ಧನ್ತೇರಸ್ ದಿನದಂದು ಸಂಜೆ, ಈ ಕೆಲವು ಕೆಲಸಗಳನ್ನು ಮಾಡಿದರೆ ಲಕ್ಷ್ಮೀ ಮನೆಯಿಂದ ಹೊರ ನಡೆಯುತ್ತಾಳೆಯಂತೆ.
ಬೆಂಗಳೂರು : ದೀಪಾವಳಿ ಹಬ್ಬವು ಧನ್ತೇರಸ್ ದಿನದಿಂದ ಪ್ರಾರಂಭವಾಗುತ್ತದೆ. ದೀಪಾವಳೇ ಸಂದರ್ಭದಲ್ಲಿ ಲಕ್ಷ್ಮೀ ದೇವಿಯ ಆಶೀರ್ವಾದ ಪಡೆಯಲು ಅನೇಕ ಕೆಲಸಗಳನ್ನು ಮಾಡಲಾಗುತ್ತದೆ. ಆದರೆ, ಈ ದಿನ ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ,ಧನ್ತೇರಸ್ ದಿನದಂದು ಸಂಜೆ, ಈ ಕೆಲವು ಕೆಲಸಗಳನ್ನು ಮಾಡಿದರೆ ಲಕ್ಷ್ಮೀ ಮನೆಯಿಂದ ಹೊರ ನಡೆಯುತ್ತಾಳೆಯಂತೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಈ ಬಾರಿ ಧನ್ತೇರಸ್ ಹಬ್ಬವನ್ನು ಅಕ್ಟೋಬರ್ 23 ರಂದು ಆಚರಿಸಲಾಗುತ್ತದೆ. ಈ ದಿನ ಲಕ್ಷ್ಮೀ ದೇವಿಗೆ ಇಷ್ಟವಾದ ವಸ್ತುಗಳನ್ನು ಪೂಜಿಸುವುದರಿಂದ ಮನೆಯಲ್ಲಿ ಸದಾ ಸುಖ ಸಮೃದ್ದಿ ನೆಲೆಯಾಗುತ್ತದೆ. ಧನ್ತೇರಸ್ ದಿನದಂದು ಕುಬೇರ ದೇವ ಮತ್ತು ಧನ್ವಂತರಿ ದೇವನನ್ನು ಪೂಜಿಸಲಾಗುತ್ತದೆ.
ನಿರ್ದಿಷ್ಟ ದಿನ ಅಥವಾ ಪೂಜೆ-ಆಚರಣೆ ಇತ್ಯಾದಿಗಳ ನಂತರ ಮನೆಯನ್ನು ಖಾಲಿ ಬಿಡಬಾರದು ಎಂದು ಹೇಳಲಾಗುತ್ತದೆ. ಧನ್ತೇರಸ್ ದಿನದಿಂದ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಧನ್ತೇರಸ್ ದಿನದಂದು, ಮನೆಯನ್ನು ಖಾಲಿ ಬಿಡಬೇಡಿ. ಅನೇಕ ಬಾರಿ ಜನರು ಈ ದಿನ ಮನೆಗೆ ಬೀಗ ಹಾಕಿಕೊಂಡು ಶಾಪಿಂಗ್‌ಗೆ ಹೋಗುತ್ತಾರೆ.
ಧನ್ತೇರಸ್ ದಿನ ಸಂಜೆ ಯಾವುದೇ ರೀತಿಯ ವಹಿವಾಟು ಮಾಡಬೇಡಿ. ಧನ್ತೇರಸ್ ದಿನವನ್ನು ಲಕ್ಷ್ಮೀ ದೇವಿಗೆ ಸಮರ್ಪಿಸಲಾಗಿದೆ. ಈ ಕಾರಣದಿಂದ ಸಂಜೆ ಯಾವುದೇ ವಹಿವಾಟು ಮಾಡಬೇಡಿ. ಇದು ವ್ಯಕ್ತಿಯ ಆರ್ಥಿಕ ಸ್ಥಿತಿಯನ್ನು ದುರ್ಬಲಗೊಳಿಸುತ್ತದೆ.
ಲಕ್ಷ್ಮೀ ದೇವಿಗೆ ಬಿಳಿ ಬಣ್ಣವು ತುಂಬಾ ಪ್ರಿಯವಾಗಿದೆ ಎಂದು ಶಾಸ್ತ್ರಗಳಲ್ಲಿ ಬರೆಯಲಾಗಿದೆ. ಹಾಗಾಗಿ ಲಕ್ಷ್ಮೀ ದೇವಿಯನ್ನು ಮೆಚ್ಚಿಸಲು ಬಿಳಿ ಬಣ್ಣದ ವಸ್ತುಗಳನ್ನು ಮಾತ್ರ ಬಳಸಲಾಗುತ್ತದೆ. ಆದರೆ ಧನ್ತೇರಸ್ ದಿನದಂದು ಸಂಜೆ ಯಾರಿಗೂ ಬಿಳಿ ಬಣ್ಣದ ವಸ್ತುಗಳನ್ನು ದಾನ ಮಾಡಬೇಡಿ. ಹೀಗೆ ಮಾಡುವುದರಿಂದ ಲಕ್ಷ್ಮೀ ದೇವಿಯು ಕೋಪಗೊಂಡು ಮನೆಯಿಂದ ಹೊರಹೋಗುತ್ತಾಳೆ.