯು ವಿಶ್ವದ ಅತ್ಯಂತ ಶಕ್ತಿಶಾಲಿ ಉತ್ಪಾದನಾ ಕಾರುಗಳಲ್ಲಿ ಒಂದಾಗಿದೆ. ಈ ಕಾರು 2-door formatನಲ್ಲಿ ಬರುತ್ತದೆ. ಇದು ಕೇವಲ 3.2 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿ.ಮೀ ಮತ್ತು ಕೇವಲ 9 ಸೆಕೆಂಡುಗಳಲ್ಲಿ ಗಂಟೆಗೆ 0-200 ಕಿ.ಮೀ ವೇಗವನ್ನು ಕ್ರಮಿಸುತ್ತದೆ. ಈ ಕಾರಿನ ಗರಿಷ್ಠ ವೇಗ ಗಂಟೆಗೆ 325 ಕಿ.ಮೀ ಆಗಿದೆ. ಭಾರತದ ಮೊದಲ ದುಬಾರಿ ಬೆಲೆಯ ಕಾರನ್ನು ಭೂಪೇಶ್ ರೆಡ್ಡಿಯವರಿಗೆ ತಲುಪಿಸಿರುವುದನ್ನು ಮರ್ಸಿಡಿಸ್ ಖಚಿತಪಡಿಸಿದೆ. Mercedes-Benz ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಾರ್ಟಿನ್ ಶ್ವೆಂಕ್ ಹೇಳಿಕೆಯಲ್ಲಿ ಕಂಪನಿಯು ಕೇವಲ 2 ಕಾರುಗಳನ್ನು ಮಾತ್ರ ಭಾರತದಲ್ಲಿ ವಿತರಿಸಲಿದೆ ಎಂದು ತಿಳಿಸಿದ್ದಾರೆ.
ಭೂಪೇಶ್ ರೆಡ್ಡಿ ದಕ್ಷಿಣ ಭಾರತದಲ್ಲಿ ಚಿರಪರಿಚಿತ ಹೆಸರು. ಇವರು ವೃತ್ತಿಯಲ್ಲಿ ಉದ್ಯಮಿಯಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಭೂಪೇಶ್ ರೆಡ್ಡಿ ಅವರು ಬ್ರೆನ್ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ ಎಂಬ ನಿರ್ಮಾಣ ಕಂಪನಿಯ ನಿರ್ದೇಶಕರಾಗಿದ್ದಾರೆ. ಅವರು Brengarage ಎಂಬ ಯೂಟ್ಯೂಬ್ ಚಾನೆಲ್ ಸಹ ನಡೆಸುತ್ತಿದ್ದಾರೆ.
ಭೂಪೇಶ್ ರೆಡ್ಡಿಯವರು ದೇಶದ ಪ್ರಮುಖ ಕಾರು ಉತ್ಸಾಹಿಗಳಲ್ಲಿ ಒಬ್ಬರು. ಅವರ ಗ್ಯಾರೇಜ್ನಲ್ಲಿ ಹಲವಾರು ದುಬಾರಿ ಕಾರುಗಳ ದೊಡ್ಡ ಸಂಗ್ರಹವೇ ಇದೆ. ಇದಕ್ಕೆ ಅವರು ಬ್ರೆಂಗರೇಜ್ ಎಂದು ಹೆಸರಿಟ್ಟಿದ್ದಾರೆ. ಇವರ ಬಳಿ ಅನೇಕ ಸೂಪರ್ಕಾರ್ಗಳು ಸಹ ಇವೆ.