ಕೂದಲನ್ನು ಕಪ್ಪಾಗಿಡಲು ತುಂಬಾ ಅಗತ್ಯ ಜೀವಸತ್ವಗಳಿವು! ಈ ಆಹಾರಗಳನ್ನು ತಿಂದ್ರೆ ಕೇಶ ಬೆಳ್ಳಗಾಗಲ್ಲ, ಹೇರ್ ಫಾಲ್ ಸಮಸ್ಯೆಯೂ ಇರಲ್ಲ!

Foods For Hair: ದೇಹದಲ್ಲಿ ಜೀವಸತ್ವಗಳ ಕೊರತೆ ಇದ್ದಾಗ ಬಿಳಿ ಕೂದಲು ಸೇರಿದಂತೆ ಕೂದಲಿಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. 
 

White Hair Tips: ಬಿಳಿ ಕೂದಲಿನ ಸಮಸ್ಯೆಗೆ ಕೆಲವು ನಿರ್ದಿಷ್ಟ ಜೀವಸತ್ವಗಳ ಕೊರತೆ ಪ್ರಮುಖ ಕಾರಣವಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಜೀವಸತ್ವಗಳ ಕೊರತೆಯಿಂದಾಗಲೂ ಕೂಡ ಬಿಳಿ ಕೂದಲು, ಕೂದಲು ಉದುರುವಿಕೆಯಂತಹ ಸಮಸ್ಯೆಗಳು ಕಾಡುತ್ತವೆ. ಆದರೆ, ದೈನಂದಿನ ಆಹಾರದಲ್ಲಿ ಕೆಲವು ಆಹಾರಗಳನ್ನು ತಿನ್ನುವುದರಿಂದ ಇದನ್ನು ನೀಗಿಸಬಹುದು.

2 /8

ಕೂದಲನ್ನು ಆರೋಗ್ಯಕರವಾಗಿ ಕಪ್ಪಾಗಿ ಬಲವಾಗಿಸಲು ವಿಟಮಿನ್ ಸಿ, ಕಬ್ಬಿಣ, ತಾಮ್ರ ಮತ್ತು ಸತುವಿನಂತಹ ಪೋಷಕಾಂಶಗಳ ಅಗತ್ಯವಿದೆ. 

3 /8

ಸಿಟ್ರಸ್ ಹಣ್ಣುಗಳಲ್ಲಿ, ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ.  ಆಮ್ಲಾದಲ್ಲಿ ಕಂಡು ಬರುವ ಉತ್ಕರ್ಷಣ ನಿರೋಧಕಗಳು ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಸಹಾಯಕವಾಗಿದೆ. 

4 /8

ಕರಿಬೇವಿನ ಎಲೆಗಳಲ್ಲಿ ವಿಟಮಿನ್ ಬಿ1, ಬಿ3, ಬಿ9 ಮತ್ತು ಸಿ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ರಂಜಕ ಸಮೃದ್ಧವಾಗಿದೆ. ವಾರದಲ್ಲಿ ಒಮ್ಮೆ ಒಂದು ಹಿಡಿ ಕರಿಬೇವಿನ ಎಲೆಗಳನ್ನು ತೊಳೆದು ನೀರಿನಲ್ಲಿ ಕುದಿಸಿ ಫಿಲ್ಟರ್ ಮಾಡಿ ಆ ನೀರನ್ನು ಕುಡಿಯುವುದರಿಂದ ಕೂದಲು ಕಪ್ಪಾಗುತ್ತದೆ. 

5 /8

ಒಣದ್ರಾಕ್ಷಿ, ಬಾದಾಮಿ, ಅಂಜೂರದಂತಹ ಒಣ ಹಣ್ಣುಗಳಲ್ಲಿ ಕೂದಲನ್ನು ಬಲವಾಗಿಸಿ ಬಣ್ಣ ಮಾಸದಂತೆ ರಕ್ಷಿಸುವ ಅಂಶಗಳು ಹೇರಳವಾಗಿದೆ. 

6 /8

ತಾಜಾ ತೆಂಗಿನಕಾಯಿ ತಿನ್ನುವುದರಿಂದ ದೇಹದಲ್ಲಿ ವಿಟಮಿನ್ ಬಿ ಕಾಂಪ್ಲೆಕ್ಸ್, ಪ್ರೋಟೀನ್ ಮತ್ತು ಉತ್ಕರ್ಷಣ ನಿರೋಧಕಗಳ ಕೊರತೆ ನಿವಾರಿಸಿ ಬಿಳಿ ಕೂದಲನ್ನು ಕಪ್ಪಾಗಿಸಲು ಸಹಾಯಕವಾಗಿದೆ. ಇದು ಕೂದಲನ್ನು ಕಪ್ಪಾಗಿ, ದಟ್ಟವಾಗಿ, ಬಲವಾಗಿಸುತ್ತದೆ. 

7 /8

ಹಾಲು ಸೇರಿದಂತೆ ಇತರ ಡೈರಿ ಉತ್ಪನ್ನಗಳಲ್ಲಿ ವಿಟಮಿನ್ ಬಿ ಸಮೃದ್ಧವಾಗಿದೆ. ಇದು ಕೂದಲನ್ನು ಆರೋಗ್ಯಕರವಾಗಿರಿಸಿ ಹೇರ್ ಫಾಲ್ ಸಮಸ್ಯೆಯಿಂದ ರಕ್ಷಿಸುತ್ತದೆ.   

8 /8

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.