Tea Side Effects: ಖಾಲಿ ಹೊಟ್ಟೆಯಲ್ಲಿ ಟೀ ಕುಡಿದರೆ ಗ್ಯಾಸ್, ಅಸಿಡಿಟಿ ಸೇರಿದಂತೆ ಅಜೀರ್ಣದ ಸಮಸ್ಯೆಗಳು ಎದುರಾಗುತ್ತವೆ. ಆದರೆ ಚಹಾ ಒಂದು ಚಟವಾಗಿ ಪರಿಣಮಿಸಿದರೆ ಅದನ್ನ ಬಿಡುವುದು ತುಂಬಾ ಕಷ್ಟ. ಇಂದು ನಾವು ನಿಮಗೆ ಚಹಾದ ಚಟವನ್ನು ಬಿಡುವುದು ಹೇಗೆ? ಎಂಬುದರ ಬಗ್ಗೆ ನಿಮಗೆ ಟಿಪ್ಸ್ ನೀಡಲಿದ್ದೇವೆ.
Side Effects of Tea: ಭಾರತದಲ್ಲಿ ನೀರಿನ ನಂತರ ಚಹಾವು 2ನೇ ಅತಿಹೆಚ್ಚು ಸೇವಿಸುವ ಪಾನೀಯವಾಗಿದೆ. ಭಾರತೀಯರಿಗೆ ಬೆಳಗ್ಗೆ ಎದ್ದ ತಕ್ಷಣ ಬೆಡ್ ಟೀ ಬೇಕು. ಚಹಾದಿಂದ ಆರಂಭವಾಗುವ ದಿನ ಅಂದರಿಂದಲೇ ಮುಕ್ತಾಯವಾಗುತ್ತದೆ. ಕೆಲವರಿಗೆ ಚಹಾ ಕುಡಿದರೆ ಹೊಸ ಉತ್ಸಾಹ ಮೂಡುತ್ತದೆ. ಆದರೆ ಟೀ ಕುಡಿಯುವುದರಿಂದ ಎಷ್ಟು ಲಾಭಗಳಿವೆಯೋ ಅಷ್ಟೇ ದುಷ್ಪರಿಣಾಮಗಳಿವೆ. ಚಹಾದಲ್ಲಿ ಹೆಚ್ಚಿನ ಪ್ರಮಾಣದ ಕೆಫೀನ್ ಇರುತ್ತದೆ, ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ಖಾಲಿ ಹೊಟ್ಟೆಯಲ್ಲಿ ಟೀ ಕುಡಿದರೆ ಅಜೀರ್ಣದ ಸಮಸ್ಯೆಗಳು ಎದುರಾಗುತ್ತವೆ. ಆದರೆ ಚಹಾ ಚಟವಾಗಿ ಪರಿಣಮಿಸಿದರೆ ಅದನ್ನ ಬಿಡುವುದು ತುಂಬಾ ಕಷ್ಟ. ಚಹಾದ ಚಟಾ ಬಿಡುವುದು ಹೇಗೆ ಅನ್ಣೋದರ ಮಾಹಿತಿ ಇಲ್ಲಿದೆ ನೋಡಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಖಾಲಿ ಹೊಟ್ಟೆಯಲ್ಲಿ ಟೀ ಕುಡಿದರೆ ಗ್ಯಾಸ್, ಅಸಿಡಿಟಿ ಸೇರಿದಂತೆ ಅಜೀರ್ಣದ ಸಮಸ್ಯೆಗಳು ಎದುರಾಗುತ್ತವೆ. ಆದರೆ ಚಹಾ ಒಂದು ಚಟವಾಗಿ ಪರಿಣಮಿಸಿದರೆ ಅದನ್ನ ಬಿಡುವುದು ತುಂಬಾ ಕಷ್ಟ. ಇಂದು ನಾವು ನಿಮಗೆ ಚಹಾದ ಚಟವನ್ನು ಬಿಡುವುದು ಹೇಗೆ? ಎಂಬುದರ ಬಗ್ಗೆ ನಿಮಗೆ ಟಿಪ್ಸ್ ನೀಡಲಿದ್ದೇವೆ.
ಚಹಾ ಚಟವಾಗಿ ಪರಿಣಮಿಸಿದರೆ ಅದನ್ನು ಬಿಡುವುದು ತುಂಬಾ ಕಷ್ಟ. ಚಹಾವನ್ನು ತುಂಬಾ ಇಷ್ಟಪಡುವವರಿಗೆ ತಲೆನೋವು ಬಂದಾಗ ಔಷಧದ ಬದಲಿಗೆ ಚಹಾ ಬೇಕು. ಆದರೆ ನೀವು ನಿಜವಾಗಿಯೂ ಚಹಾ ಬಿಡಲು ಬಯಸಿದರೆ, ಪ್ರತಿದಿನ ಸ್ವಲ್ಪ ಸ್ವಲ್ಪವೇ ಸೇವಿಸಿ. ಇದಲ್ಲದೇ ಅದರ ಬದಲು ಬೇರೆ ಏನನ್ನಾದರೂ ತಿನ್ನಿ ಅಥವಾ ಕುಡಿಯಿರಿ. ಇದು ಚಹಾವನ್ನು ತ್ವರಿತವಾಗಿ ಬಿಡಲು ನಿಮಗೆ ಸಹಾಯ ಮಾಡುತ್ತದೆ.
ಅನೇಕರು ಚಹಾ ಕುಡಿಯದಿದ್ದರೆ ಹುಚ್ಚರಾಗುತ್ತವೆ ಅನ್ನೋ ಭಯದಲ್ಲಿರುತ್ತಾರೆ. ಅಷ್ಟರ ಮಟ್ಟಿಗೆ ಅದು ಚಟವಾಗಿ ಪರಿಣಮಿಸಿರುತ್ತದೆ. ಆದರೆ ಕೆಲವು ಕಾರಣಗಳಿಂದ ಅವರು ಚಹಾವನ್ನು ತ್ಯಜಿಸಬೇಕಾಗುತ್ತದೆ, ಅದು ಅವರಿಗೆ ಬಹಳಷ್ಟು ತೊಂದರೆಗಳನ್ನು ಉಂಟುಮಾಡುತ್ತದೆ. ಆದರೆ ನೀವು ಅದನ್ನು ಬಿಡಲು ಬಯಸದಿದ್ದರೆ, ನೀವು ಗಿಡಮೂಲಿಕೆ ಚಹಾ ತೆಗೆದುಕೊಳ್ಳಬಹುದು. ಇದು ನಿಮಗೆ ಒಳ್ಳೆಯದು. ಆರೋಗ್ಯಕ್ಕೂ ಇದು ತುಂಬಾ ಪ್ರಯೋಜನಕಾರಿ. ಏಕೆಂದರೆ ಇದು ಹೆಚ್ಚಿನ ಪ್ರಮಾಣದ ಕೆಫೀನ್ ಅನ್ನು ಹೊಂದಿರುವುದಿಲ್ಲ.
ಚಹಾದ ಚಟವಿದ್ದವರಿಗೆ ಆಗಾಗ ಅದನ್ನ ಸೇವಿಸಬೇಕೆಂಬ ಭಾವನೆ ಮೂಡುತ್ತದೆ. ಚಹಾ ಕುಡಿಯುವವರ ಚಟ ಬಿಡಿಸುವುದು ಸ್ವಲ್ಪ ಕಷ್ಟ. ಇದಕ್ಕಾಗಿ ಚಹಾದ ಬದಲು ನೀವು ಹಣ್ಣಿನ ರಸ ಸೇವಿಸಬೇಕು. ಮಧ್ಯಾಹ್ನದ ಊಟದ ನಂತರ ಚಹಾ ಕುಡಿಯಲು ಅನೇಕರು ಇಷ್ಟಪಡುತ್ತಾರೆ. ಆದರೆ ಅದರಿಂದ ಉಂಟಾಗುವ ತೊಂದರೆಗಳಿಂದ ಚಹಾವನ್ನು ತ್ಯಜಿಸಬೇಕಾಗುತ್ತದೆ. ಇದಕ್ಕಾಗಿ ನೀವು ಆಹಾರ ಸೇವಿಸಿದ ನಂತರ ಜ್ಯೂಸ್ ಕುಡಿಯಬೇಕು. ಇದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಸಮತೋಲನ ಕಾಪಾಡಿಕೊಳ್ಳಲಾಗುತ್ತದೆ ಮತ್ತು ಚಹಾದ ಅಭ್ಯಾಸವನ್ನು ಬಿಡುವುದು ಸುಲಭ.
ನಿಮಗೆ ಚಹಾದ ಚಟವಿದ್ದರೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ. ಚಹಾದ ಚಟ ಬಿಡಬೇಕೆಂದರೆ ನೀವು ಪ್ರತಿದಿನ ಅದನ್ನು ಸೇವಿಸುವ ಪ್ರಮಾಣವನ್ನು ಸೇವಿಸಬೇಕು. ದಿನಕ್ಕೆ ನೀವು ಮೂರ್ನಾಲ್ಕು ಬಾರಿ ಚಹಾ ಸೇವಿಸುತ್ತಿದ್ದರೆ ಅದನ್ನು ದಿನದಿಂದ ದಿನಕ್ಕೆ ಕಡಿಮೆ ಮಾಡಬೇಕು. ಅಂದರೆ ಬೆಳಗ್ಗೆ ಒಂದು ಸಂಜೆ ಒಂದು ಚಹಾ ಸೇವಿಸಬೇಕು. ಆನಂತರ ದಿನಕ್ಕೆ ಒಂದು ಬಾರಿ ಮಾತ್ರ ಚಹಾ ಸೇವಿಸಬೇಕು. ನಂತರ ಅದನ್ನು ಬಿಟ್ಟು ಗ್ರೀನ್ ಟೀ ಅಥವಾ ಲೆಮನ್ ಟೀ ಸೇವಿಸುವುದನ್ನು ರೂಢಿಸಿಕೊಳ್ಳಬಹುದು.