Tijori Tips: ತಮ್ಮ ಮನೆಯಲ್ಲಿರುವ ತಿಜೋರಿ ಯಾವಾಗಲು ಹಣದಿಂದ ತುಂಬಿ ತುಳುಕುತ್ತಿರಬೇಕು ಮತ್ತು ತಾಯಿ ಲಕ್ಷ್ಮಿಯ ಕೃಪೆ ಸದಾ ತಮ್ಮ ಮೇಲೆಯೇ ಇರಬೇಕು ಎನಿಸುವುದು ಸ್ವಾಭಾವಿಕ. ಆದರೆ, ಹಲವು ಬಾರಿ ಸಾಕಷ್ಟು ಕಷ್ಟಪಟ್ಟರು ಕೂಡ ವ್ಯಕ್ತಿಗೆ ಪರಿಶ್ರಮದ ತಕ್ಕ ಫಲ ಸಿಗುವುದಿಲ್ಲ. ಇದಕ್ಕೆ ಹಲವು ವಾಸ್ತು ಕಾರಣಗಳಿರಬಹುದು.
Tijori Tips: ತಮ್ಮ ಮನೆಯಲ್ಲಿರುವ ತಿಜೋರಿ ಯಾವಾಗಲು ಹಣದಿಂದ ತುಂಬಿ ತುಳುಕುತ್ತಿರಬೇಕು ಮತ್ತು ತಾಯಿ ಲಕ್ಷ್ಮಿಯ ಕೃಪೆ ಸದಾ ತಮ್ಮ ಮೇಲೆಯೇ ಇರಬೇಕು ಎನಿಸುವುದು ಸ್ವಾಭಾವಿಕ. ಆದರೆ, ಹಲವು ಬಾರಿ ಸಾಕಷ್ಟು ಕಷ್ಟಪಟ್ಟರು ಕೂಡ ವ್ಯಕ್ತಿಗೆ ಪರಿಶ್ರಮದ ತಕ್ಕ ಫಲ ಸಿಗುವುದಿಲ್ಲ. ಇದಕ್ಕೆ ಹಲವು ವಾಸ್ತು ಕಾರಣಗಳಿರಬಹುದು. ಹಣವನ್ನು ಸುರಕ್ಷಿತವಾಗಿ ಇಡಲು ಬಳಸಲಾಗುವ ತಿಜೋರಿ ಎಂದಿಗೂ ಕೂಡ ಖಾಲಿ ಇರಿಸಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ತಿಜೋರಿಯಲ್ಲಿ ಯಾವಾಗಲು ಈ ಲೇಖನದಲ್ಲಿ ಸೂಚಿಸಲಾಗಿರುವ ಯಾವುದಾದರು ಒಂದು ಸಂಗತಿಯನ್ನು ಇರಿಸಿದರೆ, ನಿಮ್ಮ ಸಂಪತ್ತು ದ್ವಿಗುಣವಾಗುತ್ತದೆ ಎನ್ನಲಾಗಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಕಮಲದ ಹೂವು- ಸದಾ ವಿಷ್ಣುವಿನ ಕೈಯಲ್ಲಿರುವ ಮತ್ತು ತಾಯಿ ಲಕ್ಷ್ಮಿಗೆ ಆಸನವಾಗಿರುವ ಈ ಹೂವನ್ನು ತಿಜೋರಿಯಲ್ಲಿ ಕಾಣುವಂತೆ ಇಡುವುದು ತುಂಬಾ ಮಂಗಳಕರವಾಗಿದೆ. ಲಕ್ಷ್ಮಿ ದೇವಿಯನ್ನು ಪೂಜಿಸುವಾಗ, ನೀವು ಕಮಲದ ಹೂವನ್ನು ಅರ್ಪಿಸಬೇಕು ಮತ್ತು ನಂತರ ಅದನ್ನು ನಿಮ್ಮ ತಿಜೋರಿಯಲ್ಲಿಡಬೇಕು. ಈ ಹೂವು ಒಣಗಿಸಿದ ನಂತರ, ಅದನ್ನು ತಕ್ಷಣವೇ ಅಲ್ಲಿಂದ ತೆಗೆದುಹಾಕಿ. ಕಮಲದ ಹೂವನ್ನು ಇಡುವುದರಿಂದ ಸಂಪತ್ತು ಹೆಚ್ಚುತ್ತದೆ ಮತ್ತು ತಾಯಿ ಲಕ್ಷ್ಮಿಯ ಆಶೀರ್ವಾದ ಪ್ರಾಪ್ತಿಯಾಗುತ್ತದೆ ಎನ್ನಲಾಗಿದೆ.
ಅರಿಶಿನದ ಉಂಡೆ- ಅರಿಶಿನದ ಉಂಡೆ ನಿಮ್ಮ ಹಣಕಾಸಿನ ಮುಗ್ಗಟ್ಟನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಇದನ್ನು ಅನೇಕ ಧಾರ್ಮಿಕ ಕಾರ್ಯಗಳಲ್ಲಿಯೂ ಕೂಡ ಬಳಸಲಾಗುತ್ತದೆ. ಇದಕ್ಕಾಗಿ ಗುರುವಾರ ಅಥವಾ ಶುಕ್ರವಾರದಂದು ಅರಿಶಿನದ ಉಂಡೆಯನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ತಿಜೋರಿಯಲ್ಲಿ ಇರಿಸಿ. ಇದರಿಂದ ಲಕ್ಷ್ಮಿಯ ಕೃಪೆ ನಿಮ್ಮ ಮನೆಯಲ್ಲಿಯೇ ಉಳಿದು ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.
ಹಳದಿ ಕವಡೆ- ಹಳದಿ ಕವಡೆಗಳು ತಾಯಿ ಲಕ್ಷ್ಮಿಗೆ ತುಂಬಾ ಇಷ್ಟ. ಇವುಗಳನ್ನು ಹಣದ ತಿಜೋರಿಯಲ್ಲಿ ಇಡಬೇಕು ಎನ್ನಲಾಗುತದೆ. ಅಂದಹಾಗೆ, ದೀಪಾವಳಿ ಅಥವಾ ಧನತ್ರಯೋದಶಿಯ ದಿನದಂದು ಪೂಜಿಸಿದ ನಂತರ ಹಳದಿ ಕವಡೆಗಳನ್ನು ತಿಜೋರಿಯಲ್ಲಿ ಇರಿಸಲಾಗುತ್ತದೆ. ಇದಲ್ಲದೆ ನೀವು ಅವುಗಳನ್ನು ಯಾವುದೇ ಶುಕ್ರವಾರ ಅಥವಾ ಹುಣ್ಣಿಮೆಯ ದಿನದಂದೂ ಕೂಡ ತಿಜೋರಿಯಲ್ಲಿರಿಸಬಹುದು.
ಕನ್ನಡಿ ಅಥವಾ ದರ್ಪಣ- ವಾಸ್ತುದಲ್ಲಿ ಕನ್ನಡಿಯನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಕನ್ನಡಿಯಲ್ಲಿ ಏನೇ ಕಂಡರೂ ಅದು ದ್ವಿಗುಣವಾಗುತ್ತದೆ ಎನ್ನುತ್ತಾರೆ. ಆದ್ದರಿಂದ, ತಿಜೋರಿಯ ಉತ್ತರ ಭಾಗದಲ್ಲಿ ಸಣ್ಣ ಕನ್ನಡಿ ಹಾಕಿ. ನಿಮ್ಮ ಹಣ ದ್ವಿಗುಣಗೊಳ್ಳಲು ಸಮಯ ಬೇಕಾಗುವುದಿಲ್ಲ.
ಕೆಂಪು ಬಟ್ಟೆ- ತಾಯಿ ಲಕ್ಷ್ಮಿಗೆ ಕೆಂಪು ಬಣ್ಣದ ಬಟ್ಟೆ ತುಂಬಾ ಪ್ರಿಯವಾಗಿದೆ ಎಂದು ನಂಬಲಾಗಿದೆ. ಆದ್ದರಿಂದ, ಹಣವನ್ನು ಇರಿಸುವ ಸ್ಥಳದಲ್ಲಿ ಕೆಂಪು ಬಟ್ಟೆಯಲ್ಲಿ 11 ಅಥವಾ 21 ರೂಪಾಯಿಗಳನ್ನು ಕಟ್ಟಿಕೊಳ್ಳಿ ಮತ್ತು ಅದನ್ನು ಹುಣ್ಣಿಮೆ, ಧನತ್ರಯೋದಶಿ ಅಥವಾ ದೀಪಾವಳಿಯಂತಹ ಯಾವುದೇ ಶುಭ ದಿನದಂದು ಇರಿಸಿ ಹೀಗೆ ಮಾಡುವುದರಿಂದ ಸಂಪತ್ತು ಹೆಚ್ಚಾಗತೊಡಗುತ್ತದೆ.