Impressive Health benefits of curd: ನಿಮಗೆ ಗ್ಯಾಸ್ಟ್ರಿಕ್, ಅಜೀರ್ಣ, ಮಲಬದ್ಧತೆ, ಹೊಟ್ಟೆಯ ಕಿರಿಕಿರಿ ಇದ್ದರೆ, ಮೊಸರು ಸೇವಿಸಿ ಅಥವಾ ಲಸ್ಸಿ, ಮಜ್ಜಿಗೆ ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆಯಿಂದ ದೂರವಿರಬಹುದು. ಮೊಸರು ತಿನ್ನುವುದರ ಪ್ರಯೋಜನಗಳ ಬಗ್ಗೆ ತಿಳಿಯಿರಿ.
ನವದೆಹಲಿ: ಪ್ರತಿದಿನವೂ ಮೊಸರು ಸೇವಿಸುವುದರಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯುತ್ತೀರಿ. ಯಾವುದೇ ಸಮಾರಂಭದಲ್ಲಿ ಊಟದ ಕೊನೆಗೆ ಮಜ್ಜಿಗೆ ಅಥವಾ ಮೊಸರು ಸೇವಿಸುವುದು ವಾಡಿಕೆ. ಮೊಸರಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣವಿದೆ. ನಿಯಮಿತವಾಗಿ ಮೊಸರು ಸೇವಿಸುವುದರಿಂದ ನೀವು ಅನೇಕ ಪ್ರಯೋಜನ ಪಡೆಯುತ್ತೀರಿ. ಇದರ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮೊಸರಿನಲ್ಲಿ ಕ್ಯಾಲ್ಸಿಯಂ, ರಿಬೋಫ್ಲಾವಿನ್, ಪ್ರೋಟೀನ್, ವಿಟಮಿನ್ B ಮುಂತಾದ ಪೋಷಕಾಂಶಗಳಿವೆ. ನೀವು ದೀರ್ಘಕಾಲದವರೆಗೆ ಮೂಳೆಗಳು ಮತ್ತು ಹಲ್ಲುಗಳನ್ನು ಸದೃಢವಾಗಿಡಲು ಬಯಸಿದರೆ, ಖಂಡಿತ ಮೊಸರು ಸೇವಿಸಬೇಕು. ಮೊಸರು ಹಾಲಿಗಿಂತ ಹೆಚ್ಚಿನ ಕ್ಯಾಲ್ಸಿಯಂ ಅಂಶವನ್ನು ಹೊಂದಿರುತ್ತದೆ.
ಮೊಸರು ತಿನ್ನುವುದರಿಂದ ಜೀರ್ಣಕ್ರಿಯೆಯ ಶಕ್ತಿ ಬಲಗೊಳ್ಳುತ್ತದೆ. ರಕ್ತದ ನಷ್ಟ ಮತ್ತು ದೇಹದಲ್ಲಿನ ದೌರ್ಬಲ್ಯವನ್ನು ತೆಗೆದುಹಾಕಲು ಇದು ಸಹಾಯಕ. ನೀವು ಕಡಿಮೆ ಹಸಿವನ್ನು ಅನುಭವಿಸಿದರೂ ಅದನ್ನು ಸೇವಿಸಬಹುದು. ನಿಮಗೆ ಗ್ಯಾಸ್ಟ್ರಿಕ್, ಅಜೀರ್ಣ, ಮಲಬದ್ಧತೆ, ಹೊಟ್ಟೆಯ ಕಿರಿಕಿರಿ ಇದ್ದರೆ ಮೊಸರು ಸೇವಿಸಬೇಕು.
ಮೊಸರನ್ನು ಬೆಳಗ್ಗೆ ಮತ್ತು ಮಧ್ಯಾಹ್ನದ ಊಟದಲ್ಲಿ ಮಾತ್ರ ಸೇವಿಸಬೇಕು. ರಾತ್ರಿ ಮೊಸರು ಸೇವಿಸುವುದರಿಂದ ಕಫದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ತಂಪಾಗಿರುವ ಮೊಸರಿನ ಬಳಕೆಯೂ ಅಷ್ಟು ಒಳ್ಳೆಯದಲ್ಲ. ಹೀಗಾಗಿ ಮೊಸರನ್ನು ಸರಿಯಾದ ವೇಳೆಯಲ್ಲಿ ಸೇವಿಸಿದ್ರೆ ನೀವು ಆರೋಗ್ಯಕರ ಲಾಭ ಪಡೆಯಬಹುದು.
ಮೊಸರು ಜೀರ್ಣ ಕ್ರಿಯೆಯನ್ನು ಚುರುಕುಗೊಳಿಸುತ್ತದೆ. ದೇಹಕ್ಕೆ ಬೇಕಿರುವ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರಕ್ತದ ಕೊಲೆಸ್ಟ್ರಾಲ್ ತಗ್ಗಿಸಿ ಹೃದಯ ಮತ್ತು ರಕ್ತನಾಳ ವ್ಯವಸ್ಥೆಯನ್ನು ಸದೃಢವಾಗಿಸುತ್ತದೆ.
ನಿತ್ಯ ಮೊಸರು ಸೇವಿಸುವುದರಿಂದ ಹಲವಾರು ರೋಗಗಳನ್ನು ತಡೆಗಟ್ಟಬಹುದು. ಮೊಸರು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವುದಿಲ್ಲ. ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಮೊಸರು ನಮ್ಮನ್ನು ರಕ್ಷಿಸುತ್ತದೆ. ಬೆಳೆಯುತ್ತಿರುವ ಮಕ್ಕಳಿರುವ ಮನೆಯಲ್ಲಿ ನಿತ್ಯ ಮೊಸರು ಬಳಕೆ ಕಡ್ಡಾಯಗೊಳಿಸಬೇಕು. ಇದರಿಂದ ಮಕ್ಕಳಲ್ಲೂ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. (ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)