Indian Celebrity Contribution For Ram Mandir: ಅಯೋಧ್ಯೆ ಶ್ರೀರಾಮ ಮಂದಿರಯ ಕಾರ್ಯಕ್ರಮ ನಡೆಯುತ್ತಿದ್ದು, ಚಿತ್ರರಂಗದ ಹಲವರಿಗೆ ಆಹ್ವಾನ ಬಂದಿದೆ. ಆದರೆ, ಸುಮಾರು 1800 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀರಾಮ ಮಂದಿರಕ್ಕೆ ಸಿನಿಮಾ ತಾರೆಯರು ತಮ್ಮ ಕೈಯಲ್ಲಾದ ಸಹಾಯ ಮಾಡಿದ್ದಾರೆ. ಭಾರತದ ಸಿನಿಮಾರಂಗದ ಯಾವೆಲ್ಲಾ ತಾರೆಯರು ಎಷ್ಟು ದೇಣಿಗೆ ಕೊಟ್ಟದ್ದಾರೆ ಅದರ ಪಟ್ಟಿ ಇಲ್ಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಅಕ್ಷಯ್ ಕುಮಾರ್ : ಬಾಲಿವುಡ್ ನಟ ಅಕ್ಷಯ್ ಕುಮಾರ್ 2021, ಜನವರಿಯಲ್ಲಿ ವಿಡಿಯೋ ಮೂಲಕ ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವಂತೆ ಕೇಳಿಕೊಂಡಿದ್ದು, " ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕೆಲಸ ಆರಂಭ ಆಗಿದ್ದು ಖುಷಿಕೊಟ್ಟಿದೆ. ಈಗ ನಮ್ಮ ನಮ್ಮ ಸರದಿ, ನಮ್ಮ ಕೈಯಲ್ಲಾದಷ್ಟು ಸಹಾಯ ಮಾಡೋಣ. ನಾನು ದೇಣಿಗೆ ನೀಡಲು ಆರಂಭಿಸಿದ್ದೇನೆ. ನೀವು ನಮ್ಮೊಂದಿಗೆ ಸೇರಿಕೊಳ್ಳುತ್ತೀರೆಂಬ ನಂಬಿಕೆಯಿದೆ. ಜೈ ಶ್ರೀರಾಮ್" ಎಂದು ಟ್ವೀಟ್ ಮಾಡಿದ್ದರು.
ಅನುಪಮ್ ಖೇರ್ : ಬಾಲಿವುಡ್‌ನ ಹಿರಿಯ ಪೋಷಕ ನಟ ಅನುಪಮ್ ಖೇರ್ 2023, ಅಕ್ಟೋಬರ್ 2 ರಂದು ಅಯೋಧ್ಯೆಗೆ ಭೇಟಿ ನೀಡಿ ದೇಣಿಗೆ ನೀಡಿದ್ದಾರೆ. ಆ ವೇಳೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್ ಮಾಡಿ, ಅದರಲ್ಲಿ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಆಗುತ್ತಿರುವ ದೃಶ್ಯವನ್ನು ತೋರಿಸಿ, ತಮ್ಮ ಕೈಯಲ್ಲಾದಷ್ಟು ದೇಣಿಗೆ ನೀಡಿದ್ದಾಗಿ ಹೇಳಿಕೊಂಡಿದ್ದರು.
ಮುಖೇಶ್ ಖನ್ನ: 'ಶಕ್ತಿಮಾನ್' ಅಂತಹ ಜನಪ್ರಿಯ ಸೂಪರ್ ಹೀರೊ ಸೀರಿಸ್ ಖ್ಯಾತಿಯ ಮಖೇಶ್ ಖನ್ನಾ ಅಯೋಧ್ಯೆ ಶ್ರೀರಾಮ ಮಂದಿರದ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡಿರುವವರಿಗೆ ಅಲ್ಲಿನ ಎಂಎಲ್‌ಎ ಅಟುಲ್ ಭಟ್ನಾಗರ್ ಅವರ ಸಮ್ಮುಖದಲ್ಲಿ 1.11 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾಗಿ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದರು.
ಹೇಮಾ ಮಾಲಿನಿ : ಹಿಂದಿ ಚಿತ್ರರಂಗದ ಡ್ರೀಮ್ ಗರ್ಲ್ ಹೇಮಾ ಮಾಲಿನಿ ಕೂಡ ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ದೇಣಿಗೆ ನೀಡಿದ್ದು, ಆದರೆ ದೇಣಿಗೆ ನೀಡಿದ ಮೊತ್ತವೆಷ್ಟು ಅನ್ನೋದನ್ನು ರಿವೀಲ್ ಮಾಡಿಲ್ಲ. ಇತ್ತೀಚೆಗಷ್ಟೇ ಅಯೋಧ್ಯೆಯಲ್ಲಿ ಹೇಮಾ ಮಾಲಿನಿ ಪರ್ಫಾಮೆನ್ಸ್ ಕೂಡ ನೀಡಿದ್ದರು.
ಪವನ್ ಕಲ್ಯಾಣ್ : ದಕ್ಷಿಣ ಭಾರತದಿಂದ ತೆಲುಗಿನ ಪವರ್‌ಸ್ಟಾರ್ ಹಾಗೂ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ 30 ಲಕ್ಷ ರೂಪಾಯಿಯನ್ನು ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆಂದು ದೇಣಿಗೆ ನೀಡಿದ್ದಾರೆ. ಚೆಕ್ ವಿತರಣೆ ಮಾಡುತ್ತಿರುವ ಫೋಟೊಗಳು ಕೂಡ ವೈರಲ್ ಆಗಿತ್ತು.
ಪ್ರಣಿತಾ ಸುಭಾಷ್: ಸ್ಯಾಂಡಲ್‌ವುಡ್ ನಟಿ ಪ್ರಣಿತಾ ಸುಭಾಷ್ 2021, ಜನವರಿ 12ರಂದು ಸುಮಾರು 1 ಲಕ್ಷ ರೂಪಾಯಿಯನ್ನುಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿ, "ಅಯೋಧ್ಯೆ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಒಂದು ಲಕ್ಷ ರೂಪಾಯಿಯನ್ನು ನೀಡಿದ್ದೇನೆ. ಇಂತಹ ಐತಿಹಾಸಿಕ ಕ್ಷಣಕ್ಕೆ ನೀವೆಲ್ಲರೂ ಕೈ ಜೋಡಿಸಬೇಕೆಂದು ನಾನು ಕೇಳಿಕೊಳ್ಳುತ್ತೇನೆ" ಎಂದು ಟ್ವೀಟ್ ಮಾಡಿದ್ದರು.
ಗುರ್ಮೀತ್ ಚೌಧರಿ: ನಟ ಗುರ್ಮೀತ್ ಚೌಧರಿ 2021 ತಮ್ಮ ಎಕ್ಸ್ ಖಾತೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿ ನೀಡಿದ ಬಗ್ಗೆ ಬರೆದುಕೊಂಡಿದ್ದರು. " ಶ್ರೀರಾಮ ಮಂದಿರ ನಿರ್ಮಾಣಕ್ಕೆ ಹಣವನ್ನು ಸಂಗ್ರಹ ಮಾಡಲಾಗುತ್ತಿದೆ. ಇಡೀ ದೇಶ ಉತ್ಸಾಹದಿಂದ ಭಾಗವಹಿಸುತ್ತಿದೆ. ಇಂತಹ ಒಳ್ಳೆಯ ಕೆಲಸಕ್ಕೆ ನಾನು ಬೆಂಬಲ ನೀಡಲು ಬಯಸಿದ್ದೇನೆ. ಜೈ ಶ್ರೀರಾಮ್" ಎಂದು ಬರೆದುಕೊಂಡಿದ್ದರು.
ಮನೋಜ್ ಜೋಶಿ: ಬಾಲಿವುಡ್‌ನ ಮತ್ತೊಂದು ಪೋಷಕ ನಟ ಮನೋಜ್ ಜೋಷಿ ಕೂಡ ರಾಮ ಮಂದಿರ ನಿರ್ಮಾಣಕ್ಕೆ ಹಣ ಸಹಾಯ ಮಾಡಿದ್ದಾರೆ. ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸಹಾಯ ಮಾಡಿರುವ ಬಗ್ಗೆ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.
ಮನೀಶ್ ಮುಂಡ್ರಾ: ಬಾಲಿವುಡ್ ಸಿನಿಮಾಗಳ ನಿರ್ಮಾಪಕ ಮನೀಶ್ ಮುಂಡ್ರಾ ದೊಡ್ಡ ಮೊತ್ತವನ್ನು ಶ್ರೀರಾಮ ಮಂದಿರ ನಿರ್ಮಾಣಕ್ಕೆ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆಂದು ವರದಿಯಾಗಿದೆ.