Miss Universe 2021: 70ನೇ ಭುವನ ಸುಂದರಿ 2021 (Miss Universe 2021) ಆಗಿ 21 ವರ್ಷದ ಹರ್ನಾಜ್ ಸಂಧು ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಐಲಾಟ್ (ಇಸ್ರೇಲ್): ಎರಡು ದಶಕಗಳ ನಂತರ ಭಾರತದ ಚೆಲುವೆಗೆ 'ಭುವನ ಸುಂದರಿ' ಪಟ್ಟ ಒಲಿದಿದೆ. 2000 ರಲ್ಲಿ ಲಾರಾ ದತ್ತಾ ಈ ಪ್ರಶಸ್ತಿಯನ್ನು ಗೆದ್ದಿದ್ದರು.ಇದೀಗ 70ನೇ ಭುವನ ಸುಂದರಿ 2021 (Miss Universe 2021) ಆಗಿ 21 ವರ್ಷದ ಹರ್ನಾಜ್ ಸಂಧು ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಇಸ್ರೇಲ್ನ ಐಲಾಟ್ನಲ್ಲಿ ನಡೆದ ಮಿಸ್ ಯೂನಿವರ್ಸ್ 2021 ರ ಸ್ಪರ್ಧೆ ಕಿರೀಟವನ್ನು ಗೆಲ್ಲುವ ಮೂಲಕ ಹರ್ನಾಜ್ (Harnaaz Sandhu) ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದ್ದಾರೆ.
2020 ರ ಭುವನ ಸುಂದರಿ ಮೆಕ್ಸಿಕೋದ ಆಂಡ್ರಿಯಾ ಮೆಜಾ ತನ್ನ ಕಿರೀಟವನ್ನು ಹೊಸ ಉತ್ತರಾಧಿಕಾರಿಗೆ ಹಸ್ತಾಂತರಿಸಿದರು.
2017 ರಲ್ಲಿ ಟೈಮ್ಸ್ ಫ್ರೆಶ್ ಫೇಸ್ ಮಿಸ್ ಚಂಡೀಗಢ, 2018 ರಲ್ಲಿ ಮಿಸ್ ಮ್ಯಾಕ್ಸ್ ಎಮರ್ಜಿಂಗ್ ಸ್ಟಾರ್, 2019 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಪಂಜಾಬ್ ಮತ್ತು 2021 ರಲ್ಲಿ ಲಿವಾ ಮಿಸ್ ದಿವಾ ಮಿಸ್ ಯೂನಿವರ್ಸ್ ಇಂಡಿಯಾ ಆಗಿ ಹೊರ ಹೊಮ್ಮಿದ್ದಾರೆ.
ತಮ್ಮ ಆರಂಭಿಕ ಶಿಕ್ಷಣವನ್ನು ಚಂಡೀಗಢದ ಶಿವಾಲಿಕ್ ಪಬ್ಲಿಕ್ ಸ್ಕೂಲ್ನಲ್ಲಿ ಮುಗಿಸಿದ ಈ ಸುಂದರಿ, ಚಂಡೀಗಢದಲ್ಲಿಯೇ ಪದವಿ ಪಡೆದಿದ್ದಾರೆ.
ಭುವನ ಸುಂದರಿ ಸಂಧು "ಯಾರಾ ದಿಯಾನ್ ಪೂ ಬರನ್" ಮತ್ತು "ಬಾಯಿ ಜಿ ಕುಟ್ಟಂಗೆ" ಸೇರಿದಂತೆ ಕೆಲವು ಪಂಜಾಬಿ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಮಿಸ್ ಯೂನಿವರ್ಸ್ 2021 ರ ಸ್ಪರ್ಧೆ ಕಿರೀಟವನ್ನು ಗೆಲ್ಲುವ ಮೂಲಕ ಹರ್ನಾಜ್ (Harnaaz Sandhu) ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದ್ದಾರೆ.
80 ದೇಶಗಳ ಸ್ಪರ್ಧಿಗಳನ್ನು ಹಿಂದಿಕ್ಕಿ ಭಾರತದ ಹರ್ನಾಜ್ ಸಂಧು (21) ವಿಶ್ವ ಸುಂದರಿ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಆಕೆಯ ಹೆಸರನ್ನು ವಿಜೇತರೆಂದು ಘೋಷಿಸಿದ ಕ್ಷಣ, ಹರ್ನಾಜ್ ಆನಂದ ಬಾಷ್ಪ ಸುರಿಸಿದರು.
ಹರ್ನಾಜ್ ಸ್ಪರ್ಧಿಗಳಾದ ಪರಾಗ್ವೆ ಮತ್ತು ದಕ್ಷಿಣ ಆಫ್ರಿಕಾವನ್ನು ಹಿಂದಿಕ್ಕಿ ಭುವನ ಸುಂದರಿ ಪಟ್ಟ ಪಡೆದಿದ್ದಾರೆ.
ಇಸ್ರೇಲ್ನ ಐಲಾಟ್ನಲ್ಲಿ ನಡೆದ ಮಿಸ್ ಯೂನಿವರ್ಸ್ 2021 ರ ಸ್ಪರ್ಧೆಯಲ್ಲಿ ಹರ್ನಾಜ್ ಸಂಧು ಭಾರತವನ್ನು ಪ್ರತಿಸಿಧಿಸಿದ್ದರು.
ಚಂಡೀಗಢ ಮೂಲದ ಹರ್ನಾಜ್ ಸಂಧು 2021 ನೀ ಸಾಲಿನ ಮಿಸ್ ಯೂನಿವರ್ಸ್ ಪಟ್ಟವನ್ನು ಅಲಂಕರಿಸಿದ್ದಾರೆ.
ಎರಡು ದಶಕಗಳ ನಂತರ ಭಾರತದ ಚೆಲುವೆಗೆ 'ಭುವನ ಸುಂದರಿ' ಪಟ್ಟ ಒಲಿದಿದೆ. 2000 ರಲ್ಲಿ ಲಾರಾ ದತ್ತಾ ಈ ಪ್ರಶಸ್ತಿಯನ್ನು ಗೆದ್ದಿದ್ದರು.