Monkeypox: ಮಂಕಿಪಾಕ್ಸ್ ವೈರಸ್‌ ಹೇಗೆ ಹರಡುತ್ತದೆ ಗೊತ್ತಾ..?

Monkeypox Symptoms & Treatment: ಜ್ವರ ಕಾಣಿಸಿಕೊಂಡ ನಂತರ 1-3 ದಿನಗಳಲ್ಲಿ ರೋಗಿಯಲ್ಲಿ ದದ್ದುಗಳು ಕಾಣಿಸಿಕೊಳ್ಳುತ್ತದೆ. ಮೊದಲು ಮುಖದ ಮೇಲೆ ದದ್ದು ಪ್ರಾರಂಭವಾಗುತ್ತದೆ. ನಂತರ ದೇಹದ ಇತರ ಭಾಗಗಳಿಗೆ ಹರಡುತ್ತದೆ. ಈ ಅನಾರೋಗ್ಯವು ಸಾಮಾನ್ಯವಾಗಿ 2-4 ವಾರಗಳವರೆಗೆ ಇರುತ್ತದೆ.

Monkeypox Symptoms & Treatment: ಆಫ್ರಿಕಾದ ಕಾಂಗೋ ಸೇರಿದಂತೆ 13 ದೇಶಗಳಲ್ಲಿ ಮಂಕಿಫಾಕ್ಸ್​ ಕಾಯಿಲೆ ವೇಗವಾಗಿ ಹರಡುತ್ತಿರುವ ಹಿನ್ನೆಲೆ ವಿಶ್ವ ಆರೋಗ್ಯ ಸಂಸ್ಥೆ (WHO) 3 ವರ್ಷಗಳಲ್ಲಿ ೨ನೇ ಬಾರಿಗೆ ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಘೋಷಿಸಿದೆ. ಈಗಾಗಲೇ ಈ ಮಾರಕ ಕಾಯಿಲೆಗೆ 500ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ವೈರಸ್​ ಹರಡುವುದನ್ನು ತಡೆಯಲು ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಸಹಾಯಕ್ಕಾಗಿ ಕರೆ ನೀಡಿದೆ. ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಮಂಕಿಫಾಕ್ಸ್​ ಕಾಯಿಲೆ ಬಗ್ಗೆ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಮಂಕಿಫಾಕ್ಸ್ ಸೋಂಕಿನ ಬಗ್ಗೆ ಆತಂಕಪಡಬಾರದು. ವಿಮಾನ ನಿಲ್ದಾಣ, ಬಂದರು ಸೇರಿ ವಿವಿಧೆಡೆ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಈಗಾಗಲೇ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್‌ ಪಾಟೀಲ್ ಹೇಳಿದ್ದಾರೆ. ಈ ಮಂಕಿಪಾಕ್ಸ್ ವೈರಸ್‌ ಹೇಗೆ ಹರಡುತ್ತದೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /6

ಮಂಕಿಫಾಕ್ಸ್​ ಕಾಯಿಲೆ ಸಿಡುಬು ವೈರಸ್‌ಗೆ ನಿಕಟ ಸಂಬಂಧ ಹೊಂದಿದೆ. ಮಂಕಿಪಾಕ್ಸ್ ವೈರಸ್ ಸೋಂಕಿತ ಪ್ರಾಣಿ ಅಥವಾ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕದಿಂದ ಹರಡಬಹುದು.

2 /6

ಸಾಮಾನ್ಯವಾಗಿ ದದ್ದು, ಹುಣ್ಣುಗಳು ಹೊಂದಿರುವ ವ್ಯಕ್ತಿಯೊಂದಿಗೆ ಚರ್ಮದಿಂದ ಚರ್ಮದ ಸಂಪರ್ಕಕ್ಕೆ ಒಳಗಾದರೆ ಮನುಷ್ಯನಿಂದ ಮನುಷ್ಯನಿಗೆ ಈ ಸೋಂಕು ಹರಡುತ್ತದೆ.

3 /6

ನಿಕಟ ಲೈಂಗಿಕ ಸಂಪರ್ಕದ ಸಮಯದಲ್ಲಿ ಉಸಿರಾಟದ ಹನಿಗಳು ಅಥವಾ ಮೌಖಿಕ ದ್ರವಗಳ ಮೂಲಕವೂ ಮಂಕಿಫಾಕ್ಸ್​ ಕಾಯಿಲೆ ಹರಡಬಹುದು.

4 /6

ಮಂಕಿಪಾಕ್ಸ್ ವೈರಸ್‌ನಿಂದ ಕಲುಷಿತಗೊಂಡಿರುವ ಬಟ್ಟೆಗಳು, ವಸ್ತುಗಳು ಅಥವಾ ಮೇಲ್ಮೈಗಳೊಂದಿಗಿನ ಸಂಪರ್ಕವು (ಬಟ್ಟೆ, ಹಾಸಿಗೆ ಅಥವಾ ಟವೆಲ್‌ಗಳಂತಹವು) ಸಹ ಸೋಂಕು ಹರಡಲು ಕಾರಣವಾಗಬಹುದು.

5 /6

ಜ್ವರ, ತಲೆನೋವು, ಸ್ನಾಯು ನೋವುಗಳು, ಬೆನ್ನುನೋವು, ಊದಿಕೊಂಡ ದುಗ್ಧರಸ ಗ್ರಂಥಿಗಳು, ಚಳಿ ಮತ್ತು ನಿಶ್ಯಕ್ತಿ ಮಂಕಿಫಾಕ್ಸ್​ ಕಾಯಿಲೆಯ ರೋಗ ಲಕ್ಷಣಗಳಾಗಿವೆ. 

6 /6

ಜ್ವರ ಕಾಣಿಸಿಕೊಂಡ ನಂತರ 1-3 ದಿನಗಳಲ್ಲಿ ರೋಗಿಯಲ್ಲಿ ದದ್ದುಗಳು ಕಾಣಿಸಿಕೊಳ್ಳುತ್ತದೆ. ಮೊದಲು ಮುಖದ ಮೇಲೆ ದದ್ದು ಪ್ರಾರಂಭವಾಗುತ್ತದೆ. ನಂತರ ದೇಹದ ಇತರ ಭಾಗಗಳಿಗೆ ಹರಡುತ್ತದೆ. ಈ ಅನಾರೋಗ್ಯವು ಸಾಮಾನ್ಯವಾಗಿ 2-4 ವಾರಗಳವರೆಗೆ ಇರುತ್ತದೆ.