Which Direction Do You Sleep In?: ಹಿಂದೂ ಧರ್ಮದ ಪ್ರಕಾರ ನಾವು ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಮಲಗಬೇಕು. ಪೂರ್ವ ದಿಕ್ಕಿಗೆ ತಲೆ ಇಟ್ಟು ಮಲಗುವುದರಿಂದ ಜ್ಞಾಪಕಶಕ್ತಿ, ಏಕಾಗ್ರತೆ, ಉತ್ತಮ ಆರೋಗ್ಯ, ಆಧ್ಯಾತ್ಮಿಕತೆಯತ್ತ ಒಲವು ವೃದ್ಧಿಸುತ್ತದಂತೆ.
Which Direction Do You Sleep In? ನಾವು ಯಾವ ದಿಕ್ಕಿಗೆ ಮಲಗಬೇಕು ಎಂಬುದರ ಬಗ್ಗೆ ನಿಮಗೆ ತಿಳಿದಿದಿಯೇ? ಈ ಬಗ್ಗೆ ಧರ್ಮಶಾಸ್ತ್ರದಲ್ಲಿ ಕೆಲವೊಂದು ನಿಯಮಗಳಿವೆ. ಇದರಿಂದ ನಮಗೆ ವೈಜ್ಞಾನಿಕವಾಗಿಯೂ ಒಳಿತಾಗುತ್ತದೆ. ಅದೇ ರೀತಿ ಬಾಗಿಲು ಇರುವ ದಿಕ್ಕಿಗೆ ತಲೆಹಾಕಿ ಮಲಗಬಹುದೇ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಸಾಮಾನ್ಯವಾಗಿ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಎಂದು ಶಾಸ್ತ್ರಗಳು ಹೇಳುತ್ತವೆ. ಇದು ವೈಜ್ಞಾನಿಕವಾಗಿಯೂ ಸತ್ಯ. ಭೂಮಿ ಪ್ರದಕ್ಷಿಣವಾಗಿ ಸುತ್ತುತ್ತದೆ. ಆದರೆ ನಾವು ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗುವುದರಿಂದ ಅದರ ವಿರುದ್ಧ ದಿಕ್ಕಿಗೆ ತಲೆಹಾಕಿ ಮಲಗಿದಂತಾಗುತ್ತದೆ. ಧಾರ್ಮಿಕವಾಗಿ ಉತ್ತರ ದಿಕ್ಕಿಗೆ ತಲೆ ಹಾಕುವುದು ಶ್ರೇಯಸ್ಕರವಲ್ಲವೆಂದು ನಂಬಲಾಗುತ್ತದೆ.
ಬಾಗಿಲು ಇರುವ ಕಡೆಗೆ ತಲೆ ಅಥವಾ ಕಾಲು ಹಾಕಿ ಮಲಗುವುದೂ ಶ್ರೇಯಸ್ಕರವಲ್ಲ. ನಮ್ಮ ಧರ್ಮಶಾಸ್ತ್ರದ ಪ್ರಕಾರ ಬಾಗಿಲು ದೇವರ ಸಾನಿಧ್ಯವನ್ನು ಹೊಂದಿರುತ್ತದೆ.
ಹೀಗಾಗಿ ಈ ದಿಕ್ಕಿಗೆ ತಲೆ ಅಥವಾ ಕಾಲು ಹಾಕಿ ಮಲಗುವುದು ಶುಭವಲ್ಲವೆಂಬ ನಂಬಿಕೆಯಿದೆ. ವಾಸ್ತು ಪ್ರಕಾರವೂ ಈ ರೀತಿ ಮಲಗುವುದರಿಂದ ನಕಾರಾತ್ಮಕ ಶಕ್ತಿ ಮನೆ ಪ್ರವೇಶಿಸುತ್ತದೆ.
ನಮ್ಮ ಪೂರ್ವಜರು ಮತ್ತು ದೇವರು ಬಾಗಿಲಿನ ಮೂಲಕ ಮನೆ ಪ್ರವೇಶ ಮಾಡುತ್ತಾರೆ. ಹೀಗಾಗಿ ಈ ದಿಕ್ಕಿಗೆ ತಲೆ ಅಥವಾ ಕಾಲು ಹಾಕಿ ಮಲಗವುದರಿಂದ ನೆಗೆಟಿವ್ ಎನರ್ಜಿ ಪ್ರವೇಶವಾಗಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಈ ದಿಕ್ಕಿಗೆ ಮಲಗಬಾರದು ಅಂತಾ ಶಾಸ್ತ್ರಗಳು ಹೇಳಿವೆ.
ಹಾಗಾದ್ರೆ ನಾವು ಯಾವ ದಿಕ್ಕಿಗೆ ಮಲಗುವುದು ಒಳ್ಳೆಯದು. ಹಿಂದೂ ಧರ್ಮದ ಪ್ರಕಾರ ನಾವು ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಮಲಗಬೇಕು. ಪೂರ್ವ ದಿಕ್ಕಿಗೆ ತಲೆ ಇಟ್ಟು ಮಲಗುವುದರಿಂದ ಜ್ಞಾಪಕಶಕ್ತಿ, ಏಕಾಗ್ರತೆ, ಉತ್ತಮ ಆರೋಗ್ಯ, ಆಧ್ಯಾತ್ಮಿಕತೆಯತ್ತ ಒಲವು ವೃದ್ಧಿಸುತ್ತದಂತೆ.