Benefits of eating eggs: ಇತ್ತೀಚೆಗೆ ಮುನ್ನೆಲೆಗೆ ಬಂದ ಸಂಶೋಧನೆ ಪ್ರಕಾರ ಮೊಟ್ಟೆ ತಿನ್ನುವುದರಿಂದ ದೇಹದಲ್ಲಿ ಅನೇಕ ಬದಲಾವಣೆಗಳು ಆಗುತ್ತವೆ ಎಂದು ಹೇಳಲಾಗಿದೆ. ಈ ಬಳಕ ಮೊಟ್ಟೆ ತಿಂದರೆ ಮೆದುಳು ವೇಗವಾಗಿ ಕೆಲಸ ಮಾಡುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಇತ್ತೀಚೆಗೆ ಪೌಷ್ಟಿಕಾಂಶದ ನರವಿಜ್ಞಾನದ ಅಧ್ಯಯನವು ಮುನ್ನೆಲೆಗೆ ಬಂದಿದೆ. ಇದರಲ್ಲಿ ಮೊಟ್ಟೆ ತಿನ್ನುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಸಲಾಗಿದೆ. ಈ ಪಅಧ್ಯಯನದಲ್ಲಿ 18 ರಿಂದ 75 ವರ್ಷ ವಯಸ್ಸಿನ ಜನರನ್ನು ಸೇರಿಸಲಾಗಿದೆ.
ಮೊಟ್ಟೆ ತಿಂದರೆ ಖಂಡಿತ ನಿಮ್ಮ ದೇಹಕ್ಕೆ ಲಾಭವಾಗುತ್ತದೆ ಎಂದು ಈ ಕೇಸ್ ಸ್ಟಡಿಯಲ್ಲಿ ಕಂಡು ಬಂದಿದೆ. ಇದಲ್ಲದೇ ಮೊಟ್ಟೆ ತಿನ್ನುವುದರಿಂದ ಮೆದುಳು ಚುರುಕುಗೊಳ್ಳಲು ಸಹಕಾರಿಯಾಗುತ್ತದೆ. ದಿನನಿತ್ಯ ಮೊಟ್ಟೆ ತಿನ್ನುವವರ ನೆನಪಿನ ಶಕ್ತಿ ಹೆಚ್ಚಳ ಸೇರಿದಂತೆ ಮುಂತಾದ ಮಾನಸಿಕ ಸಾಮರ್ಥ್ಯಗಳಲ್ಲಿ ಅವರು ಭಾರಿ ಸುಧಾರಣೆಯನ್ನು ಕಂಡಿದ್ದಾರೆ.
ಜನರ ಆ್ಯಂಟಿ ಕ್ಯೂ ರಿಯಾಕ್ಷನ್ ಟೈಮ್ ನಲ್ಲಿ ಸಾಕಷ್ಟು ಸುಧಾರಣೆ ಆಗಿರುವುದು ಕೂಡ ಫಲಿತಾಂಶದಲ್ಲಿ ಕಂಡು ಬಂದಿದೆ. ಮೊಟ್ಟೆ ತಿನ್ನುವುದರಿಂದ ಮಾನಸಿಕ ಸಾಮರ್ಥ್ಯ ಹೆಚ್ಚುತ್ತದೆ. ಏಕೆಂದರೆ NWT-03 ಹೈಡ್ರೊಲೈಜೆಟ್ ಪ್ರೋಟೀನ್ ಮೊಟ್ಟೆಗಳಲ್ಲಿ ಕಂಡುಬರುತ್ತದೆ.
ಮೊಟ್ಟೆಯಲ್ಲಿ ಇತರ ವಿಷಯಗಳಿರುವುದರಿಂದ ಮೊಟ್ಟೆಯ ಪ್ರೋಟೀನ್ ಪ್ರಯೋಜನಕಾರಿ ಎಂದು ಹೇಳುವುದು ಇನ್ನೂ ಕಷ್ಟ. ಇದು ಮನಸ್ಸಿಗೆ ಪ್ರಯೋಜನವನ್ನು ನೀಡುತ್ತದೆ. ಮೊಟ್ಟೆಯ ಹಳದಿ ಲೋಳೆಯಲ್ಲಿ ಹೆಚ್ಚಿನ ಪ್ರೋಟೀನ್ ಇರುತ್ತದೆ
ನಿಮ್ಮ ದೇಹಕ್ಕೆ ಮೊಟ್ಟೆಯು ಇಂಧನವಾಗಿಯೂ ಕಾರ್ಯನಿರ್ವಹಿಸುತ್ತದೆ. ಇದರಿಂದಾಗಿ ಮೆದುಳು ತೀಕ್ಷ್ಣವಾಗಿರುತ್ತದೆ. ಇಂದಿನ ಧಾವಂತದ ಬದುಕಿನಲ್ಲಿ ಮೊಟ್ಟೆ ತಿನ್ನುವ ಮೂಲಕ ಮೆದುಳಿನ ಪೌಷ್ಟಿಕಾಂಶದ ಕೊರತೆಯನ್ನು ನೀಗಿಸಬಹುದು ಮತ್ತು ಅನೇಕ ರೋಗಗಳನ್ನು ದೂರವಿಡಬಹುದು.