ಕಂಚಿನಿಂದ ಮಾಡಿರುವ ಈ ರಾಷ್ಟ್ರೀಯ ಲಾಂಭನವನ್ನು ಸಂಸತ್ ಭವನದ ಮೇಲೆ ಸ್ಥಾಪಿಸುವ ಪ್ರಕ್ರಿಯೆಯು 8 ವಿವಿಧ ಹಂತಗಳನ್ನು ಒಳಗೊಂಡಿತ್ತು.
ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನೂತನ ಸಂಸತ್ ಭವನದ ಮೇಲೆ ಸ್ಥಾಪಿಸಲಾಗಿರುವ 6.5 ಮೀಟರ್ ಎತ್ತರದ ರಾಷ್ಟ್ರ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಲೋಕಾರ್ಪಣೆಗೊಳಿಸಿದರು. ಕಂಚಿನದಲ್ಲಿ ನಿರ್ಮಿಸಲಾಗಿರುವ 4 ದಿಕ್ಕುಗಳನ್ನು ನೋಡುತ್ತಿರುವ ಸಿಂಹಗಳ ಮುಖಗಳಿರುವ ‘ರಾಷ್ಟ್ರ ಲಾಂಛನವನ್ನು’ ಪ್ರಧಾನಿ ಮೋದಿ ಅನಾವರಣಗೊಳಿಸಿದ್ದಾರೆ.
Prime Minister Narendra Modi also interacted with the workers involved in the work of the new Parliament, as he unveiled the bronze National Emblem cast on the roof of the New Parliament Building pic.twitter.com/SIi9SsKRAj
— ANI (@ANI) July 11, 2022
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ನೂತನ ಸಂಸತ್ ಭವನದ ಮೇಲೆ ಸ್ಥಾಪಿಸಲಾಗಿರುವ 6.5 ಮೀಟರ್ ಎತ್ತರದ ಕಂಚಿನ ರಾಷ್ಟ್ರ ಲಾಂಛನವು ಬರೋಬ್ಬರಿ 9,500 ಕೆಜಿ ತೂಕವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನಿ ಶ್ರೀ @narendramodi ಅವರು ನೂತನ ಸಂಸತ್ ಭವನದ ರಾಷ್ಟ್ರ ಲಾಂಛನವನ್ನು ಲೋಕಾರ್ಪಣೆ ಮಾಡಿದರು. pic.twitter.com/z7wBtHCw6T — BJP Karnataka (@BJP4Karnataka) July 11, 2022
ನೂತನ ಸಂಸತ್ ಕಟ್ಟಡದ ಮಧ್ಯದ ಪ್ರವೇಶ ಹಜಾರದ ಮೇಲ್ಭಾಗದಲ್ಲಿ ಈ ಬೃಹತ್ ರಾಷ್ಟ್ರೀಯ ಲಾಂಭವನ್ನು ಸ್ಥಾಪಿಸಲಾಗಿದೆ. ಇದಕ್ಕೆ ಆಧಾರವಾಗಿ ಸ್ಟೀಲ್‌ನಲ್ಲಿ ರಚನೆಯನ್ನು ನಿರ್ಮಿಸಲಾಗಿದೆ.
ಕಂಚಿನಿಂದ ಮಾಡಿರುವ ಈ ರಾಷ್ಟ್ರೀಯ ಲಾಂಭನವನ್ನು ಸಂಸತ್ ಭವನದ ಮೇಲೆ ಸ್ಥಾಪಿಸುವ ಪ್ರಕ್ರಿಯೆಯು 8 ವಿವಿಧ ಹಂತಗಳನ್ನು ಒಳಗೊಂಡಿತ್ತು. ಮೊದಲಿಗೆ ಮಣ್ಣಿನಲ್ಲಿ ಮಾದರಿ ರೂಪಿಸಲಾಗಿತ್ತು. ಬಳಿಕ ಕಂಪ್ಯೂಟರ್ ಗ್ರಾಫಿಕ್ಸ್ ಹಾಗೂ ಕಂಚಿನಲ್ಲಿ ಅದರ ಅಚ್ಚು, ನಯಗೊಳಿಸುವ ಹಂತಗಳು ಇದರಲ್ಲಿ ಸೇರಿವೆ.
ನೂತನ ಸಂಸತ್ ಭವನಕ್ಕೆ ನಿರ್ಮಿಸಲಾಗಿರುವ ರಾಷ್ಟ್ರೀಯ ಲಾಂಛನವನ್ನು ಲೋಕಾರ್ಪಣೆಗೊಳಿಸುವ ಮೊದಲು ಪ್ರಧಾನಿ ಮೋದಿಯವರು ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಈ ವೇಳೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಗೂ ಕೇಂದ್ರದ ಸಚಿವರು ಪ್ರಧಾನಿಗೆ ಸಾಥ್ ನೀಡಿದರು.
ಹೊಸ ಸಂಸತ್ ಭವನದ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ನೌಕರರ ಜೊತೆಗೆ ಪ್ರಧಾನಿ ಮೋದಿಯವರು ಮಾತುಕತೆ ನಡೆಸಿದರು. Prime Minister Narendra Modi also interacted with the workers involved in the work of the new Parliament, as he unveiled the bronze National Emblem cast on the roof of the New Parliament Building pic.twitter.com/SIi9SsKRAj — ANI (@ANI) July 11, 2022