Bollywood Actresses: ತಮ್ಮನ ವಯಸ್ಸಿನವರನ್ನು ನೋಡಿ, ಲವ್ ಮಾಡಿ ಮದುವೆಯಾದ ‘ಸ್ಟಾರ್’ ಸೆಲೆಬ್ರಿಟಿಗಳು ಇವರು

Bollywood Actresses: ಸೆಲೆಬ್ರಿಟಿಗಳ ಜೀವನ ಕೊಂಚ ವಿಭಿನ್ನವಾಗಿರುತ್ತದೆ. ಅವರ ಪ್ರೇಮ ಜೀವನ ಕೂಡ ಎಲ್ಲಕ್ಕಿಂತ ಭಿನ್ನ. ಇಂದು ನಾವು ನಿಮಗೆ ತಿಳಿಸಹೊರಟಿರುವುದು ಬಾಲಿವುಡ್ ಮತ್ತು ಕ್ರೀಡಾ ಲೋಕದಲ್ಲಿ ತಮಗಿಂತ ಕಿರಿಯ ವಯಸ್ಸಿನವರ ಜೊತೆ ವಿವಾಹವಾದ ಸ್ಟಾರ್’ಗಳ ಬಗ್ಗೆ.

1 /9

ಸೆಲೆಬ್ರಿಟಿಗಳ ಜೀವನ ಕೊಂಚ ವಿಭಿನ್ನವಾಗಿರುತ್ತದೆ. ಅವರ ಪ್ರೇಮ ಜೀವನ ಕೂಡ ಎಲ್ಲಕ್ಕಿಂತ ಭಿನ್ನ. ಇಂದು ನಾವು ನಿಮಗೆ ತಿಳಿಸಹೊರಟಿರುವುದು ಬಾಲಿವುಡ್ ಮತ್ತು ಕ್ರೀಡಾ ಲೋಕದಲ್ಲಿ ತಮಗಿಂತ ಕಿರಿಯ ವಯಸ್ಸಿನವರ ಜೊತೆ ವಿವಾಹವಾದ ಸ್ಟಾರ್’ಗಳ ಬಗ್ಗೆ.

2 /9

ಬಾಲಿವುಡ್, ಹಾಲಿವುಡ್’ನಲ್ಲಿ ಸಾಕಷ್ಟು ಹೆಸರು ಗಳಿಸಿರುವ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್‌ ಜೊತೆ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಪ್ರಿಯಾಂಕಗಿಂತ ನಿಕ್ 10 ವರ್ಷ ಸಣ್ಣವರು.

3 /9

ವಿಶ್ವದ ಅತ್ಯಂತ ಸುಂದರ ಮಹಿಳೆಯರಲ್ಲಿ ಒಬ್ಬರಾಗಿರುವ ಐಶ್ವರ್ಯಾ ರೈ ಅವರು 2007 ರಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದರು. ಆಗ ಅವರ ವಯಸ್ಸು 34 ವರ್ಷ, ಅಭಿಷೇಕ್ ವಯಸ್ಸು 31 ಆಗಿತ್ತು.

4 /9

2016 ರಲ್ಲಿ ಬಿಪಾಶಾ ಬಸು ಕರಣ್ ಸಿಂಗ್ ಗ್ರೋವರ್ ಅವರನ್ನು ವಿವಾಹವಾದರು. ತನಗಿಂತ 3 ವರ್ಷ ಚಿಕ್ಕವನಾದ ಕರಣ್ ಸಿಂಗ್ ಜೊತೆ ಬಸು ಮದುವೆಯಾದಾಗ ಅಭಿಮಾನಿಗಳು ಶಾಕ್ ಆಗಿದ್ದರು.

5 /9

2015 ರಲ್ಲಿ ಸೋಹಾ ಅಲಿ ಖಾನ್ ಮತ್ತು ಕುನಾಲ್ ಖೆಮ್ಮು ವಿವಾಹವಾದರು. ಆಗ ಸೋಹಾ ವಯಸ್ಸು 37 ವರ್ಷ ಮತ್ತು ಕುನಾಲ್ ಖೆಮ್ಮು ಅವರಿಗೆ 32 ವರ್ಷವಾಗಿತ್ತು.

6 /9

ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ ಮದುವೆಯಾಗಿ ಮೂರು ವರ್ಷಗಳಾಗಿವೆ. ನೇಹಾ ಅಂಗದ್ ಬೇಡಿಗಿಂತ ಮೂರು ವರ್ಷ ದೊಡ್ಡವರು.

7 /9

ನಟಿ ಅಮೃತಾ ಸಿಂಗ್ ಅವರು 90ರ ದಶಕದಲ್ಲಿ ತನಗಿಂತ ಹತ್ತು ವರ್ಷಕ್ಕಿಂತ ಕಿರಿಯ ನಟ ಸೈಫ್ ಅಲಿ ಖಾನ್ ಅವರನ್ನು ವಿವಾಹವಾದರು. ಆದರೆ 13 ವರ್ಷಗಳ ನಂತರ ಆ ಮದುವೆ ಮುರಿದುಬಿತ್ತು.

8 /9

ಕ್ರೀಡಾ ಲೋಕದಲ್ಲಿಯೂ ಇಂತಹ ಜೋಡಿಯೊಂದಿದೆ. ಸಚಿನ್ ತೆಂಡೂಲ್ಕರ್ ಮತ್ತು ಅಂಜಲಿ ತೆಂಡೂಲ್ಕರ್ ನಡುವೆ  6 ವರ್ಷಗಳ ಅಂತರವಿದೆ.

9 /9

ಬಾಲಿವುಡ್ ನಟಿ ಮಲೈಕಾ ಅರೋರಾ ಕೂಡ ನಟ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.