ಸರಳತೆಯ ಸರದಾರ.. ಭಾರತದ ಅತ್ಯಂತ ಗೌರವಯುತ ಉದ್ಯಮಿ ರತನ್‌ ಟಾಟಾ ಬಿಟ್ಟು ಹೋದ ಆಸ್ತಿ ಎಷ್ಟು ಗೊತ್ತಾ..?

Ratan tata networth: ಗೌರವಾನ್ವಿತ ಕೈಗಾರಿಕೋದ್ಯಮಿ ಮತ್ತು ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ರತನ್ ನೇವಲ್ ಟಾಟಾ ಅವರು ಗುರುವಾರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಹಸು ನೀಗಿದ್ದಾರೆ. ಇಂಡಸ್ಟ್ರಿ ಸಾಮ್ರಾಜ್ಯವನ್ನು ಆಳಿದ್ದ ಸರದಾರ ತಮ್ಮ 86 ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದಾರೆ. 
 

1 /7

Ratan tata networth: ಗೌರವಾನ್ವಿತ ಕೈಗಾರಿಕೋದ್ಯಮಿ ಮತ್ತು ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ರತನ್ ನೇವಲ್ ಟಾಟಾ ಅವರು ಗುರುವಾರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಹಸು ನೀಗಿದ್ದಾರೆ. ಇಂಡಸ್ಟ್ರಿ ಸಾಮ್ರಾಜ್ಯವನ್ನು ಆಳಿದ್ದ ಸರದಾರ ತಮ್ಮ 86 ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದಾರೆ.   

2 /7

ಸೋಮವಾರ ಆರೋಗ್ಯ ತಪಾಸಣೆಗಾಗಿ ಆಸ್ಪತ್ರಗೆ ಹೋಗಿದ್ದ ರತನ್‌ ಟಾಟಾ ಅವರನ್ನು ತೀವ್ರ ನಿಗಾ ಘಟಕಕ್ಕೆ ವರ್ಗಾಯಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ರತನ್‌ ಟಾಟಾ ಅವರು ಬುಧವಾರ ತಡ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.   

3 /7

ಸಮಾನ್ಯವಾದ ಆರೋಗ್ಯ ತಪಾಣೆಗೆಂದು ರತನ್‌ ಟಾಟಾ ಅವರು ಆಸ್ಪತ್ರೆಗೆ ದಾಕಲಾಗಿದ್ದರು, ಅವರ ಆರೋಗ್ಯದ ಸ್ಥಿತಿಯ ಕುರಿತು ಆತಂಕ ಪಡಬೇಕಾಗಿಲ್ಲ ಎಂದು ಅವರ ಆಪ್ತ ವಲಯಗಳು ಮಾಹಿತಿ ನೀಡಿದ್ದವಾದರೂ, ರತನ್‌ ಟಾಟಾ ಅವರು ಬುಧವಾರ ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ.   

4 /7

ರತನ್‌ ಟಾಟಾ ಅತೀ ಚಿಕ್ಕ ವಯಸ್ಸಿನಲ್ಲಿ ಇಂಡಸ್ಟ್ರಿ ಬ್ಯುಸಿನೆಸ್‌ಗೆ ಕಾಲಿಡುವ ಮೂಲಕ ಒಂದ ಸಾಮ್ರಾಜ್ಯವನ್ನೆ ನಿರ್ಮಿಸಿ ಬಿಟ್ಟಿದ್ದಾರೆ, ಹಲವು ವರ್ಷಗಳ ಈ ಪಯಣದಲ್ಲಿ ರತನ್‌ ಟಾಟಾ ಅವರು ಅಗಾದವಾದ ಸಂಪತ್ತನ್ನು ಸಂಪಾದಿಸಿ ಇಟ್ಟದ್ದಾರೆ.   

5 /7

ಭಾರತದ ಅತಿದೊಡ್ಡ ಸಂಘಟಿತ ಸಂಸ್ಥೆಗಳಲ್ಲಿ ಪ್ರಮುಖ ಬ್ಯೂಸಿನೆ್‌ಮ್ಯಾನ್‌ ಆಗಿದ್ದರು ಸಹ, ಬಿಲಿಯನೇರ್ ಬ್ರಾಕೆಟ್‌ನಲ್ಲಿರುವ ಸಮಕಾಲೀನರಿಗೆ ಹೋಲಿಸಿದರೆ ಟಾಟಾ ಅವರ ವೈಯಕ್ತಿಕ ಸಂಪತ್ತು ತುಲನಾತ್ಮಕವಾಗಿ ಸಾಧಾರಣವಾಗಿದೆ. 2022 ರ IIFL ವೆಲ್ತ್ ಹುರುನ್ ಇಂಡಿಯಾ ಶ್ರೀಮಂತ ಪಟ್ಟಿಯ ಪ್ರಕಾರ, ರತನ್ ಟಾಟಾ ಅವರ ನಿವ್ವಳ ಮೌಲ್ಯವು ಸುಮಾರು ₹ 3,800 ಕೋಟಿ ಎಂದು ಅಂದಾಜಿಸಲಾಗಿದೆ.  

6 /7

₹3,500 ಕೋಟಿಗಳ ನಿವ್ವಳ ಮೌಲ್ಯದೊಂದಿಗೆ ರತನ್‌ ಟಾಟಾ ಅವರು, 421ನೇ ಸ್ಥಾನದಲ್ಲಿದ್ದಾರೆ. ಎಷ್ಟೆ ಸಾಮ್ರಾಜ್ಯದ ಒಡೆಯನಾಗಿದ್ದರು ಸಹ ರತನ್‌ ಟಾಟಾ ಅವರು ಯಾಕೆ, ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ ಎನ್ನುವ ಅನುಮಾನ ನಿಮಗೂ ಇರಬಹುದು ಅದಕ್ಕೆ ಕಾರನ ಇದೆ.   

7 /7

ಟಾಟಾ ಸನ್ಸ್‌ನಲ್ಲಿ ಮಹತ್ವದ ಪಾಲನ್ನು ಹೊಂದಿರುವ ಟಾಟಾ ಟ್ರಸ್ಟ್‌ಗಳು ತಮ್ಮ ಗಳಿಕೆಯ 66% ರಷ್ಟು ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಗ್ರಾಮೀಣ ಅಭಿವೃದ್ಧಿ ಸೇರಿದಂತೆ ವಿವಿಧ ದತ್ತಿ ಕಾರ್ಯಗಳಿಗೆ ಕೊಡುಗೆ ನೀಡುತ್ತವೆ.