Which Bank Giving Highest Interest On Fixed Deposit: ಆರ್‌ಬಿಐ ಈ ಬಾರಿ ತನ್ನ ಹಣಕಾಸು ನೀತಿಯಲ್ಲಿ ರೆಪೊ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡದೆ ಅಂದನ್ನು ಕೇವಲ ಶೇ.6.50ರಲ್ಲೇ ಕಾಯ್ದುಕೊಂಡಿದೆ. ಇದಕ್ಕೂ ಮೊದಲು, ಮೇ 2022 ರಿಂದ, ರಿಸರ್ವ್ ಬ್ಯಾಂಕ್ ರೆಪೊ ದರವನ್ನು ಆರು ಬಾರಿ ಹೆಚ್ಚಿಸಿದೆ.
ಇದನ್ನೂ ಓದಿ-Investment In EMFs: ಮ್ಯೂಚವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಬೇಕೆ? ಹಾಗಾದರೆ ಈ ಸಂಗತಿಗಳು ನಿಮಗೆ ತಿಳಿದಿರಲಿ
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಎಚ್‌ಡಿಎಫ್‌ಸಿ ಬ್ಯಾಂಕ್ ಹಿರಿಯ ನಾಗರಿಕರಿಗೆ 5 ವರ್ಷ 1 ದಿನದಿಂದ 10 ವರ್ಷಗಳವರೆಗಿನ ಅವಧಿಯ ಎಫ್‌ಡಿಗಳಿಗೆ ಶೇಕಡಾ 7.75 ಬಡ್ಡಿಯನ್ನು ನೀಡುತ್ತಿದೆ. ಇತರರಿಗೆ, ಇದೇ ಅವಧಿಯ ಬಡ್ಡಿ ದರವನ್ನು ಶೇಕಡಾ 7 ಕ್ಕೆ ಬ್ಯಾಂಕ್ ನಿಗದಿಪಡಿಸಿದೆ.
2. ಫಿನ್‌ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ 1000 ದಿನಗಳಲ್ಲಿ ಮ್ಯಾಚೂರ್ ಆಗುವ FD ಗಳ ಮೇಲೆ ಶೇಕಡಾ 9.01 ರಷ್ಟು ಬಡ್ಡಿದರವನ್ನು ನಿಗದಿಪಡಿಸಿದೆ. ಇನ್ನುಳಿದವರಿಗೆ ಇದೇ ಅವಧಿಗೆ ಶೇ.8.41ರಷ್ಟು ಬಡ್ಡಿ ದರ ನಿಗದಿಪಡಿಸಲಾಗಿದೆ.
3. ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ 1001 ದಿನಗಳಲ್ಲಿ ಮ್ಯಾಚೂರ್ ಆಗುವ FD ಗಳ ಮೇಲೆ ಶೇ. 9.50 ರಷ್ಟು ಬಡ್ಡಿದರವನ್ನು ನಿಗದಿಪಡಿಸಿದೆ. ಇತರರಿಗೆ, ಅದೇ ಅವಧಿಗೆ ಈ ಬಡ್ಡಿ ದರವು ಶೇ. 9ರಷ್ಟಿದೆ.
4. ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ 700 ದಿನಗಳಲ್ಲಿ ಮ್ಯಾಚ್ಯೂರ್ ಆಗುವ FD ಗಳಲ್ಲಿ 9% ಬಡ್ಡಿಯನ್ನು ನೀಡುತ್ತಿದೆ. ಸಾಮಾನ್ಯ ನಾಗರಿಕರಿಗೆ, ಅದೇ ಅವಧಿಯ ಬಡ್ಡಿ ದರವು ಶೇ. 8.25 ರಷ್ಟಾಗಿದೆ.
5. ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ 888 ದಿನಗಳಲ್ಲಿ ಪಕ್ವವಾಗುವ FD ಗಳ ಮೇಲೆ 9 ಪ್ರತಿಶತ ಬಡ್ಡಿಯನ್ನು ನೀಡುತ್ತಿದೆ. ಇತರರು ಇದೇ ಅವಧಿಗೆ ಶೇ.8.5ರಷ್ಟು ಬಡ್ಡಿ ಪಡೆಯಲಿದ್ದಾರೆ.
6. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಅಮೃತ್ ಕಲಶ ವಿಶೇಷ FD (FD) ಯೋಜನೆಯ ಮಾನ್ಯತೆಯನ್ನು 30 ಜೂನ್ 2023 ರವರೆಗೆ ವಿಸ್ತರಿಸಿದೆ. ಇದರಲ್ಲಿ 400 ದಿನಗಳ ಎಫ್‌ಡಿ ಮೇಲೆ ಬ್ಯಾಂಕ್ ಶೇ.7.10 ಬಡ್ಡಿ ನೀಡುತ್ತಿದೆ. ಇದಲ್ಲದೇ ಹಿರಿಯ ನಾಗರಿಕರಿಗೆ ಈ ಬಡ್ಡಿದಾರ ಶೇ.7.60 ರಷ್ಟಿದೆ.