ಸನ್ನಿ ಲಿಯೋನ್‌ಗೆ ಜೀವ ಬೆದರಿಕೆ..! ಭಯದಿಂದ ಚಾಕು ಹಿಡಿದುಕೊಂಡು ಮನೆಯಲ್ಲಿದ್ದ ಹಾಟ್‌ ಬೆಡಗಿ..

Sunny leone : ಸನ್ನಿ ಲಿಯೋನ್‌ಗೆ ಜೀವ ಬೆದರಿಕೆ ಹಿನ್ನಲೆ ರಕ್ಷಣೆಗಾಗಿ ಮನೆಯಲ್ಲಿ ಚಾಕು ಹಿಡಿಕೊಂಡು ತಿರುಗಾಡುತ್ತಿದ್ದಾಳೆ. ಈ ಕುರಿತು ಅರ್ಬಾಜ್ ಖಾನ್ ಅವರ ಕಾರ್ಯಕ್ರಮದಲ್ಲಿ ನಟಿ ಬಹಿರಂಗ ಪಡಿಸಿದ್ದಾಳೆ.. ಅಸಲಿಗೆ ಈ ಗ್ಲಾಮರ್‌ ದೇವತೆಗೆ ಬೆದರಿಕೆ ಹಾಕಿದವರು ಯಾರು..? ಅವತ್ತು ಏನಾಯ್ತು..? ಇಂಟ್ರಸ್ಟಿಂಗ್‌ ವಿಚಾರ ಇಲ್ಲಿದೆ..

1 /8

ಅಪರಿಚಿತ ವ್ಯಕ್ತಿ ಭಯದಿಂದಾಗಿ ದಿನವಿಡೀ ಮನೆಯಲ್ಲಿ ಚಾಕು ಹಿಡಿದುಕೊಂಡು ಓಡಾಡಬೇಕಾಯಿತು ಎಂದು ನಟಿ ಸನ್ನಿ ಲಿಯೋನ್‌ ಹೇಳಿಕೊಂಡಿದ್ದಾರೆ.. ಅಲ್ಲದೆ, ಆ ವ್ಯಕ್ತಿ ತನಗೆ ಮತ್ತು ತನ್ನ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ್ದ ಎಂದು ನೋವು ತೋಡಿಕೊಂಡಿದ್ದಾರೆ..   

2 /8

ಹೌದು.. ಸನ್ನಿ ಲಿಯೋನ್ ಯಾರಿಗೆ ಗೊತ್ತಿಲ್ಲ ಹೇಳಿ..? ವಯಸ್ಕ ಚಲನಚಿತ್ರೋದ್ಯಮದಿಂದ ಮುಖ್ಯವಾಹಿನಿಗೆ ಬಂದ ಸುಂದರಿ ಇದೀಗ ಭಾರತೀಯ ಸಿನಿರಂಗದಲ್ಲಿ ಸ್ಟಾರ್‌ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ತನ್ನ ಕಠಿಣ ಪರಿಶ್ರಮದ ಮೂಲಕ ಬಾಲಿವುಡ್‌ನಲ್ಲಿ ಸ್ಥಾನ ಪಡೆದಿದ್ದಾಳೆ.  

3 /8

ಸನ್ನಿ ಲಿಯೋನ್ ಒಂದು ಕಾಲದಲ್ಲಿ ತನ್ನ ಮನೆಯಲ್ಲಿಯೇ ತಾನು ಚಾಕು ಹಿಡಿದುಕೊಂಡು ಓಡಾಡಬೇಕಾಗಿತ್ತು ಅಂತ ಸ್ವತಃ ನಟಿಯೇ ಬಹಿರಂಗಪಡಿಸಿದ್ದಾರೆ. ಅರ್ಬಾಜ್ ಖಾನ್ ನಡೆಸಿಕೊಡುವ ಚಾಟ್ ಶೋಗೆ ಬಂದಿದ್ದ ಚೆಲುವೆ ಈ ಶಾಕಿಂಗ್‌ ವಿಚಾರ ಬಹಿರಂಗ ಪಡಿಸಿದ್ದಾರೆ.   

4 /8

ಅಲ್ಲದೆ, ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನಕ್ಕೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಅರ್ಬಾಜ್‌ ಶೋನಲ್ಲಿ ಹಂಚಿಕೊಂಡಿದ್ದಾರೆ.. ಈ ವೇಳೆ ನಟಿ.. ತುಂಬಾ ಹೆದರಿ ಚಾಕುವನ್ನು ಕೈಯಲ್ಲಿ ಹಿಡಿದುಕೊಂಡೇ ಮನೆಯೊಳಗೆ ಯಾವಾಗಲೂ ತಿರುಗಾಡುತ್ತಿದ್ದೆ ಎಂದು ಹೇಳಿದ್ದಾರೆ.  

5 /8

ಈ ಕಾರ್ಯಕ್ರಮದಲ್ಲಿ ಅರ್ಬಾಜ್ ಖಾನ್ ಸನ್ನಿ ಲಿಯೋನ್‌ಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದರು. ಆ ಪ್ರಶ್ನೆಗಳಿಗೆ ಉತ್ತರಿಸುತ್ತಾ, ನಟಿ ತನ್ನ ಜೀವನಕ್ಕೆ ಸಂಬಂಧಿಸಿದ ಅನೇಕ ರಹಸ್ಯಗಳನ್ನು ಬಹಿರಂಗಪಡಿಸಿದರು. ಅವರು ಎಂದಾದರೂ ಯಾವುದೇ ಟ್ರೋಲ್ ವಿರುದ್ಧ ದೂರು ದಾಖಲಿಸಿದ್ದಾರೆಯೇ ಎಂದು ಕೇಳಿದಾಗ. ಇದಕ್ಕೆ ಅವಳು ಹೌದು.. ಎನ್ನುತ್ತ ಇಡೀ ಕಥೆಯನ್ನು ಬಹಿರಂಗಪಡಿಸಿದಳು.  

6 /8

ಆತ ಒಬ್ಬ ಪರಿಚಿತ ವ್ಯಕ್ತಿ.. ಆದರೆ ಈಗ ಅವನಿಲ್ಲ.. ನಾನು ಅವನ ವಿರುದ್ಧ ಮುಂಬೈನ ಸೈಬರ್ ಪೊಲೀಸರಿಗೆ ದೂರು ದಾಖಲಿಸಿದೆ. ಆ ವ್ಯಕ್ತಿ ನನ್ನನ್ನು ಮಾನಸಿಕವಾಗಿ ತುಂಬಾ ಹಿಂಸಿಸಿದ್ದ.. ಅಲ್ಲದೆ, ನನ್ನ ಟೈಮ್‌ಲೈನ್‌ನಲ್ಲಿ ತುಂಬಾ ಕೆಟ್ಟ ಕಾಮೆಂಟ್‌ಗಳನ್ನು ಮಾಡಲು ಪ್ರಾರಂಭಿಸಿದ್ದ.. ಅಷ್ಟೇ ಅಲ್ಲ.. ನನ್ನ ಕುಟುಂಬ ಸದಸ್ಯರಿಗೆ ಬೆದರಿಕೆ ಹಾಕಿದ್ದ.   

7 /8

ಅವನ ಕೆಲವು ಸಹಚರರು ನನ್ನ ಮನೆಗೆ ಬಂದಿದ್ದರು.. ಆಗ ನನಗೆ ತುಂಬಾ ಭಯವಾಗಿತ್ತು.. ಆ ಸಮಯದಲ್ಲಿ ನನ್ನ ಪತಿ ಮನೆಯಲ್ಲಿಲ್ಲದ ಕಾರಣ, ನಾನು ಕೈಯಲ್ಲಿ ಚಾಕು ಹಿಡಿದುಕೊಂಡು ಬಾಗಿಲಿನ ಕಡೆಗೆ ನಡೆಯುತ್ತಿದ್ದೆ. ಅಂತಹ ಸಂದರ್ಭಗಳಲ್ಲಿ, ನಾನು ಆಗಾಗ್ಗೆ ದಿನವಿಡೀ ಕೈಯಲ್ಲಿ ಚಾಕು ಹಿಡಿದುಕೊಂಡು ತಿರುಗಾಡಬೇಕಾಗುತ್ತಿತ್ತು ಅಂತ ಹೇಳಿದ್ದಾರೆ ಸನ್ನಿ..  

8 /8

'ಕರಂಜಿತ್: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್' ನಲ್ಲಿ ತಮ್ಮ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಇದರ ಮೂಲಕ, ಜನರಿಗೆ ತಿಳಿದಿರದ ಅನೇಕ ರಹಸ್ಯಗಳು ಬಹಿರಂಗಗೊಂಡವು. ಸನ್ನಿ ಲಿಯೋನ್ ಪಂಜಾಬಿ ಸಿಖ್ ಕುಟುಂಬಕ್ಕೆ ಸೇರಿದವರು. ಕೇವಲ 11 ವರ್ಷದವಳಿದ್ದಾಗ, ಅವಳ ಇಡೀ ಕುಟುಂಬ ಅಮೆರಿಕಕ್ಕೆ ಸ್ಥಳಾಂತರಗೊಂಡಿತು.