ಬೆಂಗಳೂರು : ಚಳಿಗಾಲದಲ್ಲಿ ವಿವಿಧ ರೀತಿಯ ತರಕಾರಿಗಳನ್ನು ತಿನ್ನಲಾಗುತ್ತದೆ. ಈ ಋತುವಿನಲ್ಲಿ ಹಸಿವು ಕೂಡಾ ಹೆಚ್ಚು. ಅಂತಹ ಪರಿಸ್ಥಿತಿಯಲ್ಲಿ, ಕೆಲವು ಆಹಾರಗಳನ್ನು ತಿನ್ನುವುದನ್ನು ತಪ್ಪಿಸಬೇಕು. ಏಕೆಂದರೆ ಅವುಗಳು ರಾತ್ರಿಯ ನಿದ್ರೆಗೆ ತೊಂದರೆ ಉಂಟುಮಾಡುತ್ತದೆ.
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
ಮಲಗುವ ಮುನ್ನ ಟೊಮೆಟೊ ತಿನ್ನಬಾರದು. ಇದರಿಂದ ಆಸಿಡಿಟಿ ಉಂಟಾಗುತ್ತದೆ. ಇದನ್ನು ಸೇವಿಸುವುದರಿಂದ ರಾತ್ರಿ ಅಜೀರ್ಣ ಸಮಸ್ಯೆ ಕಾಡುತ್ತದೆ. ಇದು ಟೈರಮೈನ್ ಅನ್ನು ಒಳಗೊಂಡಿದೆ. ಇದು ಅಮೈನೋ ಆಮ್ಲವಾಗಿದ್ದು, ಮೆದುಳಿನ ಚಟುವಟಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ನಿದ್ರೆಯಲ್ಲಿ ಸಮಸ್ಯೆ ಉಂಟಾಗಬಹುದು.
ಬ್ರೊಕೊಲಿಯು ಟ್ರಿಪ್ಟೊಫಾನ್ ಅನ್ನು ಹೊಂದಿದ್ದು, ಇದು ನಿದ್ರೆಗೆ ಸಹಾಯ ಮಾಡುತ್ತದೆ. ಆದರೆ ಮಲಗುವ ಮುನ್ನ ಹಸಿ ಬ್ರೊಕೊಲಿ ಸೇವಿಸಿದರೆ, ಅದರಲ್ಲಿರುವ ಹೆಚ್ಚಿನ ಫೈಬರ್ ನಿಂದಾಗಿ ನಿದ್ರೆಗೆ ತೊಂದರೆಯಾಗಬಹುದು. ಇದು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದು ನಿಮಗೆ ನಿದ್ರೆ ಮಾಡಲು ಕಷ್ಟವಾಗುತ್ತದೆ.
ಕೋಳಿ ಮಾಂಸದಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಇದು ಜೀರ್ಣಿಸಿಕೊಳ್ಳಲು ಸಾಕಷ್ಟು ಶಕ್ತಿಯ ಅಗತ್ಯವಿರುತ್ತದೆ. ಈ ಪ್ರೋಟೀನ್ ಅಮೈನೋ ಆಸಿಡ್ ಟೈರೋಸಿನ್ ಅನ್ನು ಹೊಂದಿರುತ್ತದೆ. ಈ ಕಾರಣದಿಂದಾಗಿ, ಮೆದುಳಿನ ಚಟುವಟಿಕೆಯು ಹೆಚ್ಚಾಗುತ್ತದೆ.
ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಅಸಿಡಿಟಿ ಸಮಸ್ಯೆ ಉಂಟಾಗುತ್ತದೆ. ಇದರಿಂದ ನಿದ್ರೆಯ ಸಮಸ್ಯೆಯೂ ಕಾಡುತ್ತದೆ. ಇದಲ್ಲದೆ, ಮಲಗುವ ಮೊದಲು ಮಸಾಲೆಯುಕ್ತ ಆಹಾರವನ್ನು ಸೇವಿಸಿದರೆ ದೇಹದ ಹೀಟ್ ಹೆಚ್ಚಾಗುತ್ತದೆ. ಇದರಿಂದಾಗಿ ನೀವು ನಿದ್ರಿಸುವಲ್ಲಿ ತೊಂದರೆ ಅನುಭವಿಸಬಹುದು
ಚೀಸ್ನಲ್ಲಿ ಟೈರಮೈನ್ ಎಂಬ ಅಮೈನೋ ಆಮ್ಲ ಸಮೃದ್ಧವಾಗಿದೆ. ಇದರಿಂದಾಗಿ ನಿಮ್ಮ ಮೆದುಳು ದೀರ್ಘಕಾಲ ಕ್ರಿಯಾಶೀಲವಾಗಿರುತ್ತದೆ. ಇದು ನಿದ್ದೆಗೆ ಭಂಗ ತರುತ್ತದೆ. ದೀರ್ಘಕಾಲದವರೆಗೆ ಎಚ್ಚರವಾಗಿರುವಂತೆ ಮಾಡುತ್ತದೆ. ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)