Salaar Vs Dunki Advance Booking Report: ಹೊಂಬಾಳೆ ಫಿಲ್ಮ್ ನಿರ್ಮಾಣದ ‘ಸಲಾರ್’ ಸಿನಿಮಾ ಜೊತೆಗೆ ಬಾಕ್ಸ್ ಆಫೀಸ್ನಲ್ಲಿ ರಾಜ್ ಕುಮಾರ್ ಹಿರಾನಿ ನಿರ್ದೇಶನದ ಡಂಕಿ ಸಿನಿಮಾವು ತೀವ್ರ ಪೈಪೋಟಿ ನೀಡುತ್ತಿದೆ. ಈ ಉಭಯ ಸಿನಿಮಾಗಳು 1,000 ಕೋಟಿ ರೂ. ಸಂಗ್ರಹಿಸುವ ಸಾಧ್ಯತೆ ಇದೆ.
Salaar Vs Dunki Advance Booking Report: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಮತ್ತು ಟಾಲಿವುಡ್ ಸ್ಟಾರ್ ಪ್ರಭಾಸ್ ಅವರ ಚಿತ್ರಗಳು ಬಾಕ್ಸಾ ಆಫೀಸ್ನಲ್ಲಿ ಮುಖಾಮುಖಿಯಾಗಿವೆ. ಉಭಯ ನಟರ ಚಿತ್ರಗಳು ಬಿಡುಗಡೆಗೂ ಮುನ್ನವೇ ಸಖತ್ ಸೌಂಡ್ ಮಾಡಿದ್ದವು. ಅದೇ ರೀತಿ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆಯುವ ಮೂಲಕ ಹೊಸ ದಾಖಲೆ ನಿರ್ಮಿಸುತ್ತಿವೆ. ಶಾರುಖ್ ಅಭಿನಯದ ಡುಂಕಿ ಗುರುವಾರ ಬಿಡುಗಡೆಯಾಗಿದ್ದರೆ, ಪ್ರಭಾಸ್ ಅಭಿನಯದ ಸಲಾರ್ ಶುಕ್ರವಾರ ರಿಲೀಸ್ ಆಗಲಿದೆ. ಆದರೆ ಮುಂಗಡ ಬುಕಿಂಗ್ನಲ್ಲಿ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್, ಶಾರುಖ್ ಚಿತ್ರವನ್ನು ಹಿಂದಿಕ್ಕಿದೆ. ಶುಕ್ರವಾರದ ಸಲಾರ್ ಓಪನಿಂಗ್ ಆಕರ್ಷಕವಾಗಿ ಕಾಣುತ್ತಿದೆ. ಏಕೆಂದರೆ ಇಲ್ಲಿಯವರೆಗೆ ತೆಲುಗು ಶೋಗಳಿಂದಲೇ ಸುಮಾರು 23.5 ಕೋಟಿ ರೂ. ಮೌಲ್ಯದ ಟಿಕೆಟ್ಗಳು ಮಾರಾಟವಾಗಿವೆ. ಈ ಚಿತ್ರ ಇನ್ನುಳಿದ 4 ಭಾಷೆಗಳಲ್ಲಿಯೂ ಬಿಡುಗಡೆಯಾಗುತ್ತಿದೆ. ಉಭಯ ಚಿತ್ರಗಳ ಮುಂಗಡ ಬುಕ್ಕಿಂಗ್ನ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ವರ್ಷದ 3ನೇ ಚಿತ್ರ ‘ಡಂಕಿ’ ಮತ್ತು ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ ನಟನೆಯ, ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್: ಪಾರ್ಟ್ 1- ಸೀಸ್ಫೈರ್’ ಸಿನಿಮಾಗಳ ನಡುವೆ ಟಿಕೆಟ್ ಬುಕ್ಕಿಂಗ್ ಫೈಟ್ ನಡೆಯುತ್ತಿದೆ. ಬುಧವಾರ ಡಂಕಿ ಸಿನಿಮಾದ ಟಿಕೆಟ್ ಬುಕ್ಕಿಂಗ್ ಹೆಚ್ಚಿತ್ತು. ಇದೀಗ ಡಂಕಿಯನ್ನು ಹಿಂದಿಕ್ಕಿರುವ ಸಲಾರ್ ಮುಂಗಡ ಟಿಕೆಟ್ ಬುಕ್ಕಿಂಗ್ನಲ್ಲಿ ನಂ.1 ಆಗಿ ಹೊರಹೊಮ್ಮಿದೆ.
ರಾಜ್ ಕುಮಾರ್ ಹಿರಾನಿ ನಿರ್ದೇಶನದ ಡಂಕಿ ಗುರುವಾರ ಥಿಯೇಟರ್ಗಳಲ್ಲಿ ಬಿಡುಗಡೆಯಾಗಿದ್ದು, ಸುಮಾರು 15.41 ಕೋಟಿ ರೂ. ಮೌಲ್ಯದ ಟಿಕೆಟ್ಗಳನ್ನು ಮುಂಗಡವಾಗಿ ಕಾಯ್ದಿರಿಸಲಾಗಿದೆ. ವರದಿಯ ಪ್ರಕಾರ 15,014 ಶೋಗಳಿಂದ ಡಂಕಿಯ 5.6 ಲಕ್ಷ ಟಿಕೆಟ್ಗಳು ಆರಂಭಿಕ ದಿನಕ್ಕೆ ಮಾರಾಟವಾಗಿವೆ. ಆದರೆ ಶುಕ್ರವಾರ ಥಿಯೇಟರ್ಗಳಲ್ಲಿ ಬಿಡುಗಡೆಯಾಗಲಿರುವ ಪ್ರಭಾಸ್ ನಟನೆಯ ಸಲಾರ್ ಈಗಾಗಲೇ 29.35 ಕೋಟಿ ರೂ. ಮೌಲ್ಯದ ಟಿಕೆಟ್ಗಳು ಮಾರಾಟವಾಗಿವೆ ಎಂದು ವರದಿಯಾಗಿದೆ.
ಡಂಕಿ ಹಿಂದಿಯಲ್ಲಿ ಮಾತ್ರ ಲಭ್ಯವಿದ್ದು, ಸಲಾರ್ ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗುತ್ತಿದೆ. ವರದಿಯ ಪ್ರಕಾರ, ಶುಕ್ರವಾರ ಬಿಡುಗಡೆಯಾಗಲಿರುವ ಸಲಾರ್ ಭಾರತದಲ್ಲಿ 10,434 ಶೋಗಳಿಂದ 14 ಲಕ್ಷಕ್ಕೂ ಹೆಚ್ಚು ಟಿಕೆಟ್ಗಳು ಮಾರಾಟವಾಗಿವೆ. ತೆಲುಗು ಅವತರಣಿಕೆಯೇ ಇಲ್ಲಿಯವರೆಗೆ 23.5 ಕೋಟಿ ರೂ. ಮುಂಗಡ ಬುಕ್ಕಿಂಗ್ ಕಲೆಕ್ಷನ್ ದಾಖಲಿಸಿದೆ. ಹಿಂದಿಯಿಂದ 2.7 ಕೋಟಿ ರೂ., ಮಲಯಾಳಂನಿಂದ 1.6 ಕೋಟಿ ರೂ., ತಮಿಳಿನಿಂದ 1 ಕೋಟಿ ರೂ. ಹಾಗೂ ಕನ್ನಡ ಶೋಗಳಿಂದ 25 ಲಕ್ಷ ರೂ. ಮೊತ್ತದ ಟಿಕೆಟ್ಗಳನ್ನು ಮುಂಗಡವಾಗಿ ಕಾಯ್ದಿರಿಸಲಾಗಿದೆ.
ದಕ್ಷಿಣ ಭಾರತದ ಫಿಲ್ಮ್ ಬಾಕ್ಸಾಫೀಸ್ ಟ್ರ್ಯಾಕರ್ ಹಾಗೂ ಖ್ಯಾತ ಸಿನಿಮಾ ಕ್ರಿಟಿಕ್ ಮನೋಬಾಲ ವಿಜಯಬಾಲನ್ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಶೇಷ ಮಾಹಿತಿ ಹಂಚಿಕೊಂಡಿದ್ದಾರೆ. ಒಂದೇ ದಿನದ ಅಂತದಲ್ಲಿ ಬಿಡುಗಡೆಯಾಗುತ್ತಿರುವ 2 ದೊಡ್ಡ ಚಿತ್ರಗಳಿಗೆ ಸಿಗುತ್ತಿರುವ ಶೋಗಳ ಬಗ್ಗೆ ಅವರು ಪ್ರಶ್ನಿಸಿದ್ದಾರೆ. ಶಾರುಖ್ ನಟನೆಯ ಡಂಕಿಗೆ ಸಿಕ್ಕಷ್ಟು ಶೋಗಳು PVR INOXನಲ್ಲಿ ಪ್ರಭಾಸ್ ನಟನೆಯ ಸಲಾರ್ಗೆ ಸಿಕ್ಕಿಲ್ಲ. ಇದು ಅನ್ಯಾಯವಾಗಿದ್ದು, #BoycottPVRInox ಎಂದು ಅವರು Multiplexಗಳ ವಿರುದ್ಧ ಕಿಡಿಕಾರಿದ್ದಾರೆ.
ಹೊಂಬಾಳೆ ಫಿಲ್ಮ್ ನಿರ್ಮಾಣದ ‘ಸಲಾರ್’ ಸಿನಿಮಾ ಜೊತೆಗೆ ಬಾಕ್ಸ್ ಆಫೀಸ್ನಲ್ಲಿ ರಾಜ್ ಕುಮಾರ್ ಹಿರಾನಿ ನಿರ್ದೇಶನದ ಡಂಕಿ ಸಿನಿಮಾವು ತೀವ್ರ ಪೈಪೋಟಿ ನೀಡತ್ತಿದೆ. ಈ ಉಭಯ ಸಿನಿಮಾಗಳು 1,000 ಕೋಟಿ ರೂ. ಸಂಗ್ರಹಿಸುವ ಸಾಧ್ಯತೆ ಇದೆ. ಆದರೆ PVR ಮತ್ತು Inox ಡಂಕಿಗೆ ಹೆಚ್ಚಿನ ಶೋಗಳನ್ನು ನೀಡಿದ್ದು, ಸಲಾರ್ಗೆ ತುಸು ಹಿನ್ನೆಡೆಯಾದಂತಿದೆ.