James Anderson: ಎರಡು ದಶಕಳಿಂದ ಕ್ರಿಕೆಟ್ ಆಡಿ ಇತ್ತೀಚೆಗಷ್ಟೆ ಕ್ರಿಕೆಟ್ಗೆ ವಿದಾಯ ಹೇಳಿದ ಜೇಮ್ಸ್ ಆಂಡರ್ಸನ್ ಒಬ್ಬ ವೇಗಿ ಬೌಲರ್. ಜೇಮ್ಸ್ ಬಾಲ್ ಬೀಸಲು ಫೀಲ್ಡ್ಗೆ ಎಂಟ್ರಿ ಕೊಡುತ್ತಿದ್ದಾರೆ ಅಂದ್ರೇನೆ ಬ್ಯಾಟರ್ಗಳಲ್ಲಿ ನಡುಕ ಶುರುವಾಗುತ್ತಿತು. ಅಂತಹ ಬಿರುಸಿನ ಬೌಲರ್ಗೆ ಭಾರತದ ಆ ಬ್ಯಾಟರ್ ಅಂದರೆ ಭಯವಂತೆ. ಹಾಗಾದರೆ ಯಾರು ಆ ಬ್ಯಾಟರ್ ತಿಳಿಯಲು ಮುಂದೆ ಓದಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಎರಡು ದಶಕಳಿಂದ ಕ್ರಿಕೆಟ್ ಆಡಿ ಇತ್ತೀಚೆಗಷ್ಟೆ ಕ್ರಿಕೆಟ್ಗೆ ವಿದಾಯ ಹೇಳಿದ ಜೇಮ್ಸ್ ಆಂಡರ್ಸನ್ ಒಬ್ಬ ವೇಗಿ ಬೌಲರ್. ಜೇಮ್ಸ್ ಬಾಲ್ ಬೀಸಲು ಫೀಲ್ಡ್ಗೆ ಎಂಟ್ರಿ ಕೊಡುತ್ತಿದ್ದಾರೆ ಅಂದ್ರೇನೆ ಬ್ಯಾಟರ್ಗಳಲ್ಲಿ ನಡುಕ ಶುರುವಾಗುತ್ತಿತು. ಅಂತಹ ಬಿರುಸಿನ ಬೌಲರ್ಗೆ ಭಾರತದ ಆ ಬ್ಯಾಟರ್ ಅಂದರೆ ಭಯವಂತೆ. ಹಾಗಾದರೆ ಯಾರು ಆ ಬ್ಯಾಟರ್ ತಿಳಿಯಲು ಮುಂದೆ ಓದಿ...
ಇಂಗ್ಲೆಂಡ್ನ ಸ್ಟಾರ್ ವೇಗಿ ಜೇಮ್ಸ್ ಆಂಡರ್ಸನ್ ತಮ್ಮ ವೃತ್ತಿ ಜೀವನದ ಕೊನೆಯ ಪಂದ್ಯವನ್ನಾಡುತ್ತಿದ್ದಾರೆ. ಲಾರ್ಡ್ಸ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯ ಜೇಮ್ಸ್ ಆಂಡರ್ಸನ್ಗೆ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿನ ಕೊನೆಯ ಪಂದ್ಯವಾಗಿದೆ.
ಈಗಾಗಲೇ ಇಂಗ್ಲೆಂಡ್ನ ದಂತಕಥೆ ಎಂದೇ ಖ್ಯಾತರಾಗಿರುವ ಆ್ಯಂಡರ್ಸನ್ ಇದುವರೆಗೆ ಟೆಸ್ಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವೇಗಿ ಎಂದೆನಿಸಿಕೊಂಡಿದ್ದಾರೆ. ಟೆಸ್ಟ್ನಲ್ಲಿ ಅತಿ ಹೆಚ್ಚು ಎಸೆತಗಳನ್ನು ಎಸೆದ ಆಟಗಾರ ಎಂಬ ದಾಖಲೆಯನ್ನು ಸಹ ಜೇಮ್ಸ್ ಮುಡಿಗೇರಿಸಿಕೊಂಡಿದ್ದಾರೆ.
ಜೇಮ್ಸ್ ಆಂಡರ್ಸನ್ ಎರಡು ದಶಕಗಳಿಗೂ ಹೆಚ್ಚು ಕಾಲ ಕ್ರಿಕೆಟ್ ಆಡಿದ್ದು, ತಮ್ಮ ವೃತ್ತಿಜೀವನದಲ್ಲಿ ಎದುರಿಸಿದ ಅತ್ಯಂತ ಅಪಾಯಕಾರಿ ಬ್ಯಾಟರ್ ಯಾರು ಎಂದು ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಭಾರತದ ಅತ್ಯಂತ ಅಪಾಯಕಾರಿ ಬ್ಯಾಟ್ಸ್ಮನ್ ಎಂದು ಜೇಮ್ಸ್ ಆಂಡರ್ಸನ್ ಪ್ರತಿಕ್ರಿಯಿಸಿದ್ದಾರೆ. ಸಚಿನ್ ಗೆ ಬೌಲಿಂಗ್ ಮಾಡುವಾಗ ತುಂಬಾ ಎಚ್ಚರಿಕೆ ವಹಿಸುತ್ತಿದ್ದರಂತೆ ಜೇಮ್ಸ್.
ಸಚಿನ್ ತೆಂಡೂಲ್ಕರ್ ಅವರನ್ನು ಔಟ್ ಮಾಡುವ ಯೋಜನೆ ನಾನು ಎಂದಿಗೂ ಮಾಡಿಲ್ಲ, ಅವರನ್ನು ಔಟ್ ಮಾಡುವ ಉದ್ದೇಶದಿಂದ ಎಂದಿಗೂ ನಾನು ಅವರಿಗೆ ಬೌಲ್ ಮಾಡಲೇ ಇಲ್ಲ ಎಂದಿದ್ದಾರೆ.
ಜೇಮ್ಸ್ ಆಂಡರ್ಸನ್ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಒಟ್ಟು 187 ಟೆಸ್ಟ್, 194 ODI, 19 ಅಂತರಾಷ್ಟ್ರೀಯ T20 ಪಂದ್ಯಗಳನ್ನು ಆಡಿದ್ದಾರೆ. ಆಡಿರುವ ಇಷ್ಟು ಪಂದ್ಯಗಳಲ್ಲಿ 700 ಟೆಸ್ಟ್ ವಿಕೆಟ್ಗಳು, 269 ODI ವಿಕೆಟ್ಗಳು, 18 T20 ವಿಕೆಟ್ಗಳನ್ನು ಜೇಮ್ಸ್ ಅಂಡರ್ಸನ್ ಕಬಳಿಸಿದ್ದಾರೆ.