Electricity Bill: ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಗಗನಾಮುಖಿಯಾಗುತ್ತಿದೆ. ಹಾಗಾಗಿ, ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಉಳಿತಾಯ ಮಾಡಲು ಜನರು ಇನ್ನಿಲ್ಲದ ಪ್ರಯತ್ನ ಮಾಡುತ್ತಾರೆ. ಅದರಲ್ಲಿ ರಾತ್ರಿ ವೇಳೆ ಫ್ರೀಡ್ಜ್ ಆಫ್ ಮಾಡುವುದು ಕೂಡ ಒಂದು. ಆದರೆ, ರಾತ್ರಿ ವೇಳೆ ಫ್ರೀಡ್ಜ್ ಆಫ್ ಮಾಡುವುದರಿಂದ ನಿಜಕ್ಕೂ ವಿದ್ಯುತ್ ಬಿಲ್ ಕಡಿಮೆ ಬರುತ್ತಾ? ಇಲ್ಲಿದೆ ಮಾಹಿತಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾರ್ವಜನಿಕರಿಗೆ ವಿದ್ಯುತ್ ಬಿಲ್‌ನಿಂದ ಪರಿಹಾರ ನೀಡುವ ನಿಟ್ಟಿನಲ್ಲಿ ಜನಪ್ರಿಯ "ಗೃಹ ಜ್ಯೋತಿ" ಯೋಜನೆಯನ್ನು ಜಾರಿಗೆ ತಂದಿದೆ. ಆದಾಗ್ಯೂ, ಇನ್ನೂ ಕೂಡ ಕೆಲವರಿಗೆ ವಿದ್ಯುತ್ ಬಿಲ್ ಬವಣೆಯಿಂದ ಪರಿಹಾರವೇ ದೊರೆಯುತ್ತಿಲ್ಲ. ಅದಕ್ಕಾಗಿ ಕೆಲವರು ಕೆಲವು ತಂತ್ರಗಳನ್ನು ಬಳಸುತ್ತಿದ್ದಾರೆ. ಅದರಲ್ಲಿ, ರಾತ್ರಿ ವೇಳೆ ಫ್ರೀಡ್ಜ್ ಆಫ್ ಮಾಡುವುದು ಕೂಡ ಒಂದು ತಂತ್ರವಾಗಿದೆ. ಆದರೆ, ರಾತ್ರಿ ಸಮಯದಲ್ಲಿ ಫ್ರೀಡ್ಜ್ ಆಫ್ ಮಾಡುವುದರಿಂದ ಎಲೆಕ್ಟ್ರಿಕ್ ಬಿಲ್ ಕಡಿಮೆಯಾಗುತ್ತ? ಈ ಬಗ್ಗೆ ಇಲ್ಲಿದೆ ಮಾಹಿತಿ.
ರಾತ್ರಿ ವೇಳೆ ಫ್ರೀಡ್ಜ್ ಆಫ್ ಮಾಡುವುದರಿಂದ ವಿದ್ಯುತ್ ಬಿಲ್‌ನಿಂದ ಪರಿಹಾರ ದೊರೆಯುವುದಿಲ್ಲ. ಬದಲಿಗೆ ಫ್ರೀಡ್ಜ್ ನಲ್ಲಿ ಇರಿಸಿದ ಆಹಾರಗಳು ಹಾಳಾಗುತ್ತವೆ. ಹಾಗಾಗಿ ರಾತ್ರಿ ಸಮಯದಲ್ಲಿ ಫ್ರಿಡ್ಜ್ ಆಫ್ ಮಾಡುವ ಅಭ್ಯಾಸ ನಿಮಗೂ ಇದ್ದರೆ ಇಂದಿನಿಂದಲೇ ಈ ಅಭ್ಯಾಸವನ್ನು ಬಿಡಿ.
ಆದಾಗ್ಯೂ, ಕರೆಂಟ್ ಇಲ್ಲದಿದ್ದಾಗ, ಇಲ್ಲವೇ ನೀವೇ ಬೇಕಂತ ಫ್ರೀಡ್ಜ್ ಆಫ್ ಮಾಡಿದ್ದರೂ ಕೂಡ ಕೇವಲ ಮೂರ್ನಾಲ್ಕು ಗಂಟೆಗಳ ಕಾಲ ಹೀಗೆ ಮಾಡುವುದರಿಂದ ಏನೂ ತೊಂದರೆ ಆಗುವುದಿಲ್ಲ. ಅರ್ಥಾತ್, ಫ್ರೀಡ್ಜ್ ಆಫ್ ಆಗಿದ್ದರೂ ಕೂಡ ಮೂರ್ನಾಲ್ಕು ಗಂಟೆಗಳ ಕಾಲ ಅದು ತಂಪಾಗಿಯೇ ಇರುತ್ತದೆ. ಇದರಿಂದಾಗಿ ಆಹಾರ ಕೆಡುವುದಿಲ್ಲ.
ನೀವು ಫ್ರೀಡ್ಜ್ ಕ್ಲೀನ್ ಮಾಡುವಾಗ ಅದರೊಳಗೆ ಇರಿಸಿರುವ ಆಹಾರ ಪದಾರ್ಥಗಳನ್ನು ತೆಗೆದು ನಂತರ ಫ್ರೀಡ್ಜ್ ಅನ್ನು ಆಫ್ ಮಾಡಿ.
ನೀವು ನಿಜವಾಗಿಯೂ ನಿಮ್ಮ ಮನೆಯ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಲು ಬಯಸಿದರೆ ಅದಕ್ಕಾಗಿ ಒಳ್ಳೆಯ ರೇಟಿಂಗ್ ಹೊಂದಿರುವ ರೆಫ್ರಿಜರೇಟರ್‌ಗಳನ್ನು ಖರೀದಿಸಿ. ತಜ್ಞರ ಪ್ರಕಾರ, 4 ರಿಂದ 5 ಸ್ಟಾರ್ ರೇಟಿಂಗ್ ಹೊಂದಿರುವ ರೆಫ್ರಿಜರೇಟರ್‌ಗಳನ್ನು ಖರೀದಿಸಿದರೆ ಅವು ಹೆಚ್ಚು ವಿದ್ಯುತ್ ಬಳಸುವುದಿಲ್ಲ ಎಂದು ಹೇಳಲಾಗುತ್ತದೆ.