Neem Oil Benefits: ಬೇವಿನ ಎಣ್ಣೆಯು (Neem Oil) ಆಂಟಿಮೈಕ್ರೊಬಿಯಲ್ ಗುಣಗಳ ಆಗರವಾಗಿದೆ. ಹೀಗಾಗಿ ಇದು ಚರ್ಮದ ಸಮಸ್ಯೆಗಳಿಂದ ಹಿಡಿದು ಹಲವು ರೋಗಗಳಿಗೆ ರಾಮಬಾಣ ಚಿಕಿತ್ಸೆಯಾಗಿದೆ.
ನವದೆಹಲಿ: Neem Oil Benefits - ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಬೇವಿನ (Neem) ಎಣ್ಣೆಯು ಅನೇಕ ರೋಗಗಳಲ್ಲಿ ರಾಮಬಾಣ ಎಂದು ಎಂದು ಈಗಾಗಲೇ ಸಾಬೀತಾಗಿದೆ. ಬೇವಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಅಂಶಗಳು ಕಂಡುಬರುತ್ತವೆ. ಹೀಗಾಗಿ ಅದು ನಿಮಗೆ ಹಲವು ರೋಗಗಳಿಂದ ರಕ್ಷಣೆ ಒದಗಿಸುತ್ತದೆ.
ಇದನ್ನೂ ಓದಿ-Benefits Of Lemon: ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ಒಂದೇ ಒಂದು ನಿಂಬೆಯನ್ನು ಈ ರೀತಿ ಬಳಸಿ
(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಝೀ ಹಿಂದುಸ್ತಾನ್ ಕನ್ನಡ ಇದನ್ನು ಖಚಿತಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ನುರಿತ ತಜ್ಞರ ಸಲಹೆ ಪಡೆಯಲು ಮರೆಯಬೇಡಿ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
1. ಅಸ್ತಮಾದಿಂದ ಪರಿಹಾರ - ಅಸ್ತಮಾ (Asthma) ಸಮಸ್ಯೆ ಇದ್ದರೆ ಬೇವಿನ ಎಣ್ಣೆಯನ್ನು ಬಿಸಿಬಿಸಿ ನೀರಲ್ಲಿ ಬೆರೆಸಿ ಅದರ ಆವಿಯನ್ನು ತೆಗೆದುಕೊಳ್ಳಿ. ಬೇವಿನ ಎಣ್ಣೆಯು ಹಿಸ್ಟಮಿನಿಕ್ ವಿರೋಧಿ ಅಂಶಗಳನ್ನು ಹೊಂದಿದೆ ಮತ್ತು ಅದು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿಂದಾಗಿ, ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಆವಿಯನ್ನು ತೆಗೆದುಕೊಳ್ಳಲು ನೀರನ್ನು ಮೊದಲು ಬಿಸಿ ಮಾಡಿ. ನಂತರ ಅದಕ್ಕೆ ಕೆಲ ಹನಿ ಬೇವಿನ ಎಣ್ಣೆಯನ್ನು ಸೇರಿಸಿ. ಇದರ ನಂತರ, ನಿಮ್ಮ ತಲೆ ಮತ್ತು ಮುಖವನ್ನು ಟವೆಲ್ ನಿಂದ ಮುಚ್ಚಿ ಮತ್ತು ಆವಿಯನ್ನು ತೆಗೆದುಕೊಳ್ಳಿ.
2. ಚರ್ಮದ ಸಮಸ್ಯೆಗಳಿಗೆ ಪರಿಣಾಮಕಾರಿ - ಎಸ್ಜಿಮಾ ಎನ್ನುವುದು ಒಂದು ರೀತಿಯ ಚರ್ಮದ ಸಮಸ್ಯೆಯಾಗಿದ್ದು (Skin Infection), ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯಿಂದ ಉದ್ಭವಿಸುತ್ತದೆ. ಇದು ಶುಷ್ಕತೆ ಮತ್ತು ತುರಿಕೆಯ ಸಮಸ್ಯೆಯನ್ನು ಉಂಟುಮಾಡುತ್ತದೆ. ಎಸ್ಜಿಮಾ ಕಲೆಗಳಿಗೆ ಬೇವಿನ ಎಣ್ಣೆಯನ್ನು ಬಳಸಿ. ಇದರಿಂದ ನೀವು ಸಾಕಷ್ಟು ಪರಿಹಾರವನ್ನು ಕಂಡುಕೊಳ್ಳುವಿರಿ. ಎಣ್ಣೆಯು ಶುಷ್ಕತೆಯನ್ನು ಕಡಿಮೆ ಮಾಡುತ್ತದೆ ಮತ್ತು ಸೋಂಕು ದೇಹದ ಇತರ ಭಾಗಗಳಿಗೆ ಹರಡುವುದಿಲ್ಲ.
3. ಸೋರಿಯಾಸಿಸ್ ನಿವಾರಣೆಗೆ ಪರಿಣಾಮಕಾರಿ - ಸೋರಿಯಾಸಿಸ್ ಕೂಡ ಒಂದು ಆಟೋಇಮ್ಯೂನ್ ಕಾಯಿಲೆಯಾಗಿದೆ. ಇದೂ ಕೂಡ ಚರ್ಮದ ಶುಷ್ಕತೆಯನ್ನು ಹೆಚ್ಚಿಸುತ್ತದೆ. ಬೇವಿನ ಎಣ್ಣೆ ಈ ಕಾಯಿಲೆಗೆ ಒಂದು ಪರಿಣಾಮಕಾರಿ ಮದ್ದಾಗಿದೆ.
4. ಫಂಗಲ್ ಇನ್ಫೆಕ್ಷನ್ (Fungal Infection) ಗೆ ರಾಮಬಾಣ - ಮಳೆಗಾಲದಲ್ಲಿ ಉಂಟಾಗುವ ಶಿಲೀಂಧ್ರಗಳ ಸೋಂಕನ್ನು ತಡೆಗಟ್ಟುವಲ್ಲಿ ಬೇವಿನ ಎಣ್ಣೆ ಬಹಳ ಪರಿಣಾಮಕಾರಿಯಾಗಿದೆ. ಇದನ್ನು ಬಳಸುವುದರಿಂದ, ಶಿಲೀಂಧ್ರಗಳ ಸೋಂಕಿನಿಂದ ಉಂಟಾಗುವ ಹಲವು ರೀತಿಯ ಚರ್ಮದ ಸಮಸ್ಯೆಗಳು ಸಹ ನಿವಾರಣೆಯಾಗುತ್ತವೆ. ಬೇವಿ ಎಣ್ಣೆಯಲ್ಲಿ ಕಂಡುಬರುವ 'ಗೆಡುನಿನ್' ಮತ್ತು 'ನಿಬಿಡಾಲ್' ಎಂಬ ಎರಡು ಅಂಶಗಳು ಚರ್ಮದ ಶಿಲೀಂಧ್ರ ಸೋಂಕನ್ನು ನಿವಾರಿಸುತ್ತದೆ.
5. ಹಲ್ಲು ಮತ್ತುಒಸಡುಗಳಿಗೆ ಉತ್ತಮ - ನೀವು ಹಲ್ಲು ಮತ್ತು ಒಸಡುಗಳ ಸಮಸ್ಯೆಯಿಂದ ಬಳಲುತ್ತಿದ್ದರೆ, ನಿಮ್ಮ ಹಲ್ಲುಜ್ಜುವ ಪೇಸ್ಟ್‌ನಲ್ಲಿ ಕೆಲವು ಹನಿ ಬೇವಿನ ಎಣ್ಣೆಯನ್ನು ಬೆರೆಸಿ ಪೇಸ್ಟ್ ಮಾಡಿ. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಅಂಶಗಳು ಹಲ್ಲಿನ ಸಮಸ್ಯೆಗಳನ್ನು ತೆಗೆದುಹಾಕುತ್ತವೆ ಮತ್ತು ನಿಮಗೆ ಹಲ್ಲುನೋವು, ಹಲ್ಲಿನ ಕ್ಯಾನ್ಸರ್, ಹಲ್ಲಿನ ಕ್ಷಯದಂತಹ ಸಮಸ್ಯೆಗಳು ಎಂದಿಗೂ ಕೂಡ ಕಾಡುವುದಿಲ್ಲ.