Chanakya Neeti for Marriage: ಯಾವುದೇ ಒಂದು ಕುಟುಂಬವನ್ನು ನೋಡಿಕೊಳ್ಳಲು ಸಾಧ್ಯವಾಗದ ಮಹಿಳೆಯರನ್ನು ಮದುವೆಯಾಗಬಾರದು ಅಂತಾ ಚಾಣಕ್ಯರು ಹೇಳುತ್ತಾರೆ. ಮಹಿಳೆ ತನ್ನ ಮನೆ ಮತ್ತು ಕುಟುಂಬವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಪತಿಗೆ ಎಲ್ಲಾ ವಿಷಯಗಳಲ್ಲಿ ಸಲಹೆ ಮತ್ತು ಸೂಚನೆಗಳನ್ನು ನೀಡುವ ಮಟ್ಟದಲ್ಲಿರಬೇಕು.
Chanakya Neeti for Marriage: ಚಾಣಕ್ಯನ ನೀತಿಯು ಯಾವುದೇ ಒಬ್ಬ ವ್ಯಕ್ತಿ ಯಶಸ್ವಿಯಾಗಲು ಪ್ರೇರೇಪಿಸುತ್ತದೆ. ಆಚಾರ್ಯ ಚಾಣಕ್ಯರ ತತ್ವಗಳನ್ನು ಒಳಗೊಂಡಿರುವ ಚಾಣಕ್ಯ ನೀತಿ ಎಂಬ ಪುಸ್ತಕವನ್ನು ಪ್ರತಿಯೊಬ್ಬರೂ ಓದಬೇಕು. ಸಂತೋಷಕರ ಜೀವನದ ಅನೇಕ ರಹಸ್ಯಗಳನ್ನು ಈ ಪುಸ್ತಕದಲ್ಲಿ ತಿಳಿಸಲಾಗಿದೆ. ಮನುಷ್ಯನಾಗಿ ಜನ್ಮ ತಾಳಿದ ವ್ಯಕ್ತಿಯು ತನ್ನ ಬದುಕನ್ನು ಸುಧಾರಿಸಿಕೊಳ್ಳಲು ಅನುಸರಿಸಬೇಕಾದ ಧರ್ಮ, ಕರ್ಮ, ಪಾಪ ಹಾಗೂ ಪುಣ್ಯಗಳ ಬಗ್ಗೆ ಚಾಣಕ್ಯನ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಚಾಣಕ್ಯರ ಪ್ರಕಾರ, ಕೆಲವು ರೀತಿಯ ಮಹಿಳೆಯರನ್ನು ಯಾವುದೇ ಕಾರಣಕ್ಕೂ ಮದುವೆಯಾಗಬಾರದು. ಏಕೆಂದರೆ ಇಂತಹ ಮಹಿಳೆಯರು ಪುರುಷರ ಜೀವನವನ್ನೇ ಹಾಳುಮಾಡುತ್ತಾರೆ. ಚಾಣಕ್ಯನ ಪ್ರಕಾರ ಎಂತಹ ಮಹಿಳೆಯರನ್ನು ಮದುವೆಯಾಗಬಾರದು ಎಂದುದನ್ನು ತಿಳಿಯಿರಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಬಹುತೇಕ ಪುರುಷರು ಸುಂದರ ಯುವತಿಯರನ್ನು ಪ್ರೀತಿಸಿ ಮದುವೆಯಾಗಲು ಬಯಸುತ್ತಾರೆ. ಆದರೆ ಚಾಣಕ್ಯನ ಪ್ರಕಾರ, ಕೇವಲ ಸೌಂದರ್ಯ ಸಾಕಾಗುವುದಿಲ್ಲ. ಉತ್ತಮ ಬುದ್ಧಿವಂತಿಕೆ & ಕೌಶಲ್ಯವನ್ನೂ ಹೊಂದಿರಬೇಕು. ಸೌಂದರ್ಯ ಎಂಬುದು ತಾತ್ಕಾಲಿಕ. ಜೀವನದಲ್ಲಿ ಬುದ್ಧಿವಂತಿಕೆ & ಕೌಶಲ್ಯಗಳು ತುಂಬಾ ಅಗತ್ಯವೆಂದು ಸಲಹೆ ನೀಡಿದ್ದಾರೆ.
ಚಾಣಕ್ಯನ ಪ್ರಕಾರ, ಸುಳ್ಳು ಹೇಳುವ ಮಹಿಳೆಯರನ್ನೂ ಎಂದಿಗೂ ಮದುವೆಯಾಗಬಾರದಂತೆ. ಇಂತಹವರು ಪತಿ & ಆತನ ಕುಟುಂಬದ ಸದಸ್ಯರಿಗೆ ಮೋಸ ಮಾಡುವ ಸಾಧ್ಯತೆಗಳು ಹೆಚ್ಚಿರುತ್ತದೆ. ಸುಳ್ಳು ಹೇಳಿದರೆ ಕುಟುಂಬದಲ್ಲಿ ಕಲಹ ಉಂಟಾಗುತ್ತದೆ. ಗಂಡ-ಹೆಂಡತಿಯ ನಡುವೆ ನಂಬಿಕೆಯ ಕೊರತೆ ಉಂಟಾಗುತ್ತದೆ. ಹೀಗಾಗಿ ಸುಳ್ಳು ಹೇಳುವವರನ್ನು ಯಾವುದೇ ಕಾರಣಕ್ಕೂ ಮದುವೆಯಾಗಬಾರದಂತೆ.
ಕೆಟ್ಟ ಸ್ವಭಾವ ಹೊಂದಿರುವ ಮಹಿಳೆಯೊಂದಿಗೆ ಏಳು ಹೆಜ್ಜೆ ಹಾಕಿದರೆ ನೀವು ಪ್ರತಿ ಹಂತದಲ್ಲೂ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಸದಾ ಸಿಟ್ಟು ಹಾಗೂ ಅಸೂಯೆ ತುಂಬಿರುವ ಹೆಂಗಸರು ಗಂಡನ ಬದುಕನ್ನೇ ನರಕವಾಗಿಸುತ್ತಾರೆ. ಹೀಗಾಗಿ ಇಂತಹವರಿಂದ ಆದಷ್ಟು ದೂರವಿರುವುದು ಉತ್ತಮ.
ಕೆಟ್ಟ ಕೌಟುಂಬಿಕ ಹಿನ್ನೆಲೆಯುಳ್ಳ ಮಹಿಳೆಯನ್ನು ಯಾವುದೇ ಕಾರಣಕ್ಕೂ ಮದುವೆಯಾಗಬಾರದು. ಇಂತವರು ತಮ್ಮ ಕುಟುಂಬದ ಸದಸ್ಯರಿಂದ ಕೆಟ್ಟ ಗುಣಗಳನ್ನು ಅಳವಡಿಸಿಕೊಳ್ಳಬಹುದು. ಇದರಿಂದ ಪುರುಷರು ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ.
ಯಾವುದೇ ಒಂದು ಕುಟುಂಬವನ್ನು ನೋಡಿಕೊಳ್ಳಲು ಸಾಧ್ಯವಾಗದ ಮಹಿಳೆಯರನ್ನು ಮದುವೆಯಾಗಬಾರದು ಅಂತಾ ಚಾಣಕ್ಯರು ಹೇಳುತ್ತಾರೆ. ಮಹಿಳೆ ತನ್ನ ಮನೆ ಮತ್ತು ಕುಟುಂಬವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಪತಿಗೆ ಎಲ್ಲಾ ವಿಷಯಗಳಲ್ಲಿ ಸಲಹೆ ಮತ್ತು ಸೂಚನೆಗಳನ್ನು ನೀಡುವ ಮಟ್ಟದಲ್ಲಿರಬೇಕು. ಮನೆಗೆಲಸ ಮಾಡಲಾಗದ ಮಹಿಳೆ ತನ್ನ ಗಂಡನಿಗೆ ಹೊರೆಯಾಗುತ್ತಾಳೆ.
ಚಾಣಕ್ಯನ ಪ್ರಕಾರ, ಒಬ್ಬ ಪುರುಷ ಧಾರ್ಮಿಕ ಅಥವಾ ಧರ್ಮನಿಷ್ಠೆ ಇಲ್ಲದ ಮಹಿಳೆಯನ್ನು ಮದುವೆಯಾಗಬಾರದು. ಅಲ್ಲದೇ ತನ್ನ ಕುಟುಂಬಕ್ಕೆ ವಿಶ್ವಾಸದ್ರೋಹ ಮಾಡುವ ಮಹಿಳೆಯನ್ನು ಯಾವುದೇ ಕಾರಣಕ್ಕೂ ನಂಬಬಾರದು. ಅವಳು ತನ್ನ ಪತಿಗೆ ವಿಶ್ವಾಸದ್ರೋಹಿ ಆಗುತ್ತಾಳೆ.