D Roopa Viral Photos: ಖಡಕ್ ಪೊಲೀಸ್ ಆಫೀಸರ್ ಎಂದೇ ಖ್ಯಾತಿ ಪಡೆದಿರುವ ಐಪಿಎಸ್ ಅಧಿಕಾರಿ ಡಿ ರೂಪಾ ಅವರು ಸದ್ಯ ಖಾಕಿ ಬಿಟ್ಟು, ರೇಷ್ಮೆ ಸೀರೆಯಲ್ಲಿ ರಾಣಿಯಂತೆ ಕಂಗೊಳಿಸಿದ್ದಾರೆ. ಅವರ ಪೋಟೋಗಳನ್ನು ಫ್ಯಾಶನ್ ಡಿಸೈನರ್ ಹಾಗೂ ಸೆಲೆಬ್ರೆಟಿ ಸ್ಟೈಲಿಸ್ಟ್ ಭಾರ್ಗವಿ ಕೆ.ಆರ್ ಅವರು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡು, 'ಈ ಫೋಟೋ ಕೇವಲ ಫ್ಯಾಷನ್ ಮಾತ್ರ ಅಲ್ಲ, ಬದಲಾಗಿ ಮಹಿಳಾ ಶಕ್ತಿ ಹಾಗೂ ಸಬಲೀಕರಣದ ಪ್ರತೀಕ' ಎಂದು ಕ್ಯಾಪ್ಷನ್ ನೀಡಿದ್ದಾರೆ.
ಖಡಕ್ ಪೊಲೀಸ್ ಆಫೀಸರ್ ಎಂದೇ ಗುರುತಿಸಿಕೊಂಡ ಡಿ ರೂಪಾ ಅವರು ಖಾಕಿ ಬಿಟ್ಟು, ರೇಷ್ಮೆ ಸೀರೆಯಲ್ಲಿ ಮಿಂಚಿದ್ದಾರೆ.
ಬರೀ ಪೊಲೀಸ್ ಆಫೀಸರ್ ಮಾತ್ರವಲ್ಲದೇ ಸಂಗೀತದಲ್ಲಿ ಒಲವು ಹೊಂದಿರುವ ಇವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ತರಬೇತಿಯನ್ನು ಸಹ ಪಡೆದಿದ್ದಾರೆ. ಜೊತೆಗೆ ಇವರು ಭರತನಾಟ್ಯ ನೃತ್ಯಗಾರ್ತಿಯೂ ಆಗಿದ್ದಾರೆ.
ರಾಜ್ಯದ ಉನ್ನತ ಹುದ್ದೆಗಳಲ್ಲಿ ಒಂದಾದ ಆಂತರಿಕ ಭದ್ರತಾ ವಿಭಾಗದ ಐಜಿಪಿ ಆಗಿ ಸೇವೆ ಸಲ್ಲಿಸುತ್ತಿರುವ ಐಪಿಎಸ್ ಅಧಿಕಾರಿ ಡಿ. ರೂಪಾ
ಸದ್ಯ ಡಿ. ರೂಪಾ ಮೌದ್ಗಿಲ್ ಅವರು ನವರಾತ್ರಿ ಅಂಗವಾಗಿ ವಿಶೇಷ ಫೋಟೋ ಶೂಟ್ ಮಾಡಿಸಿದ್ದಾರೆ. ಅವರ ಪೋಟೋಗಳಿಗೆ ನೆಟ್ಟಿಗರು ಥೇಟ್ ರಾಣಿ ಚೆನ್ನಮ್ಮನ ಹಾಗೇ ಕಾಣಿಸುತ್ತಿದ್ದೀರಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಇನ್ನು ಈ ಪೋಟೋಗಳನ್ನು ಹಂಚಿಕೊಂಡ ಫ್ಯಾಷನ್ ಡಿಸೈನರ್ ಭಾರ್ಗವಿ ಅವರು, "ಈ ಪೋಟೋ ಬರೀ ಫ್ಯಾಷನ್ ಅಲ್ಲ ಮಾತ್ರ ಅಲ್ಲ, ಅವರು ಶಕ್ತಿ, ಅನುಗ್ರಹ ಮತ್ತು ಸಬಲೀಕರಣದ ಸಾಕಾರ" ಎಂದು ಬರೆದುಕೊಂಡಿದ್ದಾರೆ.