Emergency Fund: ಕೊರೊನಾದಂತಹ ಸಂಕಷ್ಟ ಎದುರಿಸಲು ಇಂದಿನಿಂದಲೇ ಸಿದ್ಧಗೊಳಿಸಿ 'ತುರ್ತು ನಿಧಿ'

Emergency Fund: ಈ ಕುರಿತು ಹೇಳುವ ತಜ್ಞರು ಕೊರೊನಾದಂತಹ ಸಂಕಷ್ಟ ಎದುರಿಸಲು ತುರ್ತು ನಿಧಿ ರಚನೆ ಇದು ಕಾಲದ ಬೇಡಿಕೆಯಾಗಿದೆ.

Create Emergency Fund: ದೇಶದಲ್ಲಿ ಕರೋನಾ ವೈರಸ್‌ನ ಎರಡನೇ ಅಲೆ ಮತ್ತೊಮ್ಮೆ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಲು ಪ್ರಾರಂಭಿಸಿದೆ. ದೇಶದ ಅನೇಕ ರಾಜ್ಯಗಳಲ್ಲಿಘೋಷಿಸಲಾಗಿದೆ. . ಮಾರುಕಟ್ಟೆಗಳು, ಕಚೇರಿಗಳು, ಶಾಪಿಂಗ್ ಮಾಲ್‌ಗಳು, ಚಿತ್ರಮಂದಿರಗಳು, ಆಟೊಗಳು, ಟ್ಯಾಕ್ಸಿಗಳಿಂದ ಹಿಡಿದು ಅನೇಕ ಅಗತ್ಯ ಸೇವೆಗಳನ್ನು ನಿಲ್ಲಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜನರ ವ್ಯವಹಾರ ಮತ್ತು ಉದ್ಯೋಗದ ಮೇಲೂ ಪರಿಣಾಮ ಉಂಟಾಗಿದೆ. ಕಳೆದ ವರ್ಷ ಕೂಡ ಕರೋನಾದ ಮೊದಲ ಅಲೆಯ ಸಂದರ್ಭದಲ್ಲಿಯೂ ಕೂಡ ಇಂತಹ ಪರಿಸ್ಥಿತಿ ಎದುರಾಗಿತ್ತು. ಇದು ಕೋಟ್ಯಾಂತರ ಜನರ ಆದಾಯದ ಮೇಲೆ ಪರಿಣಾಮ ಬೀರಿತ್ತು. ಹಲವು ಜನರಿಗೆ ತಮ್ಮ ಮನೆ ನಡೆಸುವುದು ಕೂಡ ಕಷ್ಟಕರವಾಗಿತ್ತು. ಇಂತಹ ಪರಿಸ್ಥಿತಿ ಯಾವಾಗ ಬೇಕಾದರೂ ಎದುರಾಗಬಹುದು ಎಂದು ತಜ್ಞರು ಹೇಳುತ್ತಾರೆ, ಇದಕ್ಕಾಗಿ ತುರ್ತು ನಿಧಿಯನ್ನು ರಚಿಸುವ ಬಗ್ಗೆ ಯೋಚಿಸುವುದು ಇದು ಕಾಲದ ಬೇಡಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.

 

ಇದನ್ನೂ ಓದಿ - Mutual Funds: SWF ಹಾಗೂ STPಗಳ ಬಗ್ಗೆ ನಿಮಗೆಷ್ಟು ಗೊತ್ತು?

 

ತಜ್ಞರು ಹೇಳುವ ಪ್ರಕಾರ, ಎಮೆರ್ಜೆನ್ಸಿ ಫಂಡ್ ಅಂದರೆ, ದೀರ್ಘಾವಧಿಗೆ ನಿಮ್ಮ ಹಣ ಬ್ಲಾಕ್ ಆಗದೆ ಇರುವ ಜಾಗದಲ್ಲಿ ಹಣದ ಹೂಡಿಕೆ ಎಂದರ್ಥ. ತುರ್ತು ಸಂದರ್ಭದಲ್ಲಿ ಲಿಕ್ವಿಡಿಟಿ ಸಮಸ್ಯೆ ಎದುರಾಗಬಾರದು ಎಂಬುದು ಎರಡನೇ ಉದ್ದೇಶ. ಹೀಗಿರುವಾಗ ಪ್ರಸ್ತುತ ಪರಿಸ್ಥಿತಿಯಲ್ಲಿ ಹೊಸ ಹೂಡಿಕೆದಾರರಿಗೆ ಡೆಟ್ ಫಂಡ್ ಗಳಲ್ಲಿ SIP ಮೂಲಕ ಹಣ ಹೂಡಿಕೆ ಮಾಡಬಹುದು. ಇವುಗಳಲ್ಲಿ ಓವರ್ ನೈಟ್ ಫಂಡ್, ಅಲ್ಟ್ರ ಶಾರ್ಟ್ ಟರ್ಮ್ ಹಾಗೂ ಶಾರ್ಟ್ ತರಂ ಫಂಡ್ ಉತ್ತಮ ಆಯ್ಕೆಗಳಾಗಿವೆ. ಇನ್ನೊಂದೆಡೆ ಲಿಕ್ವಿಡ್ ಫಂಡ್ ಗಳು ಕೂಡ ಉತ್ತಮ ಆಯ್ಕೆಗಳಾಗಿವೆ. ಸದ್ಯದ ಪರಿಸ್ಥಿತಿಯಲ್ಲಿ ಷೇರು ಮಾರುಕಟ್ಟೆಯ ಅಂದಾಜು ವ್ಯಕ್ತಪಡಿಸುವುದು ತುಂಬಾ ಕ್ಲಿಷ್ಟಕರದ ಸಂಗತಿ. ಹೀಗಿರುವಾಗ ಸುರಕ್ಷಿತ ಹೂಡಿಕೆಯ ಆಯ್ಕೆಮಾಡುವುದು ಒಳ್ಳೆಯ ಸಂಗತಿ.

 

ಇದನ್ನೂ ಓದಿ- SIP ಬಗೆಗಿನ ತಪ್ಪು ಕಲ್ಪನೆಗಳನ್ನು ಬಿಟ್ಟು ಹೂಡಿಕೆ ಮಾಡಿ

 

(ಸೂಚನೆ - ಝೀ ಹಿಂದುಸ್ತಾನ್ ಕನ್ನಡ ಯಾವುದೇ ರೀತಿಯ ಹೂಡಿಕೆಗೆ ಸಲಹೆ ನೀಡುವುದಿಲ್ಲ. ಹೂಡಿಕೆ ಮಾಡುವ ಮೊದಲು ನಿಮ್ಮ ಸ್ಥಳೀಯ ಮಟ್ಟದಲ್ಲಿ ಹಾಗೂ ನಿಮ್ಮ ಆರ್ಥಿಕ ಸಲಹೆಗಾರರ ಜೊತೆಗೆ ಚರ್ಚಿಸಿ)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

1. ಓವರ್ ನೈಟ್ ಫಂಡ್ (Over Night Fund) - ಇದೊಂದು ಡೆಟ್ ಫಂಡ್ ಆಗಿದೆ. ಒಂದೇ ದಿನದಲ್ಲಿ ಮ್ಯಾಚ್ಯುರ್ ಆಗುವ ಬಂದ್ ಗಳಲ್ಲಿ ಹೂಡಿಕೆ ಮಾಡುತ್ತದೆ. ಪ್ರತಿಯೊಂದು ವಹಿವಾಟಿನ ದಿನದ ಆರಂಭದಲ್ಲಿ ಬಂದ್ ಗಳನ್ನು ಖರೀದಿಸಲಾಗುತ್ತದೆ ಮತ್ತು ಇದು ಎರಡನೇ ವಹಿವಾಟಿನ ದಿನ ಮ್ಯಾಚ್ಯೂರ್ ಆಗುತ್ತದೆ. ಸುರಕ್ಷಿತ ಹಾಗೂ ಸುನಿಶ್ಚಿತ ಆದಾಯ ಪಡೆಯಬೇಕೆನ್ನುವವರಿಗೆ  ಓವರ್ ನೈಟ್ ಫಂಡ್ ಒಂದು ಉತ್ತಮ ಆಯ್ಕೆಯಾಗಿದೆ. ಇದು ಒಂದೇ ದಿನದಲ್ಲಿ ಮ್ಯಾಚೂರ್ ಆಗುತ್ತದೆ. ಒಂದೇ ದಿನದಲ್ಲಿ ಮ್ಯಾಚೂರ್ ಆಗುವುದರಿಂದ ಶೇ.100ರಷ್ಟು ಹಣ ಕೋಲ್ಯಾಟರಲೈಸ್ದ್ ಬಾರೋಯಿಂಗ್ ಹಾಗೂ ಲೆಂಡಿಂಗ್ ಆಬ್ಲಿಗೆಶನ್  ಮಾರುಕಟ್ಟೆಯಲ್ಲಿ ಹೂಡಿಕೆಯಾವುದರ ಹಿನ್ನೆಲೆ ರಿಸ್ಕ್ ಕೂಡ ಕಡಿಮೆ ಇರುತ್ತದೆ. ಒಂದೇ ದಿನದ ಮ್ಯಾಚುರಿಟಿ ಇರುವ ಕಾರಣ ಇದರಲ್ಲಿ ಆದಾಯ ಕೂಡ ಸ್ವಲ್ಪ ಕಮ್ಮಿ ಬರುತ್ತದೆ.

2 /6

2. ಅಲ್ಟ್ರಾ ಶಾರ್ಟ್ ಟರ್ಮ್ ಫಂಡ್ (Ultra Short Term Fund) -  ಈ ಫಂಡ್ ಗಳು ಡೆಟ್ ಹಾಗೂ ಮನಿ ಮಾರ್ಕೆಟ್ ಇನ್ಸ್ಟ್ರುಮೆಂಟ್ ಗಳಲ್ಲಿ 3 ತಿಂಗಳ ಅವಧಿಗೆ ಹೂಡಿಕೆ ಮಾಡುತ್ತವೆ. ಇವುವಳಲ್ಲಿ ವಿವಿಧ ಫಂಡ್ ಗಳ ಆದಾಯವನ್ನು ಪರಿಶೀಲಿಸಿದರೆ 1 ವರ್ಷದಲ್ಲಿ ಹೂಡಿಕೆದಾರರಿಗೆ ಶೇ.9 ರಷ್ಟು ರಿಟರ್ನ್ ಸಿಗುವ ಸಾಧ್ಯತೆ ಇದೆ.  

3 /6

3. ಶಾರ್ಟ್ ಡ್ಯೂರೆಶನ್ ಫಂಡ್ ಗಳು (Short Duration Fund) - ಇವುಗಳಲ್ಲಿ ಸಾಮಾನ್ಯವಾಗಿ 6 ತಿಂಗಳಿಂದ 1 ವರ್ಷದ ಅವಧಿಗೆ ಹಣ ಹೂಡಿಕೆ ಮಾಡಲಾಗುತ್ತದೆ. ಇವುಗಳಲ್ಲಿನ ವಿವಿಧ ಫಂಡ್ ಗಳ ರಿಟರ್ನ್ ಅನ್ನು ಪರಿಶೀಲಿಸಿದರೆ, ಇವುಗಳಲ್ಲಿ ಶೇ.10 ರಿಂದ ಶೇ.12 ರಷ್ಟು ಆದಾಯ ಸಿಗುತ್ತದೆ.  

4 /6

4. ಲಿಕ್ವಿಡ್ ಫಂಡ್ (Liquid Fund) - ಲಿಕ್ವಿಡ್ ಫಂಡ್ ಉಳಿತಾಯ ಖಾತೆಯ ರೀತಿ ಕಾರ್ಯನಿರ್ವಹಿಸುತ್ತವೆ. ತುರ್ತು ಸಂದರ್ಭಗಳಲ್ಲಿ ನೀವು ಇವುಗಳಿಂದ ಹಣ ಕೂಡ ವಾಪಸ್ ಪಡೆಯಬಹುದು. ಈ ಫಂಡ್ ಗಳು ಓಪನ್ ಎಂಡೆಡ್ ಫಂಡ್ ಗಳಾಗಿರುತ್ತವೆ. ಇವು ಡೆಟ್ ಹಾಗೂ ಮನಿ ಮಾರ್ಕೆಟ್ ಇನ್ಸ್ಟ್ರುಮೆಂಟ್ ನಲ್ಲಿ 30 ದಿನಗಳ ಅವಧಿಯಿಂದ 91 ದಿನಗಳ ಅವಧಿಗೆ ಹೂಡಿಕೆ ಮಾಡುತ್ತವೆ.

5 /6

5. ಒಂದು ವರ್ಷದ ಅವಧಿಯ FD - 1 ವರ್ಷದ ಅವಧಿಗಾಗಿ ಸ್ಥಿರ ಠೇವಣಿ ಆಯ್ಕೆ ಕೂಡ ಒಂದು ಉತ್ತಮ ವಿಕಲ್ಪವಾಗಿದೆ. ಹೆಚ್ಚುವರಿ ಬ್ಯಾಂಕ್ ಗಳಲ್ಲಿ ಕನಿಷ್ಠ FD ಮೊತ್ತ ರೂ.1000 ಇದ್ದರೆ, ಗರಿಷ್ಟ ಠೇವಣಿಗೆ ಯಾವುದೇ ಮಿತಿ ಇಲ್ಲ.

6 /6

6. ರೆಕರಿಂಗ್ ಡಿಪಾಸಿಟ್ - ಪೋಸ್ಟ್ ಆಫಿಸ್ RD ಮೇಲೆ ಶೇ.5.8 ರಷ್ಟು ಬಡ್ಡಿ ಸಿಗುತ್ತದ್ದರೆ, ವಿವಿಧ ಬ್ಯಾಂಕ್ ಗಳಲ್ಲಿ  ಶೇ.5 ರಿಂದ ಶೇ.6 ರಷ್ಟು ಬಡ್ಡಿ ಲಭಿಸುತ್ತದೆ. ಒಂದು ವರ್ಷದ ಅವಧಿಯ RD ಅನ್ನು ನೀವು 10 ವರ್ಷಗಳವರೆಗೆ ಮುಂದುವರೆಸಬಹುದು.