ಜನರು ತಾವು ಯಾವುದೇ ಲ್ಯಾಪ್‌ಟಾಪ್ ಖರೀದಿಸಿದರೂ ಅದು ತೆಳ್ಳಗಿರಬೇಕು ಮತ್ತು ಹಗುರವಾಗಿರಬೇಕೆಂದು ಬಯಸುತ್ತಾರೆ.
ಇಂದಿನ ಕಾಲದಲ್ಲಿ ಲ್ಯಾಪ್‌ಟಾಪ್(Laptop)ಗಳ ಅಗತ್ಯತೆ ತುಂಬಾ ಹೆಚ್ಚಾಗಿದೆ. ಕೋವಿಡ್(COVI-19)ನಿಂದ ಶಾಲಾ ಮತ್ತು ಕಾಲೇಜಿಗೆ ಹೋಗಿ ಓದುತ್ತಿದ್ದ ಮಕ್ಕಳು ಈಗ ಲ್ಯಾಪ್‌ಟಾಪ್ ಪರದೆಯ ಮುಂದೆ ಕುಳಿತು ಅಧ್ಯಯನ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಲ್ಯಾಪ್‌ಟಾಪ್‌ಗಳ ಬೇಡಿಕೆ ಹೆಚ್ಚಿನ ಏರಿಕೆ ಕಂಡಿದೆ. ಜನರು ತಾವು ಯಾವುದೇ ಲ್ಯಾಪ್‌ಟಾಪ್ ಖರೀದಿಸಿದರೂ ಅದು ತೆಳ್ಳಗಿರಬೇಕು ಮತ್ತು ಹಗುರವಾಗಿರಬೇಕೆಂದು ಬಯಸುತ್ತಾರೆ. ವಿದ್ಯಾರ್ಥಿಗಳಿಗೆ ಇಷ್ಟವಾಗುವ ಹಾಗೂ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವ ಟಾಪ್ ಲ್ಯಾಪ್‌ಟಾಪ್(Student Laptops)ಗಳ ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಈ ಪಟ್ಟಿಯಲ್ಲಿ ಇದು ಅತ್ಯಂತ ಅಗ್ಗದ ಲ್ಯಾಪ್ ಟಾಪ್ ಮತ್ತು ಇದರ ಬೆಲೆ ಕೇವಲ 26,999 ರೂ. ಈ 2 ಇನ್ 1 ಡಿಟ್ಯಾಚೇಬಲ್ ಲ್ಯಾಪ್ ಟಾಪ್ USI ಸ್ಟೈಲಸ್ ಅನ್ನು ಬೆಂಬಲಿಸುತ್ತದೆ. 10.1 ಇಂಚಿನ FHD IPS ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಇದರ ತೂಕದ ಬಗ್ಗೆ ಹೇಳುವುದಾದರೆ ಇದು ಕೇವಲ 450 ಗ್ರಾಂ ಇದೆ. ಲ್ಯಾಪ್‌ಟಾಪ್‌ನ 7,000 mAh ಬ್ಯಾಟರಿಯು 10 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ.
ಈ HP ಲ್ಯಾಪ್‌ಟಾಪ್ ಬೆಲೆ 76,990 ರೂ. ಇದು ಎಎಮ್‌ಡಿ ರೇಡಾನ್ ಇಂಟಿಗ್ರೇಟೆಡ್ ಗ್ರಾಫಿಕ್ಸ್ ನೊಂದಿಗೆ ಬರುತ್ತದೆ. ಇದರ 13.3 ಇಂಚಿನ ಓರೆಯಾದ ಪರದೆಯು IPS, ಮೈಕ್ರೋ EDGE, 100% sRGB ಮತ್ತು ಆಂಟಿ-ಗ್ಲೇರ್ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಲ್ಯಾಪ್‌ಟಾಪ್ 970 ಗ್ರಾಂ ತೂಗುತ್ತದೆ ಮತ್ತು ಮೈಕ್ರೋಸಾಫ್ಟ್ ಆಫೀಸ್ ಹೋಮ್ ಮತ್ತು Student 2019 ರಲ್ಲಿ ಲಭ್ಯವಿರುತ್ತದೆ.
86,368 ರೂ. ಬೆಲೆಯ ಈ ಟಚ್‌ಸ್ಕ್ರೀನ್ 2 ಇನ್ 1 ಲ್ಯಾಪ್‌ಟಾಪ್ 770 ಗ್ರಾಂ ತೂಗುತ್ತದೆ ಮತ್ತು ಸರಾಸರಿ 10.5 ಗಂಟೆಗಳ ಬ್ಯಾಟರಿ ಬಾಳಿಕೆ ಬರುತ್ತದೆ. ಈ ಲ್ಯಾಪ್ಟಾಪ್ 12.3 ಇಂಚಿನ 2736 x 1824 ಪಿಕ್ಸೆಲ್ ಸೆನ್ಸ್ ಡಿಸ್ಪ್ಲೇಯನ್ನು ಹೊಂದಿದೆ.
ನೀವು ಈ Asus ಲ್ಯಾಪ್ ಟಾಪ್ ಅನ್ನು 96,384 ರೂ.ಗೆ ಮನೆಗೆ ತೆಗೆದುಕೊಂಡು ಹೋಗಬಹುದು. ಇದು 14 ಇಂಚಿನ ಎಲ್ಇಡಿ-ಬ್ಯಾಕ್ಲಿಟ್ FHD ಡಿಸ್ಪ್ಲೇ ಮತ್ತು 60Haz ಆಂಟಿ-ಗ್ಲೇರ್ ಪ್ಯಾನಲ್ ಹೊಂದಿದೆ. ಇದು 990 ಗ್ರಾಂ ತೂಗುತ್ತದೆ. Windows 10 Homeನ ಜೀವಮಾನದ ಮಾನ್ಯತೆಯೊಂದಿಗೆ ಇದು ಲಭ್ಯವಿದೆ.
ಈ ಪಟ್ಟಿಯಲ್ಲಿಯೇ ಇದು ಅತ್ಯಂತ ದುಬಾರಿ ಲ್ಯಾಪ್ ಟಾಪ್ ಆಗಿದ್ದು, ಇದರ ಬೆಲೆ 1,17,490 ರೂ. ಇದೆ. ಈ ಫೆದರ್‌ಲೈಟ್ ತೂಕದ ಲ್ಯಾಪ್‌ಟಾಪ್ ಕ್ವಾಡ್ ಎಚ್‌ಡಿ, ಆಂಟಿ-ಗ್ಲೇರ್, ಐಪಿಎಸ್ ತಂತ್ರಜ್ಞಾನದೊಂದಿಗೆ 13.3 ಇಂಚಿನ ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಡಾಲ್ಬಿ ವಿಷನ್ ಮತ್ತು ಅಲ್ಟ್ರಾ ಬಾಳಿಕೆ ಬರುವ ಶಕ್ತಿ ಇದರ ವಿಶೇಷ ವೈಶಿಷ್ಟ್ಯಗಳಾಗಿವೆ.