Diwali Photography Ideas : ಈ ದೀಪಾವಳಿಯಲ್ಲಿ ಅದ್ಭುತ ಕ್ಷಣಗಳನ್ನು ಸೆರೆಹಿಡಿಯುವಾಗ ಕೆಲವು ವಿಭಿನ್ನ ಭಂಗಿಗಳನ್ನು ಅಳವಡಿಸಿಕೊಳ್ಳಿ. ಜನರು ನಿಮ್ಮ ಫೋಟೋವನ್ನು ನೋಡಿದಾಗ, ಬೇರಗಾಗಿರಬೇಕು, ಹಾಗೆ ಪೋಸ್ ಕೊಟ್ಟರೆ ಒಳ್ಳೆಯದು ಅಲ್ವಾ.. ಬನ್ನಿ ದೀಪಾವಳಿಗೆ ಅತ್ಯುತ್ತಮ ಫೋಟೋ ಪೋಸ್ ಇಲ್ಲಿವೆ..
ತಟ್ಟೆಯಲ್ಲಿ ದೀಪಗಳನ್ನು ಇಟ್ಟು, ಅದನ್ನು ನಿಮ್ಮ ಕೈಯಲ್ಲಿ ಹಿಡಿದುಕೊಂಡು ಮೊಣಕಾಲಿನ ಮೇಲೆ ಕುಳಿತುಕೊಂಡು ಕ್ಯಾಮರಾಗೆ ಪೋಸ್ ನೀಡಿ. ಕ್ಯಾಮರಾ ಮುಂದೆ ಕೆಲವೊಂದಿಷ್ಟು ದೀಪಗಳನ್ನು ಇಟ್ಟು ಅದನ್ನು ಬ್ಲರ್ ಆಗುವ ರೀತಿ ಕ್ಯಾಮರಾ ಸೆಟ್ ಮಾಡಿ ಫೋಟೋ ತೆಗೆದುಕೊಳ್ಳಿ.. ಬೇಕಿದ್ರೆ ಮೇಲೆ ನೀಡಿರುವ ಫೋಟೊ ಒಮ್ಮೆ ಗಮನಿಸಿ.
ಗೋಡೆಗೆ ಚಿಕ್ಕ ಚಿಕ್ಕ ಲೈಟ್ಸ್ ಹಾಕಿ, ಒಂದು ಕೈಯಲ್ಲಿ ದೀಪವನ್ನು ಹಿಡಿದುಕೊಂಡು ಕ್ಯೂಟ್ ಸ್ಮೈಲ್ ನೀಡುತ್ತಾ ಕ್ಯಾಮರಾಗೆ ಪೋಸ್ ನೀಡಿ. ಉದಾರಹಣೆಗಾಗಿ ಈ ಫೋಟೋ ನೋಡಿ.
ಮನೆಯನ್ನು ದೀಪಗಳಿಂದ ಅಲಂಕರಿಸುವಾಗ ಮುಂದೆ ಸಾಕಷ್ಟು ದೀಪಗಳನ್ನು ಇರಿಸಿ, ಕೈಯಲ್ಲಿ ಮತ್ತೊಂದು ದೀಪವನ್ನು ಹಿಡಿದುಕೊಂಡು ನಕ್ಕರೆ ಸಾಕು.. ಈ ಮೇಲಿನ ಫೋಟೋ ಒಮ್ಮೆ ನೋಡಿ.
ದೀಪಾವಳಿ ಹಬ್ಬದಂದು ದೇವಸ್ಥಾನದಲ್ಲಿ ದೀಪೋತ್ಸವ ಮಾಡಲಾಗುತ್ತದೆ. ಅಲ್ಲಿಯೂ ನೀವು ಈ ಮೇಲಿನ ಫೋಟೋದಂತೆ ಅದ್ಭುತವಾದ ಫೋಟೋವನ್ನು ಕ್ಲಿಕ್ ಮಾಡಬಹುದು.
ಅತಿಥಿಗಳು ಮತ್ತು ಸಂಬಂಧಿಕರಿಗೆ ಉಡುಗೊರೆಗಳನ್ನು ಪ್ಯಾಕ್ ಮಾಡುವಾಗಲೂ ಸಹ ಸುಂದರವಾದ ಫೋಟೋವನ್ನು ಸಹ ಕ್ಲಿಕ್ ಮಾಡಬಹುದು.
ಈ ಬೆಳಕಿನ ಹಬ್ಬದಲ್ಲಿ ಕುಟುಂಬ ಸಮೇತ ದೀಪ ಹಚ್ಚುವಾಗ ಫ್ಯಾಮಿಲಿ ಫೋಟೋ ತೆಗೆದರೆ ಖಂಡಿತವಾಗಿಯೂ ಅದು ಅದ್ಭುತ ಕ್ಷಣವಾಗಿರುತ್ತದೆ.
ಟೆರೇಸ್ ಅಥವಾ ಅಂಗಳದಲ್ಲಿ ಸುರ್ ಸುರ್ ಬತ್ತಿ ಹಚ್ಚಿ ಹೀಗೆ ಫೋಟೋಗೆ ಪೋಸ್ ನೀಡಿ. ನವದಂಪತಿಗೆ ಇದು ಹೇಳಿ ಮಾಡಿಸಿದ ಪೋಸ್.
ದೀಪದ ತಟ್ಟೆಯೊಂದಿಗೆ ಸುಂದರವಾದ ಚಿತ್ರವು ತುಂಬಾ ಸುಂದರವಾಗಿ ಕಾಣುತ್ತದೆ... ಅದನ್ನು ನೋಡುತ್ತ ಕ್ಯಾಮರಾಗೆ ಪೋಸ್ ನೀಡಿ.. ಮಸ್ ಫೋಟೋಸ್ ಬರ್ತವೆ.