Postal Investment Scheme : ಕಿಸಾನ್ ವಿಕಾಸ್ ಪತ್ರ (KVP) ಹಣ ಹೂಡಿಕೆ ಮಾಡುವವರಿಗೆ ಒಂದು ಉತ್ತಮ ಆಯ್ಕೆಯಾಗಿದೆ. ಪೋಸ್ಟ್ ಆಫೀಸ್ ಮೂಲಕ ನಡೆಸಲಾಗುವ ಈ ಸ್ಕೀಮ್ ನಲ್ಲಿ ಹಣ ಹೂಡಿಕೆ ಮಾಡಿ ಕೇವಲ 124 ತಿಂಗಳುಗಳಲ್ಲಿ ನಿಮ್ಮ ಹೂಡಿಕೆಯನ್ನು ಡಬಲ್ ಮಾಡಬಹುದು. ಈ ಯೋಜನೆಯಲ್ಲಿ ಸಿಗುವ ಬಡ್ಡಿದರದ ಕುರಿತು ಹೇಳುವುದಾದರೆ. ಈ ಯೋಜನೆಯಲ್ಲಿ ಮಾಡಲಾಗುವ ಹೂಡಿಕೆಗೆ ಶೇ.6.9 ರಷ್ಟು ಬಡ್ಡಿ ಸಿಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಇದೊಂದು ಲಾಭದ ವ್ಯಾಪಾರ ಎಂದೇ ಪರಿಗಣಿಸಲಾಗುತ್ತಿದೆ.
ನವದೆಹಲಿ: Postal Investment Scheme - ಕಿಸಾನ್ ವಿಕಾಸ್ ಪತ್ರ (KVP) ಸರ್ಕಾರದ ಅತ್ಯುತ್ತಮ ನಿವೇಶ ಯೋಜನೆಗಳಲ್ಲಿ ಒಂದಾಗಿದೆ. ಇದರಲ್ಲಿ ನಿಮ್ಮ ಹೂಡಿಕೆ ಡಬಲ್ ಆಗುವ ಗ್ಯಾರಂಟಿ ಕೂಡ ಇರುತ್ತದೆ. ಈ ಯೋಜನೆಯಲ್ಲಿ ನಿಮ್ಮ ಹಣ ಪೋಲಾಗುವ ಅಪಾಯ ಕೂಡ ಇಲ್ಲ. ಒಂದು ವೇಳೆ ನೀವೂ ಕೂಡ ಹಣ ಹೂಡಿಕೆ ಮಾಡಲು ಯೋಜನೆ ರೂಪಿಸುತ್ತಿದ್ದರೆ, ಇಂದಿನ ಪರಿಸ್ಥಿತಿಯಲ್ಲಿ ಇದೊಂದು ಉತ್ತಮ ವಿಕಲ್ಪವಾಗಿದೆ.
ಇದನ್ನು ಓದಿ- FD ಗಿಂತ ಹೆಚ್ಚು ರಿಟರ್ನ್ ನೀಡುತ್ತೆ POST OFFICEನ ಈ ಉಳಿತಾಯ ಯೋಜನೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ದೀರ್ಘ ಕಾಲದ ಹೂಡಿಕೆ ಮಾಡಬಯಸುವವರಿಗೆ ಕಿಸಾನ್ ವಿಕಾಸ್ ಪತ್ರ ಒಂದು ಒತ್ತಮ ಆಯ್ಕೆಯಾಗಿದೆ. ಈ ಯೋಜನೆಯಲ್ಲಿ ವಾರ್ಷಿಕ ಶೇ.6.9 ರಷ್ಟು ಬಡ್ಡಿ ಸಿಗುತ್ತದೆ. ಈ ಬಡ್ಡಿದರ ಏಪ್ರಿಲ್ 1, 2020 ರಿಂದ ಜಾರಿಯಲ್ಲಿದೆ. ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿ ನೀವು ಕೇವಲ 124 ತಿಂಗಳುಗಳಲ್ಲಿ ನಿಮ್ಮ ಹಣವನ್ನು ಡಬಲ್ ಮಾಡಬಹುದು. ಉದಾಹರಣೆಗೆ ಒಂದು ವೇಳೆ ನೀವು 5 ಲಕ್ಷ ಹಣವನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, 10 ವರ್ಷ 4 ತಿಂಗಳುಗಳಲ್ಲಿ ನಿಮ್ಮ ಈ ಹೂಡಿಕೆ 10 ಲಕ್ಷ ರೂ. ಆಗಲಿದೆ.
ಈ ಯೋಜನೆಯಲ್ಲಿ ನೀವು ರೂ.100ರ ಗುಣಕದಲ್ಲಿ ಹಣವನ್ನು ಹೂಡಿಕೆ ಮಾಡಬೇಕು. ಅಂದರೆ, 100 ರಿಂದ ಭಾಗಿಸಲ್ಪಡುವ ಯಾವುದೇ ಸಂಖ್ಯೆಯ ಹಣವನ್ನು ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕು. ಹೂಡಿಕೆಗಾಗಿ ಕನಿಷ್ಠ ಹೂಡಿಕೆ 1000 ರೂ. ಇರಲಿದೆ. ಇದರಲ್ಲಿ ಗರಿಷ್ಠ ಹೂಡಿಕೆಯ ಯಾವುದೇ ಮಿತಿ ಇಲ್ಲ. ಈ ಯೋಜನೆಯಡಿ ಯಾವುದೇ ವ್ಯಕ್ತಿ, ವ್ಯಕ್ತಿಗಳು (ಗರಿಷ್ಠ 3) ಜಂಟಿಯಾಗಿ ಖಾತೆ ತೆರೆಯಬಹುದು. 10 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಅಪ್ರಾಪ್ತರು ಕೂಡ ಹಣ ಹೂಡಿಕೆ ಮಾಡಿ ಸರ್ಟಿಫಿಕೆಟ್ ಪಡೆಯಬಹುದು. ಮಾನಸಿಕವಾಗಿ ಅಸ್ವಸ್ಥರಾಗಿರುವವರ ಹೆಸರಿನಲ್ಲಿ ಅವರ ಪೋಷಕರು ಸರ್ಟಿಫಿಕೆಟ್ ಖರೀದಿಸಬಹುದು.
ಕಿಸಾನ್ ವಿಕಾಸ್ ಪತ್ರವನ್ನು ಪಾಸ್ ಬುಕ್ ರೂಪದಲ್ಲಿ ಜಾರಿಗೊಳಿಸಲಾಗುತ್ತದೆ. ಇದನ್ನು ನೀವು ಯಾವುದೇ ಡಿಪಾರ್ಟ್ಮೆಂಟಲ್ ಪೋಸ್ಟ್ ಆಫೀಸ್ ಮೂಲಕ ಖರೀದಿಸಬಹುದು. ಈ ಸ್ಕೀಮ್ ನಲ್ಲಿ ನಾಮಿನೆಶನ್ ಆಯ್ಕೆ ಕೂಡ ಇದೆ. ಈ ಸರ್ಟಿಫಿಕೆಟ್ ಅನ್ನು ಓರ್ವ ವ್ಯಕ್ತಿಯಿಂದ ಮತ್ತೋರ್ವ ವ್ಯಕ್ತಿಗೆ ಹಾಗೂ ಒಂದು ಪೋಸ್ಟ್ ಆಫೀಸ್ ನಿಂದ ಮತ್ತೊಂದು ಪೋಸ್ಟ್ ಆಫೀಸ್ ಗೆ ವರ್ಗಾಯಿಸಬಹುದು.
ಬ್ಯಾಂಕ್ ದಿವಾಳಿಯಾದ ಸಂದರ್ಭದಲ್ಲಿ ಅಲ್ಲಿಟ್ಟ ನಿಮ್ಮ ಹಣಕ್ಕೆ ಐದು ಲಕ್ಷದವರೆಗೆ ವಿಮಾ ಗ್ಯಾರಂಟಿ ಸಿಗುತ್ತದೆ. ಡಿಪಾಸಿಟ್ ಇನ್ಸುರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಶನ್ (DICGC) ಬ್ಯಾಂಕ್ ಗ್ರಾಹಕರಿಗೆ ಈ ಗ್ಯಾರಂಟಿ ನೀಡುತ್ತದೆ. ಆದರೆ, ಪೋಸ್ಟ್ ಆಫೀಸ್ ನಲ್ಲಿ ಮಾಡಲಾದ ಹೂಡಿಕೆಗೆ ಸಾವೆರಿನ್ ಗ್ಯಾರಂಟಿ ಇರುತ್ತದೆ (Sovereign Guarantee). ಇದರರ್ಥ ಪೋಸ್ಟ್ ಆಫೀಸ್ ನಲ್ಲಿ ಮಾಡಲಾಗಿರುವ ನಿಮ್ಮ ಹೂಡಿಕೆ ಸಂಪೂರ್ಣ ಸುರಕ್ಷಿತವಾಗಿರುತ್ತದೆ. ಪೋಸ್ಟ್ ಆಫೀಸ್ ಗಳು ಸರ್ಕಾರದ ಅಡಿ ಬರುತ್ತವೆ ಹಾಗೂ ಇದುವರೆಗೆ ಇವುಗಳನ್ನು ಪ್ರೈವೇಟ್ ಸೆಕ್ಟರ್ ವ್ಯಾಪ್ತಿಗೆ ತರಲಾಗಿಲ್ಲ. ಸಂಪೂರ್ಣ ಸರ್ಕಾರದ ನಿಯಂತ್ರಣದಲ್ಲಿರುವ ಕಾರಣ ಇಲ್ಲಿ ಮಾಡಲಾಗುವ ನಿಮ್ಮ ಹೂಡಿಕೆ ಸಂಪೂರ್ಣ ಸುರಕ್ಷಿತವಾಗಿರುತ್ತದೆ.