Hibiscus For Hair Care: ಎಲ್ಲೆಡೆ ಸುಲಭವಾಗಿ ಲಭ್ಯವಿರುವ ದಾಸವಾಳದ ಹೂವು, ದೇವರ ಪೂಜೆ, ಅಲಂಕಾರಕ್ಕೆ ಮಾತ್ರವಲ್ಲದೆ ಉದ್ದನೆಯ ಮತ್ತು ಕಾಂತಿಯುತವಾದ ಕೂದಲನ್ನು ಪಡೆಯಲು ಕೂಡ ತುಂಬಾ ಪ್ರಯೋಜನಕಾರಿ ಆಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ದಾಸವಾಳವು ವಿಟಮಿನ್ ಸಿ, ಅಮೈನೋ ಆಮ್ಲಗಳು ಮತ್ತು ಇತರ ಪೋಷಕಾಂಶಗಳಿಂದ ಸಮೃದ್ಧವಾಗಿದೆ, ಇದು ಕೂದಲನ್ನು ಪೋಷಿಸುತ್ತದೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಉದ್ದ ಮತ್ತು ಹೊಳೆಯುವ ಕೂದಲನ್ನು ಪಡೆಯಲು ದಾಸವಾಳವನ್ನು ವಿವಿಧ ರೀತಿಯಲ್ಲಿ ಬಳಸಬಹುದು.
ಒಂದು ದಾಸವಾಳದ ಹೂವು, ಒಂದು ಹಿಡಿ ತಾಜಾ ದಾಸವಾಳದ ಎಲೆಗಳನ್ನು ತೆಗೆದುಕೊಳ್ಳಿ. ಹೂವಿನ ದಳಗಳನ್ನು ಬೇರ್ಪಡಿಸಿ, ಎಲೆಗಳೊಂದಿಗೆ ಚೆನ್ನಾಗಿ ತೊಳೆಯಿರಿ. ಇದನ್ನು ನುಣ್ಣಗೆ ರುಬ್ಬಿ, ಅದರೊಂದಿಗೆ ಕೊಬ್ಬರಿ ಎಣ್ಣೆಯನ್ನು ಮಿಶ್ರಣ ಮಾಡಿ. ಬಳಿಕ ಇದನ್ನು ಬುಡದಿಂದ ತುದಿಯವರೆಗೆ ಅನ್ವಯಿಸಿ 45-60 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ಹೇರ್ ವಾಶ್ ಮಾಡಿ.
3-4 ತಾಜಾ ಕೆಂಪು ದಾಸವಾಳದ ಹೂವಿನ ದಳಗಳನ್ನು ತೆಗೆದುಕೊಂಡು ಅದನ್ನು ತೊಳೆದು ಪೇಸ್ಟ್ ಮಾಡಿ. ದಾಸವಾಳ ಹೂಗಳ ಪೇಸ್ಟ್‌ಗೆ 2-3 ಚಮಚ ತಾಜಾ, ಸುವಾಸನೆಯಿಲ್ಲದ ಮೊಸರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಕೂದಲಿಗೆ ಅನ್ವಯಿಸಿ ಬಳಿಕ ಮಸಾಜ್ ಮಾಡಿ. ಒಂದು ಗಂಟೆ ಬಳಿಕ ಸೌಮ್ಯವಾದ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.
ದಾಸವಾಳದ ಪುಡಿ ಮತ್ತು ಆಮ್ಲಾ ಪುಡಿಯನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ಸ್ವಲ್ಪ ನೀರು ಸೇರಿಸಿ ಪೇಸ್ಟ್ ತಯಾರಿಸಿ. ಪರ್ಯಾಯವಾಗಿ, ಹೇರ್ ಪ್ಯಾಕ್ ತಯಾರಿಸಲು ನೀವು ನೀರಿನ ಬದಲಿಗೆ ಮೊಸರು ಅಥವಾ ತೆಂಗಿನ ಎಣ್ಣೆಯನ್ನು ಸೇರಿಸಬಹುದು. ಇದನ್ನು ಕೂದಲು ಮತ್ತು ನೆತ್ತಿಯ ಮೇಲೆ ಅನ್ವಯಿಸಿ. 40-45 ನಿಮಿಷಗಳ ಕಾಲ ಹಾಗೆ ಬಿಡಿ ಮತ್ತು ನಂತರ ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ.
8-10 ತಾಜಾ ಕೆಂಪು ದಾಸವಾಳದ ಹೂಗಳನ್ನು ತೆಗೆದುಕೊಂಡು ದಳಗಳನ್ನು ಬೇರ್ಪಡಿಸಿ. ಕೆಲವು ತಾಜಾ ದಾಸವಾಳದ ಎಲೆಗಳನ್ನು ಸಹ ತೆಗೆದುಕೊಳ್ಳಿ. ಬಳಿಕ ಒಂದು ಹಿಡಿ ಕರಿಬೇವಿನ ಎಲೆಗಳನ್ನು ತೆಗೆದುಕೊಂಡು ಎಲ್ಲವನ್ನೂ ಚೆನ್ನಾಗಿ ತೊಳೆದು ರುಬ್ಬಿಕೊಳ್ಳಿ. ಈ ಹೇರ್ ಪ್ಯಾಕ್ ಅನ್ನು ನೆತ್ತಿ ಕೂದಲಿಗೆ ಅಪ್ಪ್ಲೈ ಮಾಡಿ ಒಂದು ಗಂಟೆ ಬಳಿಕ ಸೌಮ್ಯವಾದ ಶಾಂಪೂವಿನಿಂದ ತೊಳೆಯಿರಿ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.