Honda Dhamaka Offer: ದೇಶಾದ್ಯಂತ ತನ್ನ ACTIVA ಬ್ರಾಂಡ್ ಸ್ಕೂಟರ್ ನ 20 ಪೂರ್ಣಗೊಂಡ ಹಿನ್ನೆಲೆ ಹೊಂಡಾ ಮೋಟರ್ ಸೈಕಲ್ ನ Activa 6G ಆವೃತ್ತಿಯ Special Edition ಬಿಡುಗಡೆ ಮಾಡಿದೆ. ಕಂಪನಿ ಈ ಸ್ಕೂಟರ್ ಮೇಲೆ ವಿಶೇಷ ಕೊಡುಗೆಯನ್ನು ಘೋಷಿಸಿದೆ.
ನವದೆಹಲಿ: Honda Dhamaka Offer - ದೇಶಾದ್ಯಂತ ತನ್ನ ACTIVA ಬ್ರಾಂಡ್ ಸ್ಕೂಟರ್ ನ 20 ಪೂರ್ಣ ಗೊಂಡ ಹಿನ್ನೆಲೆ ಹೊಂಡಾ ಮೋಟರ್ ಸೈಕಲ್ ನ Activa 6G ಆವೃತ್ತಿಯ Special Edition ಬಿಡುಗಡೆ ಮಾಡಿದೆ. ಕಂಪನಿ ಈ ಸ್ಕೂಟರ್ ಮೇಲೆ ವಿಶೇಷ ಕೊಡುಗೆಯನ್ನು ಘೋಷಿಸಿದೆ.
ಇದನ್ನು ಓದಿ- Royal Enfield Bullet 500 custom - Bullet 500ಗೆ ಹೊಸ ವಿನ್ಯಾಸ ನೀಡಿದ Kromworks
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಕಂಪನಿ Honda Activa 6G ಸ್ಕೂಟರ್ ಖರೀದಿಗಾಗಿ ಶೇ.100 ರಷ್ಟು ಫೈನಾನ್ಸ್ ಸೌಕರ್ಯ ನೀಡುತ್ತಿದೆ. ಇದರ ಜೊತೆಗೆ ಕಂಪನಿ ರೂ.5000 ವರೆಗೆ ಕ್ಯಾಶ್ ಬ್ಯಾಕ್ ಕೂಡ ನೀಡುತ್ತಿದೆ. ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕ EMI ಆಫರ್ ಪಡೆದು ಹಣ ಪಾವತಿಸುವವರಿಗೆ ಕಂಪನಿ ಈ ಕೊಡುಗೆ ನೀಡುತ್ತಿದೆ. ಈ ವಿಶೇಷ ಎಡಿಶನ್ ನ ಬೆಲೆ ಕುರಿತು ಹೇಳುವುದಾದರೆ, ಈ ಸ್ಕೂಟರ್ STD ಹಾಗೂ DLX ಎಂಬ ಎರಡು ವೇರಿಯಂಟ್ ಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇವೆರಡೂ ಸ್ಕೂಟರ್ಗಳ ಬೆಲೆ ಕ್ರಮವಾಗಿ 66,799 ರೂ. ಹಾಗೂ 68,544 ರೂ. (ದೆಹಲಿ ಎಕ್ಸ್ ಷೋರೂಮ್ ಬೆಲೆ) ನಿಗದಿಪಡಿಸಲಾಗಿದೆ.
ದೇಶಾದ್ಯಂತ ಸುಮಾರು 2.5 ಕೋಟಿ ಗ್ರಾಹಕರನ್ನು ತಲುಪಿದ ಹಾಗೂ 20 ವರ್ಷಗಳ ಸುದೀರ್ಘ ಪ್ರಯಾಣ ಬೆಳೆಸಿದ ಹಿನ್ನೆಲೆ ಕಂಪನಿ ಆಕ್ಟಿವಾ 6 ಜಿ ಸ್ಕೂಟರ್ 20 ವರ್ಷಾಚರಣೆಯ ಸಂದರ್ಭದಲ್ಲಿ ಹೊಸ ಆವೃತ್ತಿ ಬಿಡುಗಡೆಗೊಳಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಕಂಪನಿಯ ಪ್ರಧಾನ ನಿರ್ದೇಶಕ, ಅಧ್ಯಕ್ಷ ಹಾಗೂ ಸಿಇಓ ಆತ್ಸುಷಿ ಒಗಾತಾ, ಈ ಕಥೆ (ACTIVA) 20 ವರ್ಷಗಳ ಹಿಂದೆ ಆರಂಭಗೊಂಡಿದೆ ಎಂದಿದ್ದಾರೆ.
ಭಾರತದಲ್ಲಿ ಕನಸಿನ ಸಾಮರ್ಥ್ಯವನ್ನು ಅರಿತು ಕಂಪನಿ ತನ್ನ ಮೊಟ್ಟ ಮೊದಲ ಮಾಡೆಲ್ ಹೋಂಡಾ ಆಕ್ಟಿವಾ ಬಿಡುಗಡೆ ಮಾಡಿದಾಗಿನಿಂದ ಇದುವರೆಗೆ ಹೊಸತಲೆಮಾರಿನ ಗ್ರಾಹಕರಿಗೆ ಸಮಯಕ್ಕೂ ಮುನ್ನವೇ ಜಾಗತಿಕ ತಂತ್ರಜ್ಞಾನವನ್ನು ನೀಡುತ್ತದೆ ಬಂದಿದೆ ಎಂದು ಒಗಾತಾ ಹೇಳಿದ್ದಾರೆ.
ಇತ್ತೀಚಗಷ್ಟೇ ಹೊಂಡಾ ತನ್ನ Activa 125 ನ BS-IV ಆವೃತ್ತಿಯ ಬೆಲೆಯನ್ನು ರೂ.955 ಗಳಷ್ಟು ಹೆಚ್ಚಿಸಿದೆ. BSVI Honda Unicorn ಬೈಕ್ ಹಾಗೂ BSVI Dio ಸ್ಕೂಟರ್ ಬೆಲೆಯನ್ನು ಸಹ ಕಂಪನಿ ಪರಿಷ್ಕರಿಸಿದೆ. ಇದಕ್ಕೂ ಮೊದಲು ಲಾಕ್ ಡೌನ್ ಅವಧಿಯಲ್ಲಿ ಕಂಪನಿ ತನ್ನ Activa ಸ್ಕೂಟರ್ ಬೆಲೆಯನ್ನು ಹೆಚ್ಚಿಸಿತ್ತು.
Honda Shine ಮೇಲೆ ಕಂಪನಿ 2499 ರೂ.ವರೆಗೆ ಡೌನ್ ಪೇಮೆಂಟ್ ಸೌಲಭ್ಯ ನೀಡುತ್ತಿದೆ. ಇದಕ್ಕಾಗಿ ಬಡ್ಡಿದರವನ್ನು ಶೇ.6.5ರಷ್ಟು ನಿಗದಿಪಡಿಸಿದೆ. Activa ಹೊರತುಪಡಿಸಿ ಕಂಪನಿ ಇದೆ ಕೊಡುಗೆಯನ್ನು ತನ್ನ ಅತ್ಯಂತ ಹೆಚ್ಚು ಮಾರಾಟವಾಗುವ ಬೈಕ್ ಆಗಿರುವ Honda Shine 125cc ಮೇಲೂ ನೀಡುತ್ತಿದೆ. ಹೊಂಡಾ ಶೈನ್ ಆರಂಭಿಕ ಬೆಲೆ ರೂ.70,478 ಆಗಿದೆ.