Photo Gallery: ಮಂತ್ರಾಲಯದಲ್ಲಿ ರಾಯರ 351ನೇ ಆರಾಧನಾ ಸಂಭ್ರಮ

ಪುಣ್ಯಕ್ಷೇತ್ರ ಮಂತ್ರಾಲಯದ ಶ್ರೀ ರಾಯರ 351ನೇ ಆರಾಧನಾ ‌ಮಹೋತ್ಸವ ಹಿನ್ನೆಲೆ ಇಡೀ ಮಂತ್ರಾಲಯ ಚಿತ್ರಣವೇ ಬದಲಾಗಿದೆ.

ರಾಯಚೂರು: ಪುಣ್ಯಕ್ಷೇತ್ರ ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ರಾಯರ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಶ್ರೀಮಠಕ್ಕೆ ಭೇಟಿ ನೀಡುತ್ತಿದ್ದಾರೆ. ಶ್ರೀ ರಾಘವೇಂದ್ರ ಸ್ವಾಮೀಜಿಗಳ ದರ್ಶನಕ್ಕಾಗಿ ಸಾವಿರಾರು ಭಕ್ತರು ಮಂತ್ರಾಲಯಕ್ಕೆ ಬರುತ್ತಿದ್ದಾರೆ. ಶ್ರೀಮಠಕ್ಕೆ ಬರುವ ಭಕ್ತರ ಯಾವುದೇ ರೀತಿ ತೊಂದರೆಯಾಗಬಾರದು ಎಂದು ಆಡಳಿತ ಮಂಡಳಿ ಸಕಲ ವ್ಯವಸ್ಥೆ ಮಾಡಿದೆ. ರಾಯರ 351ನೇ ಆರಾಧನಾ ‌ಮಹೋತ್ಸವ ಹಿನ್ನೆಲೆ ಇಡೀ ಮಂತ್ರಾಲಯ ಚಿತ್ರಣವೇ ಬದಲಾಗಿದೆ. ಈ ಕುರಿತ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಪುಣ್ಯಕ್ಷೇತ್ರ ಮಂತ್ರಾಲಯದಲ್ಲಿ ರಾಯರ 351ನೇ ಆರಾಧನಾ ಸಂಭ್ರಮ ಮನೆಮಾಡಿದೆ. ಶ್ರೀಮಠದಲ್ಲಿ ಇಂದು ರಾಯರ ಮಧ್ಯಾರಾಧನೆ ನಡೆಯಲಿದೆ. ಮಧ್ಯಾರಾಧನೆ ನಿಮಿತ್ಯ ಶ್ರೀಮಠದಲ್ಲಿ ವಿಶೇಷ ಪೂಜೆ ಆರಂಭವಾಗಲಿದೆ. ನಿರ್ಮಾಲ್ಯ ವಿಸರ್ಜನೆ, ಉತ್ಸವ, ರಾಯರ ಪಾದಪೂಜೆ ನಡೆಯಲಿದೆ.

2 /5

ರಾಯರ 351ನೇ ಆರಾಧನಾ ಸಂಭ್ರಮ ಹಿನ್ನೆಲೆ ತಿರುಪತಿಯಿಂದ ಮಂತ್ರಾಲಯಕ್ಕೆ ಶೇಷವಸ್ತ್ರ ಆಗಮಿಸಲಿದೆ. ಶ್ರೀಮಠ ಮುಖ್ಯ ದ್ವಾರದಿಂದ ವಾದ್ಯ ಮೆರವಣಿಗೆಯೊಂದಿಗೆ ಶೇಷವಸ್ತ್ರಕ್ಕೆ ಸ್ವಾಗತ ಕೊರಲಾಗುವುದು.  ಪ್ರಾಂಗಣದಲ್ಲಿ ಶೇಷವಸ್ತ್ರದೊಂದಿಗೆ ಪ್ರದಕ್ಷಿಣೆ ನಡೆಯಲಿದೆ. ಆ ಬಳಿಕ ರಾಯರ ಮೂಲ ಬೃಂದಾವನಕ್ಕೆ ಶೇಷವಸ್ತ್ರ ಸಮರ್ಪಣೆಯಾಗಲಿದೆ.

3 /5

ಮಂಗಳಾರತಿ ನಂತರ ಉಯ್ಯಾಲೆ ವೇದಿಕೆ ಬಳಿ ಟಿಟಿಡಿ ಸದಸ್ಯರಿಗೆ ಶ್ರೀಮಠದಿಂದ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಮೂಲ ಬೃಂದಾವನಕ್ಕೆ ಮಹಾಪಂಚಾಮೃತ ಅಭಿಷೇಕ, ಪ್ರಾತಃ ಕಾಲದಲ್ಲಿ ಸುವರ್ಣ ರಥೋತ್ಸವ ‌ನಡೆಯಲಿದೆ. ಮೂಲರಾಮ ದೇವರ ಪೂಜೆ ಬಳಿಕ ಶ್ರೀಮಠದಿಂದ ಪ್ರಸಾದ ವಿತರಣೆ ನಡೆಯಲಿದೆ.

4 /5

ಸಂಜೆ ಯೋಗಿಂದ್ರ ಮಂಟಪದಲ್ಲಿ ಅನುಗ್ರಹ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯಲಿದೆ. ಶ್ರೀಮಠದ ಪ್ರಾಂಗಣದಲ್ಲಿ ವಿಶೇಷ ಉತ್ಸವಗಳು, ನವರತ್ನ ರಥೋತ್ಸವ ಜೊತೆಗೆ ಪಲ್ಲಕ್ಕಿ ವಾಹನ ಉತ್ಸವ ಸಹ ನಡೆಯಲಿದೆ.

5 /5

ರಾಯರ 351ನೇ ಆರಾಧನಾ ಸಂಭ್ರಮ ಹಿನ್ನೆಲೆ ಇಂದು ಶ್ರೀಮಠಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡಲಿದ್ದಾರೆ. ಇಂದು ಮಂತ್ರಾಲಯಕ್ಕೆ ಲಕ್ಷಾಂತರ ಭಕ್ತಜನಸಾಗರ ಹರಿದು ಬರಲಿದೆ. ಹೀಗಾಗಿ ಶ್ರೀಮಠದಿಂದ ಭಕ್ತರಿಗಾಗಿ ಸಕಲ ವ್ಯವಸ್ಥೆ ಮಾಡಲಾಗಿದೆ.