ಮುಂದೊಂದು ದಿನ ಪಾಕಿಸ್ತಾನದ ಪ್ರಧಾನಿಯಾಗುತ್ತೇನೆ ಎಂದು ಹೇಳಿದ್ದ ಮೆಹ್ವೀಶ್ ಹಯಾತ್.
1993ರ ಮುಂಬೈ ಸರಣಿ ಸ್ಫೋಟಗಳ ರೂವಾರಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಪಾಕಿಸ್ತಾನ ಚಿತ್ರರಂಗದ ಪ್ರಮುಖ ನಟಿ ಮೆಹ್ವೀಶ್ ಹಯಾತ್ ಜೊತೆ ಸಂಬಂಧವಿದೆ ಅಂತಾ ಗಾಳಿಸುದ್ದಿಗಳು ಹರದಾಡಿದ್ದವು. ಅಂಡರ್ವರ್ಲ್ಡ್ ಡಾನ್ ಜೊತೆಗೆ ನಟಿ ಸಂಬಂಧ ಹೊಂದಿದ್ದಾಳೆಂದು ಸ್ವತಃ ಪಾಕಿಸ್ತಾನದ ಕೆಲ ಚಿತ್ರರಂಗದ ಮೂಲಗಳೇ ಈ ಹಿಂದೆ ಹೇಳಿಕೊಂಡಿದ್ದವು. ಮುಂದೊಂದು ದಿನ ತಾನು ಪಾಕಿಸ್ತಾನದ ಪ್ರಧಾನಿಯಾಗಲು ಬಯಸುವುದಾಗಿ ಮೆಹ್ವೀಶ್ ಹಯಾತ್ ಹೇಳಿಕೊಂಡು ಸುದ್ದಿಯಾಗಿದ್ದರು.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ರಾಜಕೀಯ ಪ್ರವೇಶಿಸಲು ನನಗೆ ಸ್ಫೂರ್ತಿಯಾಗಿದ್ದಾರೆ. ಮುಂದೊಂದು ದಿನ ತಾನು ಕೂಡ ಪಾಕ್ ಪ್ರಧಾನಿ ಕುರ್ಚಿಯನ್ನು ಅಲಂಕರಿಸುತ್ತೇನೆಂದು ಸಂದರ್ಶನವೊಂದರಲ್ಲಿ ನಟಿ ತಿಳಿಸಿದ್ದರು. ಅಂಡರ್ ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ ಜೊತೆ ಲವ್ವಿ ಡವ್ವಿ ಇಟ್ಟುಕೊಂಡಿದ್ದಾಳೆನ್ನುವ ನಟಿ ಹಯಾತ್ ಬಗೆಗಿನ ಕೆಲ ಇಂಟರಸ್ಟಿಂಗ್ ಮಾಹಿತಿ ಇಲ್ಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪ್ರೇಯಸಿ ಎಂದು ಹೇಳಲಾಗುತ್ತಿರುವ ಮೆಹ್ವೀಶ್ ಹಯಾತ್ ಪಾಕಿಸ್ತಾನದ ಜನಪ್ರಿಯ ಚಲನಚಿತ್ರ ಮತ್ತು ಟೆಲಿವಿಷನ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಅನೇಕ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಅವರು ನಟಿಸಿದ್ದು, ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಅಂಡರ್ ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ, ಪಾಕ್ ನಟಿ ಮೆಹ್ವೀಶ್ ಹಯಾತ್ ರತ್ತ ಆಕರ್ಷಿತನಾಗಿದ್ದ. ದಾವೂದ್ ಜೊತೆಗೆ ಲವ್ವಿ ಡವ್ವಿ ನಡೆಸುತ್ತಿದ್ದಾಳೆಂಬ ವದಂತಿಯ ಕಾರಣದಿಂದ ಹಯಾತ್ ಅವರಿಗೆ ಅನೇಕ ಉತ್ತಮ ಚಿತ್ರಗಳ ಆಫರ್ ಗಳು ಹುಡುಕಿಕೊಂಡು ಬಂದವು ಎನ್ನಲಾಗಿದೆ. ಬಿಗ್ ಬಜೆಟ್ ಚಿತ್ರಗಳಲ್ಲಿ ಅವರು ನಟಿಸುವ ಮೂಲಕ ಪಾಕ್ ನಲ್ಲಿ ಜನಪ್ರಿಯ ನಟಿಯಾಗಿ ಹೆಸರು ಮಾಡಿದ್ದಾರೆ.
2019 ರಲ್ಲಿ ಪಾಕಿಸ್ತಾನದ ನಾಗರಿಕ ಗೌರವ ‘ತಮಘಾ-ಇ-ಇಮ್ತಿಯಾಜ್’ಗೆ ನಟಿ ಮೆಹ್ವೀಶ್ ಹಯಾತ್ ಪಾತ್ರರಾಗಿದ್ದರು. ಆ ಬಳಿಕ ನಟಿ ಜೊತೆಗೆ ದಾವೂದ್ ಇಬ್ರಾಹಿಂ ಸಂಬಂಧ ಹೊಂದಿದ್ದಾರೆಂಬ ವದಂತಿಗಳು ಶುರುವಾದವು. ವಿಶೇಷವೆಂದರೆ ವಯಸ್ಸಿನಲ್ಲಿ ದಾವೂದ್ ಗಿಂತ ಹಯಾತ್ 27 ವರ್ಷ ಚಿಕ್ಕವಳಾಗಿದ್ದಾಳೆ.
ಇತ್ತೀಚಿಗಿನ ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟಿ ಮೆಹ್ವೀಶ್ ಹಯಾತ್ ರಾಜಕೀಯ ಪ್ರವೇಶಿಸುವ ಇಂಗಿತ ವ್ಯಕ್ತಪಡಿಸಿದ್ದರು. ಮುಂದೊಂದು ದಿನ ಪಾಕಿಸ್ತಾನದ ಪ್ರಧಾನಿಯಾಗಲು ತಾವು ಬಯಸುವುದಾಗಿ ಹೇಳಿಕೊಂಡಿದ್ದರು. ರಾಜಕೀಯಕ್ಕೆ ಬರಲು ಪ್ರಧಾನಿ ಇಮ್ರಾನ್ ಖಾನ್(ಆಡಳಿತಾರೂಢ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಪಕ್ಷ)ರಿಂದ ನಾನು ಸ್ಫೂರ್ತಿ ಪಡೆದಿದ್ದೇನೆ. ಏಕೆಂದರೆ ಅವರು ಉತ್ತಮ ಬದಲಾವಣೆಗಳನ್ನು ತಂದಿದ್ದಾರೆ. ಸಮಾಜವು ಯೋಚಿಸುವ ರೀತಿಯಲ್ಲಿ ಮಾದರಿ ಬದಲಾವಣೆಗಳನ್ನು ಪಾಕಿಸ್ತಾನದಲ್ಲಿ ತಂದಿದ್ದಾರೆ’ ಎಂದು ಹೇಳಿಕೊಂಡಿದ್ದರು.
ಒಂದು ವೇಳೆ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಪ್ರಧಾನಿ ಇಮ್ರಾನ್ ಖಾನ್ ಅವರ ಸವಾಲು ಎದುರಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಮೆಹ್ವೀಶ್ ಹಯಾತ್ ‘ನಾನು ಪ್ರಧಾನಮಂತ್ರಿ ಸ್ಥಾನಕ್ಕೆ ಸ್ಪರ್ಧಿಯಾಗಬಹುದು’ ಅಂತಾ ಹೇಳಿದ್ದರು.