Facebook ನಿಂದ ನಿಮಗೂ ಈ ಮೇಲ್ ಬಂದಿದೆಯಾ? ತಕ್ಷಣ ಎಚ್ಚೆತ್ತುಕೊಳ್ಳಿ! ಇಲ್ದಿದ್ರೆ ಭಾರಿ ಹಾನಿ

Online Scam Fake Facebook Mails Alert: ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಅಂತರ್ಜಾಲದ ಬಳಕೆಯಿಂದ ಆನ್ಲೈನ್ ವಂಚನೆ ಪ್ರಕರಣಗಳೂ ಕೂಡ ಹೆಚ್ಚುತ್ತಿವೆ. ಇತ್ತೀಚಿಗೆ ಪ್ರಕಟಗೊಂಡ ವರದಿಯೊಂದರ ಪ್ರಕಾರ Gmail ಮತ್ತು Hotmail ಬಳಕೆದಾರರಿಗೆ ಅಪಾಯಕಾರಿ ಮೇಲ್ ವೊಂದು ಬರುತ್ತಿದೆ ಎಂದು ಹೇಳಲಾಗಿದೆ. ಈ ಮೇಲ್ ತುಂಬಾ ಅಪಾಯಕಾರಿಯಾಗಿದೆ ಎನ್ನಲಾಗಿದೆ. 

Online Scam Fake Facebook Mails Alert: ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಅಂತರ್ಜಾಲದ ಬಳಕೆಯಿಂದ ಆನ್ಲೈನ್ ವಂಚನೆ ಪ್ರಕರಣಗಳೂ ಕೂಡ ಹೆಚ್ಚುತ್ತಿವೆ. ಇತ್ತೀಚಿಗೆ ಪ್ರಕಟಗೊಂಡ ವರದಿಯೊಂದರ ಪ್ರಕಾರ Gmail ಮತ್ತು Hotmail ಬಳಕೆದಾರರಿಗೆ ಅಪಾಯಕಾರಿ ಮೇಲ್ ವೊಂದು ಬರುತ್ತಿದೆ ಎಂದು ಹೇಳಲಾಗಿದೆ. ಈ ಮೇಲ್ ತುಂಬಾ ಅಪಾಯಕಾರಿಯಾಗಿದೆ ಎನ್ನಲಾಗಿದೆ. ವಂಚಕರು ಈ ಮೇಲ್ ಅನ್ನು ಕಳುಹಿಸುತ್ತಿದ್ದಾರೆ. ಆದರೆ, ನಿಮಗೆ ಈ ಮೇಲ್ ಫೇಸ್ಬುಕ್ ನಿಂದ ಬಂದಿದೆ ಎಂಬಂತೆ ತೋರುತ್ತದೆ. ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಕದಿಯುವ ಉದ್ದೇಶದಿಂದ ಈ ವಂಚನೆಯ ಮೇಲ್ ಕಳುಹಿಸಲಾಗುತ್ತಿದೆ ಮತ್ತು ತುಂಬಾ ಚಾಣಾಕ್ಷ ರೀತಿಯಲ್ಲಿ ಅದನ್ನು ಎಕ್ಸಿಕ್ಯೂಟ್ ಮಾಡಲಾಗುತ್ತಿದೆ. 

 

ಇದನ್ನೂ ಓದಿ-BSNL: ಸೈಲೆಂಟ್ ಆಗಿ 3 ಅತ್ಯಂತ ಆಗ್ಗದ ಪ್ರೀಪೆಯ್ಡ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ ಈ ಟೆಲಿಕಾಂ ಕಂಪನಿ

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

1. express.co.uk ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, Trustwave ನ ಸೈಬರ್ ಸಿಕ್ಯೋರಿಟಿ ತಜ್ಞರು ಹೇಳುವ ಪ್ರಕಾರ, Hotmail, Gmail, Outlook  ಗಳಂತಹ ಮೇಲಿಂಗ್ ಪ್ಲಾಟ್ ಫಾರ್ಮ್ ಗಳಿಂದ ಬಳಕೆದಾರರಿಗೆ ವಂಚನೆಯ ಮೇಲ್ ಗಳು ಬರುತ್ತಿದ್ದು, ನಿಮ್ಮ ಫೇಸ್ ಬುಕ್ ಖಾತೆ ಡಿಲೀಟ್ ಆಗಲಿದೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಲಿಂಕ್ ವೊಂದನ್ನು ಕೂಡ ಶೇರ್ ಮಾಡಲಾಗುತ್ತಿದೆ. ಈ ಲಿಂಕ್ ಮೇಲೆ ಕ್ಲಿಕ್ಕಿಸಿ ನೀವು ನಿಮ್ಮ ಖಾತೆಯನ್ನ ಸುರಕ್ಷಿತಗೊಳಿಸಬಹುದು ಎಂದು ಹೇಳಲಾಗುತ್ತಿದೆ.

2 /5

2. ಫೇಕ್ ಮೇಲ್ ನಲ್ಲೇನಿದೆ - ವಂಚಕರು ಜನರಿಗೆ ಕಳುಹಿಸುತ್ತಿರುವ ಈ ಮೇಲ್ ಫೇಸ್ ಬುಕ್ ಸಪೋರ್ಟ್ ಟೀಮ್' ಹೆಸರಿನಿಂದ ಬರುತ್ತಿದೆ. ಈ ಮೇಲ್‌ನಲ್ಲಿ, 'ನಿಮ್ಮ ಪುಟವನ್ನು ಅಳಿಸಿ ಹಾಕಲಾಗುತ್ತಿದೆ. ಏಕೆಂದರೆ ನಮ್ಮ ವೇದಿಕೆಯ ಮಾನದಂಡಗಳನ್ನು ಉಲ್ಲಂಘಿಸಲಾಗಿದೆ. ಮುಂದಿನ 48 ಗಂಟೆಗಳಲ್ಲಿ, ನಿಮ್ಮಿಂದ ಯಾವುದೇ ಪ್ರತಿಕ್ರಿಯೆಯನ್ನು ಬರದಿದ್ದರೆ, ನಿಮ್ಮ ಫೇಸ್ ಬುಕ್ ಪುಟ ಸ್ವಯಂಚಾಲಿತವಾಗಿ ಡಿಲೀಟ್ ಆಗಲಿದೆ. ಈ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಲು ಕೆಳಗೆ ಕೊಟ್ಟಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ' ಎಂದು ಬರೆದಿರುತ್ತದೆ.

3 /5

3. ಫೇಸ್ ಬುಕ್ ವೈಯಕ್ತಿಕ ಮಾಹಿತಿಯನ್ನು ಕದಿಯಲಾಗುತ್ತಿದೆ: ಮೇಲ್ ನಲ್ಲಿ ನೀಡಲಾಗಿರುವ 'ಅಪೀಲ್' ಲಿಂಕ್ ಅನ್ನು ಕ್ಲಿಕ್ಕಿಸುವ ಬಳಕೆದಾರರ ಮುಂದೆ ಫೇಸ್ ಬುಕ್ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಫೇಸ್ ಬುಕ್ ಅಧಿಕಾರಿ ಎಂದು ಹೇಳಿಕೊಳ್ಳುವ ವ್ಯಕ್ತಿ ಚಾಟ್ ನಡೆಸುವ ಮೂಲಕ ಬಳಕೆದಾರರ ಹೆಸರು, ಇ-ಮೇಲ್ ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಕೆಲವೊಂದು ಸಂದರ್ಭಗಳಲ್ಲಿ ಟೂ ಫ್ಯಾಕ್ಟರ್ ಅಥೆಂಟಿಕೆಶನ್ ಕೋಡ್ ಕೂಡ ತಿಳಿದುಕೊಳ್ಳುತ್ತಾನೆ ಎನ್ನಲಾಗಿದೆ. ಈ ರೀತಿ ಹ್ಯಾಕರ್ ನಿಮ್ಮ ಬಳಿಯಿಂದ ನಿಮ್ಮ ಎಲ್ಲಾ ವೈಯಕ್ತಿಕ ವಿವರಗಳನ್ನು ಪಡೆಯುತ್ತಾನೆ.

4 /5

ಸ್ಕ್ಯೀಮ್ ಪರಿಣಾಮ ಏನು?: ನಿಮ್ಮ ವೈಯಕ್ತಿಕ ವಿವರಗಳನ್ನು ನೀಡುವ ಮೂಲಕ ನೀವು ಕೇವಲ ನಿಮ್ಮ ಫೇಸ್ ಬುಕ್ ಖಾತೆಯ ವಿವರ ಹ್ಯಾಕರ್ ಕೈ ಸೇರುತ್ತದೆ. ಇದರ ಜೊತೆಗೆ ಆತ ನಿಮ್ಮ ಪಾಸ್ವರ್ಡ್ ಇತ್ಯಾದಿ ಮಾಹಿತಿಯನ್ನು ಅನ್ನು ಮರುಬಳಕೆ ಮಾಡಿ ನಿಮ್ಮ ಬ್ಯಾಂಕ್ ಖಾತೆಯವರೆಗೆ ತಲುಪುತ್ತಾನೆ ಮತ್ತು ಅದು ನಿಮಗೆ ಮತ್ತಷ್ಟು ಹಾನಿಯನ್ನು ತಲುಪಿಸಲಿದೆ.

5 /5

5. ಈ ರೀತಿ ನಿಮ್ಮ ಖಾತೆಯನ್ನು ರಕ್ಷಿಸಿಕೊಳ್ಳಿ: ಈ ಸ್ಕ್ಯಾಮ್ ವರದಿಯಾಗುತ್ತಲೇ, ಅದಕ್ಕೆ ಸಂಬಂಧಿಸಿದ ನಕಲಿ ಫೇಸ್ ಬುಕ್ ಪುಟಗಳನ್ನು ತೆಗೆದು ಹಾಕಲಾಗಿದೆ ಆದರೆ, ಅಪಾಯ ಇನ್ನು ಸಂಪೂರ್ಣವಾಗಿ ತಪ್ಪಿಲ್ಲ. ಈ ರೀತಿಯ ಮೇಲ್ ಗಳನ್ನು ಗಂಭೀರವಾಗಿ ಪರಿಗಣಿಸದೆ ಇರುವುದು, ಈ ರೀತಿಯ ಸ್ಕ್ಯಾಮ್ ಗಳಿಂದ ತಪ್ಪಿಸಿಕೊಳ್ಳುವ ಏಕಮೇವ ಮಾರ್ಗವಾಗಿದೆ. ಅಂದರೆ, ಈ ರೀತಿಯ ಮೇಲ್ ಗಳಿಗೆ ಪ್ರತಿಕ್ರಿಯಿಸಬೇಡಿ ಹಾಗೂ ನಿಮಗೆ ಗೊತ್ತಿರದೇ ಇರುವ ಲಿಂಕ್ ಅನ್ನು ಕ್ಲಿಕ್ಕಿಸಬೇಡಿ. ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಸ್ಕ್ಯಾಮ್ ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಹಾಗೂ ಅವುಗಳಿಂದ ಪಾರಾಗಲು ಎಚ್ಚರದಿಂದ ಇರುವುದು ತುಂಬಾ ಮುಖ್ಯವಾಗಿದೆ.