ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿಡುವ ಕೆಲವು ಫೋಟೋಗಳು ಮನೆಯಲ್ಲಿ ನಕಾರಾತ್ಮಕತೆಯನ್ನು ಆಹ್ವಾನಿಸುತ್ತವೆ. ಮಾತ್ರವಲ್ಲ, ಸಂಬಂಧಗಳ ನಡುವೆ ಬಿರುಕುಂಟಾಗುವಂತೆ ಮಾಡುತ್ತವೆ ಎಂದು ನಂಬಲಾಗಿದೆ. ಅಂತಹ ಫೋಟೋಗಳು ಯಾವುವು ತಿಳಿಯೋಣ...
ಹಿಂದೂ ಧರ್ಮದಲ್ಲಿ ಜ್ಯೋತಿಷ್ಯ ಶಾಸ್ತ್ರದಂತೆಯೇ ವಾಸ್ತು ಶಾಸ್ತ್ರಕ್ಕೂ ಕೂಡ ಬಹಳ ಮಹತ್ವವಿದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ವಸ್ತುಗಳು ಕೂಡ ಸಂಬಂಧಗಳ ಮೇಲೆ ಪ್ರಭಾವಬೀರುತ್ತದೆ. ಮಾತ್ರವಲ್ಲ, ಇದು ವಾಸ್ತು ದೋಷಕ್ಕೂ ಕಾರಣವಾಗಬಹುದು. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿಡುವ ಕೆಲವು ಫೋಟೋಗಳು ಮನೆಯಲ್ಲಿ ನಕಾರಾತ್ಮಕತೆಯನ್ನು ಆಹ್ವಾನಿಸುತ್ತವೆ. ಮಾತ್ರವಲ್ಲ, ಸಂಬಂಧಗಳ ನಡುವೆ ಬಿರುಕುಂಟಾಗುವಂತೆ ಮಾಡುತ್ತವೆ ಎಂದು ನಂಬಲಾಗಿದೆ. ಅಂತಹ ಫೋಟೋಗಳು ಯಾವುವು ತಿಳಿಯೋಣ...
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮಕ್ಕಳು ಅತ್ತರೂ ಚಂದ, ನಕ್ಕರೂ ಚಂದ. ಹಾಗಂತ, ಅಳುವ ಮಕ್ಕಳ ಚಿತ್ರವನ್ನು ಮನೆಯಲ್ಲಿಡುವುದು ವಾಸ್ತು ದೋಷಕ್ಕೆ ಕಾರಣವಾಗಬಹುದು. ವಾಸ್ತು ಶಾಸ್ತ್ರದ ಪ್ರಕಾರ, ಅಳುವ ಮಗುವಿನ ಚಿತ್ರವನ್ನು ಮನೆಯಲ್ಲಿ ಇಡುವುದರಿಂದ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಇದು ಮನೆಯ ಸದಸ್ಯರ ನಡುವಿನ ಸಂಬಂಧದ ಮೇಲೂ ಪರಿಣಾಮ ಬೀರುತ್ತದೆ ಎನ್ನಲಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ, ಸೂರ್ಯಾಸ್ತದ ಚಿತ್ರವನ್ನು ಮನೆಯಲ್ಲಿ ಹಾಕುವುದು ಅಮಂಗಳಕರ. ಇದು ಮನೆಯಲ್ಲಿ ನಕಾರಾತ್ಮಕತೆಯನ್ನು ತರುತ್ತದೆ ಎಂದು ಹೇಳಲಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕ್ರೂರ ಮೃಗಗಳ ಕಲಾಕೃತಿಯನ್ನು ಇಡುವುದರಿಂದ ಅದು ಮನೆಯಲ್ಲಿ ಉದ್ವಿಗ್ನ ಮತ್ತು ಜಗಳದ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ಹೇಳಲಾಗುತ್ತದೆ.
ಮನೆಯಲ್ಲಿ ಹರಿಯುವ ನೀರಿನ ಚಿತ್ರ ಇಡುವುದರಿಂದ ಆರ್ಥಿಕ ನಷ್ಟ ಉಂಟಾಗುತ್ತದೆ. ಇಂತಹ ಚಿತ್ರ ಇರುವ ಮನೆಯಲ್ಲಿ ಎಷ್ಟೇ ಸಂಪಾದಿಸಿದರೂ ಕೂಡ ಹಣ ನೀರಿನಂತೆ ಖರ್ಚಾಗುತ್ತದೆ ಎಂದು ಹೇಳಲಾಗುತ್ತದೆ.
ಮನೆಯಲ್ಲಿ ಎಂದಿಗೂ ಮುಳ್ಳಿನ ಸಸ್ಯಗಳ ಚಿತ್ರವನ್ನು ಇಡಲೇಬಾರದು. ಇವು ಮನೆಯವರ ನಡುವೆ ಜಗಳವನ್ನು ಸೃಷ್ಟಿಸುತ್ತವೆ ಎಂದು ಹೇಳಲಾಗುತ್ತದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಗಳನ್ನು ಮಾತ್ರ ಆಧರಿಸಿದೆ. ಇದನ್ನು Zee ನ್ಯೂಸ್ ಕನ್ನಡ ಖಚಿತಪಡಿಸುವುದಿಲ್ಲ.