Gautham Gambhir: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೆ ದೊಡ್ಡ ಆಘಾತ ಎದುರಾಗಿದೆ. ವಂಚನೆ ಪ್ರಕರಣದ ಆರೋಪದಡಿಯಲ್ಲಿ ದೆಹಲಿ ಕೋರ್ಟ್ ಗಂಭೀರ್ ಅವರಿಗೆ ದೊಡ್ಡ ಹೊಡೆತ ನೀಡಿದೆ.
Gautham Gambhir: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೆ ದೊಡ್ಡ ಆಘಾತ ಎದುರಾಗಿದೆ. ವಂಚನೆ ಪ್ರಕರಣದ ಆರೋಪದಡಿಯಲ್ಲಿ ದೆಹಲಿ ಕೋರ್ಟ್ ಗಂಭೀರ್ ಅವರಿಗೆ ದೊಡ್ಡ ಹೊಡೆತ ನೀಡಿದೆ.
ಮಾಜಿ ಕ್ರಿಕೆಟಿಗ ಮತ್ತು ಪ್ರಸ್ತುತ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ದೋಷಮುಕ್ತಗೊಳಿಸಿದ ಆದೇಶವನ್ನು ನ್ಯಾಯಾಲಯ ತಿರಸ್ಕರಿಸಿದೆ. ಗಂಭೀರ್ ಪಾತ್ರದ ಬಗ್ಗೆ ಹೆಚ್ಚಿನ ತನಿಖೆ ಅಗತ್ಯ ಎಂದು ಕೋರ್ಟ್ ಹೇಳಿದೆ. ವಿಶೇಷ ನ್ಯಾಯಾಧೀಶ ವಿಶಾಲ್ ಗೋಗಾನೆ ಅವರು ಅಕ್ಟೋಬರ್ 29 ರಂದು ತೀರ್ಪು ಪ್ರಕಟಿಸಿದ್ದಾರೆ.
ರಿಯಲ್ ಎಸ್ಟೇಟ್ ಕಂಪನಿಗಳಾದ ರುದ್ರಾ ಬಿಲ್ಡ್‌ವೆಲ್, ಎಚ್‌ಆರ್ ಇನ್‌ಫ್ರಾಸಿಟಿ ಮತ್ತು ಯುಎಂ ಆರ್ಕಿಟೆಕ್ಚರ್‌ಗೆ ಈ ವಿಚಾರ ಸಂಬಂಧಿಸಿದ್ದು, ಈ ಕಂಪನಿಗಳು ಮತ್ತು ಅದರ ನಿರ್ದೇಶಕರು ಫ್ಲಾಟ್ ಖರೀದಿದಾರರನ್ನು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಗಂಭೀರ್ ವಿರುದ್ಧದ ಆರೋಪಗಳ ಗಂಭೀರತೆಯನ್ನು ಪರಿಗಣಿಸಿ, ಅವರ ಪಾತ್ರದ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕು ಎಂದು ನ್ಯಾಯಾಲಯ ತೀರ್ಮಾನಿಸಿದೆ.
ವಿಶೇಷ ನ್ಯಾಯಾಧೀಶ ವಿಶಾಲ್ ಗೋಗಾನೆ ಅವರು ಅಕ್ಟೋಬರ್ 29 ರ ತಮ್ಮ ಆದೇಶದಲ್ಲಿ, ರುದ್ರಾ ಬಿಲ್ಡ್‌ವೆಲ್ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದರಿಂದ ಹೂಡಿಕೆದಾರರೊಂದಿಗೆ ನೇರ ಸಂಪರ್ಕ ಹೊಂದಿರುವ ಏಕೈಕ ಆರೋಪಿ ಗೌತಮ್ ಗಂಭೀರ್ ಅವರೆ ಎಂದು ಬರೆದಿದ್ದಾರೆ.
ಗಂಭೀರ್‌ಗೆ ಮರಳಿದ ಮೊತ್ತದಲ್ಲಿ ಯಾವುದೇ ವಂಚನೆ ನಡೆದಿದೆಯೇ ಅಥವಾ ಹೂಡಿಕೆದಾರರಿಂದ ಪಡೆದ ಹಣಕ್ಕೆ ಹಣದ ಲಿಂಕ್ ಇದೆಯೇ ಎಂಬುದು ಚಾರ್ಜ್‌ಶೀಟ್‌ನಲ್ಲಿ ಸ್ಪಷ್ಟವಾಗಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಗಂಭೀರ್ ಅವರು ಬ್ರಾಂಡ್ ಅಂಬಾಸಿಡರ್ ಆಗಿ ಅಷ್ಟೆ ಅಲ್ಲದೆ ಈ ಕಂಪನಿಗಳೊಂದಿಗೆ ಹಣ ಕಾಸಿನ ವ್ಯವಹಾರಗಳನ್ನು ಸಹ ಹೊಂದಿದ್ದಾರೆ ಎಂದು ಇದೀಗ ಹೇಳಲಾಗುತ್ತಿದೆ. 29 ಜೂನ್ 2011 ಮತ್ತು 1 ಅಕ್ಟೋಬರ್ 2013 ರ ನಡುವೆ ಹೆಚ್ಚುವರಿ ನಿರ್ದೇಶಕರಾಗಿದ್ದು, ಇದನ್ನು ಕೋರ್ಟ್ ಕಂಡುಹಿಡಿದಿದೆ.
ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ದೂರುದಾರರು ಯೋಜನೆಗಳಲ್ಲಿ ಫ್ಲಾಟ್‌ಗಳನ್ನು ಬುಕ್ ಮಾಡಿದ್ದಾರೆ ಮತ್ತು ಜಾಹೀರಾತುಗಳು ಮತ್ತು ಕರಪತ್ರಗಳ ಆಮಿಷಕ್ಕೆ ಒಳಗಾಗಿ 6 ಲಕ್ಷದಿಂದ 16 ಲಕ್ಷ ರೂ.ವರೆಗೆ ಪಾವತಿಸಿದ್ದಾರೆ ಎಂದು ಆರೋಪಿಸಿದ್ದಾರೆ.