Health Tips: ಬೇಸಿಗೆಯಲ್ಲಿ ಹೆಚ್ಚು ನಿಂಬೆ ಜ್ಯೂಸ್‌ ಕುಡಿದ್ರೆ ಏನಾಗುತ್ತೆ?

Health Benefits of Lemon Juice: ನಿಂಬೆ ಜ್ಯೂಸ್‌ನಲ್ಲಿರುವ ವಿಟಮಿನ್ ‌ʼಸಿʼ ಸ್ಕರ್ವಿ, ವಸಡು ರಕ್ತಸ್ರಾವವನ್ನು ನಿವಾರಣೆ ಮಾಡುತ್ತದೆ. ಕಣ್ಣಿನ ಆರೋಗ್ಯಕ್ಕೂ ಈ ಜ್ಯೂಸ್ ಅತ್ಯವಶ್ಯ. ನಿಂಬೆ ಜ್ಯೂಸ್ ಕುಡಿಯುವುದರಿಂದ ಕೆಮ್ಮು, ನೆಗಡಿ, ನೋಯುತ್ತಿರುವ ಗಂಟಲುಗಳ ಸಮಸ್ಯೆ ದೂರವಾಗುತ್ತದೆ.
 

Health Benefits of Lemon Juice: ಬೇಸಿಗೆಯಲ್ಲಿ ನಿಂಬೆ ಜ್ಯೂಸ್‌ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳು ದೊರೆಯುತ್ತವೆ. ನಿಂಬೆ ಜ್ಯೂಸ್ ಬಾಯಾರಿಕೆ ನೀಗಿಸುವ ರುಚಿಕರ ಪಾನೀಯವಾಗಿದೆ. ಬೇಸಿಗೆಯಲ್ಲಿ ನಿಂಬೆ ರಸವನ್ನು ಕುಡಿಯುವುದರಿಂದ ದೇಹವು ತೇವಾಂಶದಿಂದ ಕೂಡಿರುತ್ತದೆ. ನಿಂಬೆ ಜ್ಯೂಸ್‌ ಸೇವನೆಯಿಂದ ದೊರೆಯುವ ಮತ್ತಷ್ಟು ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ನಿಂಬೆ ಜ್ಯೂಸ್‌ನಲ್ಲಿ ವಿಟಮಿನ್ ʼಸಿʼ, ಆಂಟಿ ಆಕ್ಸಿಡೆಂಟ್, ಫ್ಲೇವನಾಯ್ಡ್ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು, ಚರ್ಮದ ಆರೋಗ್ಯ ಕಾಪಾಡಲು ಮತ್ತು ಜೀರ್ಣಕ್ರಿಯೆ ನಿಯಂತ್ರಿಸಲು ಸಹಾಯ ಮಾಡುತ್ತದೆ.

2 /5

ನಿಂಬೆ ಹಣ್ಣು ಆಮ್ಲೀಯವಾಗಿದ್ದರೂ ಅದು ಕ್ಷಾರೀಯ ಗುಣಗಳನ್ನು ಹೊಂದಿದೆ. ಹೀಗಾಗಿ ನಿಂಬೆ ಜ್ಯೂಸ್ ಸೇವಿಸಿದಾಗ ದೇಹದ PH ಮಟ್ಟವು ಸಮತೋಲನದಲ್ಲಿರುತ್ತದೆ

3 /5

ಬೇಸಿಗೆಯಲ್ಲಿ ನಿಂಬೆ ಜ್ಯೂಸ್ ದೇಹವನ್ನು ತೇವಾಂಶದಿಂದ ಇಡಲು ಸಹಾಯ ಮಾಡುತ್ತದೆ. ಬೆವರಿನ ಮೂಲಕ ದೇಹದಲ್ಲಿ ನೀರಿನಾಂಶ ಕಡಿಮೆಯಾದಾಗ ಈ ಪಾನೀಯ ದೇಹಕ್ಕೆ ಚೈತನ್ಯ ನೀಡುತ್ತದೆ. ಬೇಸಿಗೆಯಲ್ಲಿ ಹೆಚ್ಚಾಗಿ ನಿಂಬೆ ಹಣ್ಣು ಜ್ಯೂಸ್‌ ಸೇವಿಸಿದ್ರೆ ನೀವು ಆರೋಗ್ಯಕರವಾಗಿರುತ್ತೀರಿ. ಇದರಿಂದ ಯಾವುದೇ ರೀತಿಯ ಸಮಸ್ಯೆಗಳು ನಿಮ್ಮನ್ನು ಬಾಧಿಸುವುದಿಲ್ಲ.

4 /5

ನಿಂಬೆ ಜ್ಯೂಸ್‌ನಲ್ಲಿ ಪೊಟ್ಯಾಸಿಯಮ್ ಇರುವುದರಿಂದ, ಇದು ನಿರ್ಜಲೀಕರಣ ಮತ್ತು ಸ್ನಾಯು ಸೆಳೆತವನ್ನು ತಡೆಯಲು ಸಹಾಯ ಮಾಡುತ್ತದೆ. ನಿಂಬೆ ರಸವು ದೇಹವನ್ನು ಹೈಡ್ರೀಕರಿಸಲು ಅಗತ್ಯವಾದ ಪೋಷಕಾಂಶಗಳನ್ನು ಹೊಂದಿರುತ್ತದೆ.

5 /5

ನಿಂಬೆ ಜ್ಯೂಸ್‌ನಲ್ಲಿರುವ ವಿಟಮಿನ್ ‌ʼಸಿʼ ಸ್ಕರ್ವಿ, ವಸಡು ರಕ್ತಸ್ರಾವವನ್ನು ನಿವಾರಣೆ ಮಾಡುತ್ತದೆ. ಕಣ್ಣಿನ ಆರೋಗ್ಯಕ್ಕೂ ಈ ಜ್ಯೂಸ್ ಅತ್ಯವಶ್ಯ. ನಿಂಬೆ ಜ್ಯೂಸ್ ಕುಡಿಯುವುದರಿಂದ ಕೆಮ್ಮು, ನೆಗಡಿ, ನೋಯುತ್ತಿರುವ ಗಂಟಲುಗಳ ಸಮಸ್ಯೆ ದೂರವಾಗುತ್ತದೆ.