Kannada Actor Dwarakish Passes Away: ಕೆಲ ವರ್ಷಗಳ ಹಿಂದಷ್ಟೇ ದ್ವಾರಕೀಶ್ ಅವರು ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ತಮ್ಮ ಮನೆಯನ್ನು ಮಾರಿದ್ದರು. ಅವರು ಯಾಕೆ ತಮ್ಮ ಮನೆಯನ್ನು ಮಾರಿದ್ದರು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
Dwarakish Death News: ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಸೋಮವಾರ ನಿಧನರಾಗಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನಿವಾಸದಲ್ಲಿ ದ್ವಾರಕೀಶ್ ಕೊನೆಯುಸಿರೆಳೆದಿದ್ದಾರೆ. ರಾತ್ರಿ ಲೂಸ್ ಮೋಷನ್ ಆಯ್ತು, ಹೀಗಾಗಿ ನಿದ್ದೆ ಮಾಡಿರಲಿಲ್ಲ. ಬೆಳಗ್ಗೆ ಕಾಫಿ ಕುಡಿದು ಮಲಗುತ್ತೇನೆ ಅಂತಾ ಮಲಗಿದವರು ಮತ್ತೆ ಎದ್ದಿಲ್ಲ. ಅವರಿಗೆ ಹೃದಯಾಘಾತವಾಗಿದೆ ಅಂತಾ ದ್ವಾರಕೀಶ್ ಪುತ್ರ ಯೋಗಿ ಹೇಳಿದ್ದಾರೆ. ʼಕರುನಾಡಿನ ಪ್ರಚಂಡ ಕುಳ್ಳʼ ಎಂದೇ ಖ್ಯಾತಿಯಾಗಿದ್ದ ದ್ವಾರಕೀಶ್ ಅವರ ಆತ್ಮಕ್ಕೆ ಶಾಂತಿ ಕೋರಿ ಅನೇಕರು ಟ್ವೀಟ್ ಮಾಡಿದ್ದಾರೆ. ಕೆಲ ವರ್ಷಗಳ ಹಿಂದಷ್ಟೇ ದ್ವಾರಕೀಶ್ ಅವರು ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ತಮ್ಮ ಮನೆಯನ್ನು ಮಾರಿದ್ದರು. ಅವರು ಯಾಕೆ ತಮ್ಮ ಮನೆಯನ್ನು ಮಾರಿದ್ದರು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಕೆಲ ವರ್ಷಗಳ ಹಿಂದಷ್ಟೇ ದ್ವಾರಕೀಶ್ ಅವರು ತಮ್ಮ ಮನೆಯನ್ನು ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಮಾರಾಟ ಮಾಡಿದ್ದರು. 10 ಕೋಟಿ ರೂ.ಗೆ ಈ ಮನೆಯನ್ನು ರಿಷಬ್ ಖರೀದಿ ಮಾಡಿದ್ದರು ಎಂದು ವರದಿ ಆಗಿತ್ತು. ಹಾಗಾದ್ರೆ ಈ ಮನೆಯನ್ನು ಅವರು ಏಕೆ ಮಾರಿದರು? ಇದಕ್ಕೆ ಇಲ್ಲಿದೆ ಉತ್ತರ...
ಬೆಂಗಳೂರಿನ HSR ಲೇಔಟ್ಲ್ಲಿ ದ್ವಾರಕೀಶ್ ಅವರು ಮನೆ ಮಾಡಿದ್ದರು. ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಸರ್ಕಾರ ಈ ಸೈಟ್ಅನ್ನು ದ್ವಾರಕೀಶ್ ಅವರಿಗೆ ನೀಡಿತ್ತಂತೆ. ಆದರೆ ಈ ಮನೆ ತುಂಬಾನೇ ದೊಡ್ಡಾಗಿತ್ತು. ನಮಗೆ ಏಕೆ ಇಷ್ಟು ದೊಡ್ಡ ಮನೆ ಬೇಕು ಅಂತಾ ದ್ವಾರಕೀಶ್ ಅವರು ಇದನ್ನು ಮಾರಾಟ ಮಾಡಿದ್ದರಂತೆ. ಈ ಮನೆ ನಿರ್ಮಾಣ ಮಾಡಲು ದ್ವಾರಕೀಶ್ ಅವರು ಸಾಲ ಮಾಡಿದ್ದರಂತೆ. ಇದರ ಜೊತೆಗೆ ಇತರ ಸಾಲಗಳನ್ನು ಅವರು ತೀರಿಸಬೇಕಿತ್ತು. ಹೀಗಾಗಿ ಅವರು ಮನೆಯನ್ನು ಮಾರಿದ್ದರು ಎಂದು ತಿಳಿದುಬಂದಿದೆ.
2021ರಲ್ಲಿ ದ್ವಾರಕೀಶ್ ಅವರು ಈ ಮನೆಯನ್ನು ನಟ ರಿಷಬ್ ಶೆಟ್ಟಿಗೆ ಮಾರಾಟ ಮಾಡಿದ್ದರು. ಅಂದಾಜು 10 ಕೋಟಿ ರೂ. ಕೊಟ್ಟು ರಿಷಬ್ ಇದನ್ನು ಖರೀದಿ ಮಾಡಿದ್ದರು ಎಂದು ವರದಿಯಾಗಿತ್ತು. ಆದರೆ ಎಷ್ಟು ಕೋಟಿ ರೂ.ಗೆ ವ್ಯವಹಾರ ನಡೆದಿದೆ ಅನ್ನೋ ಬಗ್ಗೆ ಇಬ್ಬರೂ ಅಧಿಕೃತ ಮಾಹಿತಿ ನೀಡಿರಲಿಲ್ಲ.
ಚಿತ್ರರಂಗವನ್ನೇ ತಮ್ಮ ಉಸಿರು ಮಾಡಿಕೊಂಡಿದ್ದ ದ್ವಾರಕೀಶ್ ಅವರು ಹಲವಾರು ಸಿನಿಮಾ ನಿರ್ಮಾಣ ಮಾಡಿ ಕೈಸುಟ್ಟುಕೊಂಡಿದ್ದರು. ಕೋಟಿ ಕೋಟಿ ಸಾಲ ತೀರಿಸಲು ಅವರು ಮನೆ ಮತ್ತು ಇನ್ನಿತರ ಆಸ್ತಿ-ಪಾಸ್ತಿಗಳನ್ನು ಮಾರಾಟ ಮಾಡಿದ್ದರಂತೆ. ಸಿನಿಮಾ ಪ್ಲಾಪ್ ಆಗಿದ್ದರಿಂದಲೇ ದ್ವಾರಕೀಶ್ ಅವರಿಗೆ ದೊಡ್ಡ ಹೊಡೆತ ಬಿದ್ದಿತ್ತು. ಸಾಲದ ವಿಚಾರವಾಗಿ ಇದು ವಿವಾದಕ್ಕೂ ಗುರಿಯಾಗಿತ್ತು.
ದ್ವಾರಕೀಶ್ ಅವರು ತಮ್ಮ ಪುತ್ರ ಯೋಗಿ ಜೊತೆ ವಾಸವಾಗಿದ್ದರು. ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿಯ ಗುಳಿಮಂಗಳದಲ್ಲಿ ವಾಸಿಸುತ್ತಿದ್ದರು. ಇದೇ ನಿವಾಸದಲ್ಲಿ ಅವರ ಪಾರ್ಥಿವ ಶರೀರ ಇಡಲಾಗಿದ್ದು, ಬುಧವಾರ (ಏಪ್ರಿಲ್ 17) ಬೆಳಗ್ಗೆ ಅವರ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರಕ್ಕೆ ತರಲಾಗುತ್ತದೆ. ಬೆಳಗ್ಗೆ 11:30ರ ನಂತರ ಚಾಮರಾಜಪೇಟೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.