Champions Trophy: ಟೀಮ್ ಇಂಡಿಯಾ ಕ್ರಿಕೆಟ್ ತಂಡದ ಜರ್ಸಿ ಮೇಲೆ ಪಾಕಿಸ್ತಾನದ ಹೆಸರು..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಸೋಮವಾರದಂದು ಭಾರತೀಯ ಕ್ರಿಕೆಟ್ ತಂಡವು 2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ತಮ್ಮ ಜೆರ್ಸಿಯನ್ನು ಅನಾವರಣಗೊಳಿಸಿದೆ. ಭಾರತದ ನಾಯಕ ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ ಮತ್ತು ಅರ್ಷದೀಪ್ ಸಿಂಗ್ ಕ್ಯಾಮೆರಾಗಳಿಗೆ ಹೊಸ ಜರ್ಸಿಯಲ್ಲಿ ಪೋಸ್ ನೀಡಿದ್ದಾರೆ.ಆದ ಈಗ ಈ ಜರ್ಸಿಯಲ್ಲಿ ಪಾಕಿಸ್ತಾನದ ಹೆಸರಿರುವುದು ಎಲ್ಲರ ಗಮನ ಸೆಳೆದಿದೆ. .  

2 /5

2025 ರ ಚಾಂಪಿಯನ್ಸ್ ಟ್ರೋಫಿಗೆ ಮುಂಚಿತವಾಗಿ ಐಸಿಸಿ ಪ್ರಶಸ್ತಿಗಳು ಮತ್ತು ವರ್ಷದ ತಂಡದ ಕ್ಯಾಪ್‌ಗಳನ್ನು ಪಡೆದ ಭಾರತೀಯ ಆಟಗಾರರ ಛಾಯಾಚಿತ್ರಗಳನ್ನು ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ) ಹಂಚಿಕೊಂಡಿದೆ. ಈ ಫೋಟೋಗಳಲ್ಲಿ ಆಟಗಾರರು ಪಂದ್ಯಾವಳಿಗಾಗಿ ತಮ್ಮ ಹೊಸ ಉಡುಪನ್ನು ಧರಿಸಿರುವುದು ಕಂಡುಬಂದಿದೆ, ಅದರಲ್ಲಿ ಪಂದ್ಯಾವಳಿಯ ಲೋಗೋ ಮತ್ತು ಆತಿಥೇಯ ಪಾಕಿಸ್ತಾನದ ಹೆಸರು ಮುದ್ರಿಸಲಾಗಿತ್ತು.  

3 /5

ಪಂದ್ಯಾವಳಿಯ ಅಧಿಕೃತ ಲೋಗೋದ ಭಾಗವಾಗಿ ಪಾಕಿಸ್ತಾನದ ಮುದ್ರೆಯನ್ನು ಹೊಂದಿರುವ ಜೆರ್ಸಿಗಳನ್ನು ಭಾರತ ಧರಿಸುವುದಿಲ್ಲ ಎಂಬ ಊಹಾಪೋಹಗಳು ಹರಡಿದ್ದವು. ಆದಾಗ್ಯೂ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಭಾರತ ತಂಡವು ಐಸಿಸಿಯ ಮಾರ್ಗಸೂಚಿಗಳನ್ನು ಪಾಲಿಸುತ್ತದೆ ಎಂದು ದೃಢಪಡಿಸಿದ್ದಾರೆ.

4 /5

ಇತ್ತೀಚಿನ ದಿನಗಳಲ್ಲಿ ಭಾರತದ ಜೆರ್ಸಿಯ ಮೇಲೆ ಪಾಕಿಸ್ತಾನದ ಹೆಸರು ಮುದ್ರಿಸಿರುವುದು ಇದೇ ಮೊದಲು, ಏಕೆಂದರೆ 2023 ರ ಏಷ್ಯಾಕಪ್ ಟೂರ್ನಿಯೂ ಪಾಕಿಸ್ತಾನದಲ್ಲಿ ನಡೆದಿತ್ತು, ಆಗ ಯಾವುದೇ ತಂಡಗಳು ತಮ್ಮ ಜೆರ್ಸಿಯ ಮೇಲೆ ಆತಿಥೇಯರ ಹೆಸರನ್ನು ಹೊಂದಿರಲಿಲ್ಲ.

5 /5

ಐಸಿಸಿ ಪ್ರಶಸ್ತಿಗಳಲ್ಲಿ, ರೋಹಿತ್ ಶರ್ಮಾ ಐಸಿಸಿ ವರ್ಷದ ಏಕದಿನ ತಂಡದಲ್ಲಿ ಸ್ಥಾನ ಪಡೆದರೆ, ಜಡೇಜಾ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮತ್ತೊಂದೆಡೆ, ಹಾರ್ದಿಕ್ ಪಾಂಡ್ಯ ಮತ್ತು ಅರ್ಷದೀಪ್ ಸಿಂಗ್ ಐಸಿಸಿ ವರ್ಷದ ಟಿ20ಐ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.