Things Not to Give to Bride: ಹೆಣ್ಣು ಮದುವೆಯಾದ ಬಳಿಕ ತವರಿನಿಂದ ಗಂಡನ ಮನೆಗೆ ಹೋಗುವಾಗ ಉಡುಗೊರೆಗಳನ್ನು ನೀಡವುದು ವಾಡಿಕೆ. ಆದರೆ ಕೆಲ ವಸ್ತುಗಳನ್ನು ಆಕೆಗೆ ನೀಡಬಾರದು ಎಂದು ಹೇಳಲಾಗುತ್ತದೆ. ಅಂತಹ ವಸ್ತುಗಳ ಬಗ್ಗೆ ಇಂದು ಮಾಹಿತಿ ನೀಡಲಿದ್ದೇವೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ಜೀ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ಮದುಮಗಳು ತನ್ನ ಗಂಡನ ಮನೆಗೆ ಹೋಗುವಾಗ, ಆಕೆಯ ತವರಿನಿಂದ ಅಡುಗೆ ಒಲೆಯನ್ನು ನೀಡುತ್ತಾರೆ. ಇದು ಕುಟುಂಬವನ್ನು ಒಡೆಯುವ ಸೂಚಕ ಎಂದು ಹೇಳಲಾಗುತ್ತದೆ.
ವಧುವಿಗೆ ಉಪ್ಪನ್ನು ಸಹ ನೀಡಬಾರದು. ಇದರ ಬದಲಾಗಿ ಸಿಹಿಯನ್ನಿ ನೀಡಬೇಕು. ಸಿಹಿ ನೀಡಿದರೆ, ಹೊಸ ಸಂಬಂಧಗಳಲ್ಲಿ ಬಾಂಧವ್ಯ ಚೆನ್ನಾಗಿರುತ್ತದೆ.
ವಧುವಿಗೆ ಎಂದಿಗೂ ಹಿಟ್ಟಿನ ಜರಡಿ ನೀಡಬೇಡಿ. ಇದು ಸಂತೋಷದ ಜೀವನದಲ್ಲಿ ತೊಂದರೆ ತರಬಹುದು.
ಪೊರಕೆಯನ್ನೂ ಸಹ ನೀಡಬೇಡಿ. ಪೊರಕೆಯಲ್ಲಿ ತಾಯಿ ಲಕ್ಷ್ಮಿ ನೆಲೆಸಿದ್ದಾಳೆ ಎಂಬ ನಂಬಿಕೆ ಇದೆ. ಇದೇ ಕಾರಣಕ್ಕೆ ಪೊರಕೆಯನ್ನು ದಾನ ಮಾಡಬೇಡಿ.
ನಿಮ್ಮ ಮಗಳಿಗೆ ಉಪ್ಪಿನಕಾಯಿಯನ್ನು ಸಹ ಎಂದಿಗೂ ನೀಡಬೇಡಿ. ಇದು ಹೊಸ ಸಂಬಂಧಗಳಲ್ಲಿ ಹುಳುಕು ಉಂಟುಮಾಡುತ್ತದೆ ಎಂದು ಹೇಳಲಾಗುತ್ತದೆ.
ಚೂಪಾದ ವಸ್ತುಗಳನ್ನು ಸಹ ವಧುವಿಗೆ ನೀಡಬೇಡಿ. ಇದು ಸಂಬಂಧಗಳಲ್ಲಿ ಮುಳ್ಳು ಚುಚ್ಚಿದ ರೀತಿ ಎಂದು ಪರಿಗಣಿಸಲಾಗುತ್ತದೆ.