Mohammad Siraj: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಪರ ಆಡಿದ ಮೊಹಮ್ಮದ್ ಸಿರಾಜ್, 'ಆಸ್ಟ್ರೇಲಿಯಾದಲ್ಲಿರುವ ಇತರ ಆಟಗಾರರ ಕೊಠಡಿಗಳಿಗೆ ಯಾರೂ ಹೋಗುವಂತಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನಾವು ವೀಡಿಯೊ ಕರೆಗಳಲ್ಲಿ ಮಾತನಾಡುತ್ತಿದ್ದೆವು” ಎಂದು ಹೇಳುವ ಮೂಲಕ ತಮ್ಮ ನೋವಿನ ಅನುಭವವನ್ನು ಹೇಳಿದ್ದಾರೆ.
ಟೀಂ ಇಂಡಿಯಾದ ವೇಗಿಗಳ ದಾಳಿಯನ್ನು ಮುನ್ನಡೆಸಿದ್ದ ಮೊಹಮ್ಮದ್ ಸಿರಾಜ್, ಆಸ್ಟ್ರೇಲಿಯಾ ಪ್ರವಾಸದ ವೇಳೆ ತಂದೆಯ ಸಾವಿನ ನಂತರ ತಮಗಾದ ಅನುಭವವನ್ನು ಹೇಳಿದ್ದಾರೆ. ಆ ಸಂದರ್ಭದಲ್ಲಿ ಕೊರೊನಾ ಕಾರಣದಿಂದ 'ಬಯೋ-ಬಬಲ್' ನಲ್ಲಿದ್ದರು. ಒಂದು ಕಡೆ ತಂದೆಯನ್ನೂ ನೋಡೋಕಾಗದ ನೋವಿನಲ್ಲಿ ತಮ್ಮ ಕೋಣೆಯಲ್ಲಿ ಆಗಾಗ್ಗೆ ಅಳುತ್ತಿದ್ದರು ಎಂದು ಹೇಳಿದರು. ಸಿರಾಜ್ ಅವರ ತಂದೆ ಮೊಹಮ್ಮದ್ ಗೌಸ್ ನವೆಂಬರ್ 2020 ರಲ್ಲಿ ನಿಧನರಾದರು.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಪರ ಆಡಿದ ಮೊಹಮ್ಮದ್ ಸಿರಾಜ್, 'ಆಸ್ಟ್ರೇಲಿಯಾದಲ್ಲಿರುವ ಇತರ ಆಟಗಾರರ ಕೊಠಡಿಗಳಿಗೆ ಯಾರೂ ಹೋಗುವಂತಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನಾವು ವೀಡಿಯೊ ಕರೆಗಳಲ್ಲಿ ಮಾತನಾಡುತ್ತಿದ್ದೆವು” ಎಂದು ಹೇಳುವ ಮೂಲಕ ತಮ್ಮ ನೋವಿನ ಅನುಭವವನ್ನು ಹೇಳಿದ್ದಾರೆ.
ಆರ್ಸಿಬಿ 'ಸೀಸನ್ 2 ಪಾಡ್ಕ್ಯಾಸ್ಟ್' ನಲ್ಲಿ ಸಿರಾಜ್ ಮಾತನಾಡಿದ್ದು, 'ಭಾರತದ ಮಾಜಿ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಸರ್ ಅವರು ತಮ್ಮ ಯೋಗಕ್ಷೇಮವನ್ನು ಫೋನ್ನಲ್ಲಿ ಕೇಳುತ್ತಿದ್ದರು. ಹೇಗಿದ್ದೀಯ, ಏನು ತಿಂದೆ ಎಂದು ಕೇಳುತ್ತಿದ್ದರು. ಇದರಿಂದ ನನಗೆ ಒಳ್ಳೆಯದಾಯಿತು. ಆ ಸಮಯದಲ್ಲಿ ನನ್ನ ಭಾವಿ ಪತ್ನಿ ಕೂಡ ನನ್ನೊಂದಿಗೆ ಫೋನ್ನಲ್ಲಿ ಮಾತನಾಡಿ ಪ್ರೋತ್ಸಾಹಿಸುತ್ತಿದ್ದಳು” ಎಂದು ಹೇಳಿದರು.
ಘಟನೆಯನ್ನು ವಿವರಿಸುತ್ತಾ, "ನಾನು ಎಂದಿಗೂ ಫೋನ್ನಲ್ಲಿ ಅಳಲಿಲ್ಲ ಆದರೆ ನಾನು ಕೋಣೆಯಲ್ಲಿ ಅಳುತ್ತಾ, ನನ್ನ ಭಾವಿ ಪತ್ನಿಯೊಂದಿಗೆ ಮಾತನಾಡಿದ ಹಲವು ಸಂದರ್ಭಗಳಿವೆ" ಎಂದು ಹೇಳಿದರು.
'ನನ್ನ ತಂದೆಯ ಮರಣದ ಮರುದಿನ ನಾನು ಮೈದಾನಕ್ಕೆ ಇಳಿದಿದ್ದೆ. ತಂದೆಯ ಆಶೀರ್ವಾದ ನಿನ್ನ ಮೇಲಿದೆ. ನೀನು 5 ವಿಕೆಟ್ಗಳನ್ನು ಪಡೆಯುತ್ತೀಯ ಎಂದು ರವಿಶಾಸ್ತ್ರಿ ಹೇಳಿದ್ದರು. ಅದರಂತೆ ನಾನು ಬ್ರಿಸ್ಬೇನ್ ಮೈದಾನದಲ್ಲಿ 5 ವಿಕೆಟ್ ಪಡೆದಾಗ, ನೋಡು ನನ್ನ ಮಾತು ನಿಜವಾಯಿತು ಎಂದು ಹೇಳಿದರು” ಎಂದರು.