Health benefits of broccoli: ನಿಯಮಿತವಾಗಿ ಬ್ರೊಕೊಲಿಯನ್ನು ಸೇವಿಸುವುದರಿಂದ ನೀವು ಅನೇಕ ರೋಗಗಳಿಂದ ಮುಕ್ತಿ ಪಡೆಯಬಹುದು. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬ್ರೊಕೊಲಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
Health Benefits Of Broccoli: ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬ್ರೊಕೊಲಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಸಲಾಡ್, ಸೂಪ್ ಮತ್ತು ತರಕಾರಿಗಳ ರೂಪದಲ್ಲಿ ಸೇವಿಸುವ ಇದು ಎಲೆಕೋಸು ಕುಟುಂಬಕ್ಕೆ ಸೇರಿದ ಹಸಿರು ಸಸ್ಯ. ವಿಶೇಷವಾಗಿ ಚಳಿಗಾಲದಲ್ಲಿ ಬ್ರೊಕೊಲಿ ಸೇವನೆಯಿಂದ ನೀವು ಅನೇಕ ಆರೋಗ್ಯ ಸಂಬಂಧಿತ ಕಾಯಿಲೆಗಳಿಂದ ರಕ್ಷಣೆ ಪಡೆಯಬದಹುದು. ಬ್ರೊಕೊಲಿ ಸೇವನೆಯಿಂದ ಯಾವೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಬ್ರೊಕೊಲಿಯಲ್ಲಿ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಹೇರಳವಾಗಿವೆ. ಇದರಲ್ಲಿ ಪ್ರೊಟೀನ್, ಸತು, ನಾರಿನಂಶ, ವಿಟಮಿನ್-ಎ, ವಿಟಮಿನ್-ಸಿ ಹೀಗೆ ಹಲವಾರು ಪ್ರಮುಖ ಪೋಷಕಾಂಶಗಳಿವೆ. ಇವುಗಳಿಂದ ನೀವು ಅನೇಕ ರೋಗಗಳಿಂದ ರಕ್ಷಣೆ ಪಡೆಯಬಹುದು.
ಆರೋಗ್ಯ ತಜ್ಞರ ಪ್ರಕಾರ ಬ್ರೊಕೊಲಿ ಚರ್ಮದ ಸುಕ್ಕುಗಳಂತಹ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಇದರಲ್ಲಿರುವ ವಿಟಮಿನ್ C, ತಾಮ್ರ, ಸತುವಿನ ಅಂಶಗಳು ಚರ್ಮಕ್ಕೆ ಹೊಳಪು ನೀಡುತ್ತದೆ. ಬ್ರೊಕೊಲಿಯಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕ ಅಂಶಗಳು ವಯಸ್ಸಾಗುವಿಕೆಯ ವಿರುದ್ಧ ಹೋರಾಡಲು ಸಹಕಾರಿ. ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಈ ತರಕಾರಿ ರಾಮಬಾಣವಾಗಿ ಕೆಲಸ ಮಾಡುತ್ತದೆ.
ಬ್ರೊಕೊಲಿ ಪೊಟ್ಯಾಸಿಯಂ, ವಿಟಮಿನ್ C ಮತ್ತು ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿದೆ. ಇದು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ತಡೆಯಲು ಸಹಕಾರಿಯಾಗಿದೆ. ನಿಮ್ಮ ಹೃದಯ ಆರೋಗ್ಯ ಚೆನ್ನಾಗಿರಬೇಕಾದರೆ ನೀವು ನಿಯಮಿತವಾಗಿ ಈ ತರಕಾರಿಯನ್ನು ಸೇವಿಸಬೇಕು.
ಬ್ರೊಕೊಲಿಯ ನಿಯಮಿತ ಸೇವನೆಯಿಂದ ನೀವು ಕ್ಯಾನ್ಸರ್ ಅಪಾಯದಿಂದ ದೂರವಿರಬಹುದು. ಇದರ ಸೇವನೆಯಿಂದ ಸ್ತನ ಕ್ಯಾನ್ಸರ್, ಚರ್ಮದ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಸಹಕಾರಿಯಾಗಿದೆ.
ಬ್ರಾಕೊಲಿಯಲ್ಲಿ ವಿಟಮಿನ್ C, ವಿಟಮಿನ್ B6, ವಿಟಮಿನ್ A ಮತ್ತು ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಇವು ಕೂದಲು ಉದುರುವಿಕೆಯನ್ನು ತಡೆದು ಬಲಪಡಿಸುತ್ತವೆ. ಆರೋಗ್ಯಕರ ಕೂದಲನ್ನು ಹೊಂದಲು ನೀವು ವಾರಕ್ಕೆ ಎರಡ್ಮೂರು ಬಾರಿ ಕಚ್ಚಾ ಬ್ರಾಕೊಲಿ ಸೇವಿಸಬೇಕು.